ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬ್ರಿ ಧ್ವಂಸಕ್ಕೆ ಕಾಂಗ್ರೆಸ್ ಹೊಣೆ : ಯೆಚೂರಿ

By Cong failed to protect Babri mosque demolition: Yechury
|
Google Oneindia Kannada News

ಪಾಟ್ನಾ, ಏ. 28 : ಕೇಂದ್ರದ ರೈಲು ಮಂತ್ರಿ ಲಾಲು ಪ್ರಸಾದ್ ಯಾದವ್ ಹಾಗೂ ಲೋಕಜನಶಕ್ತಿ ಪಕ್ಷದ ಮುಖಂಡ ರಾಂವಿಲಾಸ್ ಪಾಸ್ವಾನ್ ನಂತರ ಎಡಪಕ್ಷಗಳ ಮುಖಂಡ ಸೀತಾರಾಂ ಯೆಚೂರಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವೇ ನೇರ ಹೊಣೆಗಾರ ಎಂದು ಅವರು ಆರೋಪಿಸಿದ್ದಾರೆ.

ಅಂದು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಪಿ ವಿ ನರಸಿಂಹರಾವ್ ಪ್ರಧಾನಿಯಾಗಿದ್ದರು. ಬಾಬ್ರಿ ಮಸೀದಿಗೆ ಸೂಕ್ತ ರಕ್ಷಣೆ ನೀಡುವುದನ್ನು ಬಿಟ್ಟು ಕಾಂಗ್ರೆಸ್ ಬಿಜೆಪಿಯೊಂದಿಗೆ ಶಾಮೀಲಾಗಿದ್ದರಿಂದ ಬಾಬ್ರಿ ಧ್ವಂಸಕ್ಕೆ ಕಾರಣವಾಯಿತು ಎಂದು ಯೆಚೂರಿ ಟೀಕಿಸಿದರು. ಬಿಜೆಪಿ ಪಕ್ಷದ ನೇತೃತ್ವದಲ್ಲಿ ನಡೆದ ಬಾಬ್ರಿ ನಡೆಸಿದ ಕೃತ್ಯ ರಾಷ್ಟ್ರೀಯ ಅವಮಾನ. ಇದರಲ್ಲಿ ಕಾಂಗ್ರೆಸ್ ಪಾಲೂ ಬಿಜೆಪಿಯಷ್ಟೆ ಇದೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಪರವಾಗಿದ್ದೇವೆ ಎಂದು ಸುಳ್ಳು ಹೇಳುತ್ತಾ ಕಾಂಗ್ರೆಸ್ ಆಡಳಿತ ನಡೆಸಿದೆ ವಿನಃ ಎಂದಿಗೂ ಆಸಮುದಾಯ ಏಳ್ಗೆಗೆ ಕಿಂಚತ್ತೂ ಚಿಂತನೆ ನಡೆಸಲಿಲ್ಲ ಎಂದು ಯೆಚೂರಿ ದೂರಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X