ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಬ್ ಬಾಲಾಪರಾಧಿ : ಪರೀಕ್ಷೆಗೆ ಕೋರ್ಟ್ ಆದೇಶ

By Staff
|
Google Oneindia Kannada News

Kasab
ಮುಂಬೈ, ಏ. 24 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನ ವಯಸ್ಸಿನ ಸಮಸ್ಯೆ ಎದುರಾಗಿದೆ. ಕಸಬ್ ಬಾಲಾಪರಾಧಿಯಾಗಿದ್ದು, ಆತನನ್ನು ಬಾಲಾಪರಾಧಿ ನ್ಯಾಯಾಲಯದಡಿ ವಿಚಾರಣೆ ನಡೆಸಬೇಕು ಎಂದು ಕಸಬ್ ಪರ ವಕೀಲ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು ಮುಂಬೈ ವಿಶೇಷ ನ್ಯಾಯಾಲಯ ವೈದ್ಯಕೀಯ ತಪಾಸಣೆಗೆ ಆದೇಶಿಸಿದೆ. ಏಪ್ರಿಲ್ 28ರೊಳಗೆ ಆ ಬಗ್ಗೆ ಸಮಗ್ರ ವರದಿ ನೀಡುವಂತೆ ನ್ಯಾಯಾಲಯ ತಿಳಿಸಿದೆ.

ಕಸಬ್ ಪರ ವಕೀಲ ಅಬ್ಬಾಸ್ ಕಜ್ಮಿ ಅವರು ಮುಂಬೈ ವಿಶೇಷ ನ್ಯಾಯಾಲಯದ ಎದುರು ಕಸಬ್ ಬಾಲಾಪರಾಧಿಯಾಗಿದ್ದು, ಆತನನ್ನು ಬಾಲಾಪರಾಧಿ ನ್ಯಾಯಾಲಯದ ಎದುರು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮುಂಬೈ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ ಎಲ್ ತೆಹಲಿಯಾನಿ ಅವರು ಕಸಬ್ ನ ದಂತ ಹಾಗೂ ಮೊಳೆ ಪರೀಕ್ಷಿಸಲು ವೈದ್ಯಕೀಯ ತಪಾಸಣೆಗೆ ವಹಿಸಿದ್ದಾರೆ. ಏಪ್ರಿಲ್ 28ರೊಳಗೆ ವರದಿ ನೀಡುವಂತೆ ಅವರು ತಿಳಿಸಿದ್ದಾರೆ.

ಕಸಬ್ ನ ದಂತ ಮತ್ತು ಮೊಳೆ ಪರೀಕ್ಷಿಸಿ ನಿಖರವಾದ ವಯಸ್ಸು ತಿಳಿಸಲು ನ್ಯಾಯಾಲಯ ಸಂಬಂಧಪಟ್ಟವರಿಗೆ ತಿಳಿಸಿದೆ. ಒಂದು ವೇಳೆ ಕಸಬ್ ಬಾಲಾಪರಾಧಿ ಎಂದು ಸಾಬೀತಾದಲ್ಲಿ ಕಸಬ್ ನ ಕೇವಲ 3 ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕಸಬ್ ಪರ ವಕೀಲ ಅಬ್ಬಾಸ್ ಕಜ್ಮಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಈ ಮಧ್ಯೆ ಸರಕಾರಿ ವಕೀಲ ಉಜ್ವಲ್ ನಿಕ್ಕಂ ಅವರು ಮುಂಬೈ ದಾಳಿಗೆ ಸಂಬಂಧಿಸಿದಂತೆ ಸಲ್ಲಿಸಿದ ದೋಷರೋಪ ಪಟ್ಟಿಯಲ್ಲಿ ಕಸಬ್ ನ ನಿಖರವಾದ ವಯಸ್ಸನ್ನು ದಾಖಲಿಸಲಾಗಿದೆ. ಅದೇ ದಾಖಲೆಯನ್ನು ಪರಿಗಣಿಸಬೇಕು ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X