ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ ಲೋಕಸಭೆ ಕ್ಷೇತ್ರದ ಪರಿಚಯ

By Staff
|
Google Oneindia Kannada News

ಬೆಂಗಳೂರು, ಏ. 21 : ಮಾಜಿ ಮುಖ್ಯಮಂತ್ರಿ ಜೆ ಎಚ್ ಪಟೇಲರನ್ನು ಕೊಡುಗೆಯಾಗಿ ನೀಡಿದ ಜನತಾ ಪರಿವಾರ ಈಗ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಈ ಕ್ಷೇತ್ರದ ಮಟ್ಟಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನದ್ದೇ ಕಾರುಬಾರು. ಇಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಸಿದ್ದೇಶ್ ಅವರೇ ಅವರವರ ಪಕ್ಷಗಳ ಹೈಕಮಾಂಡ್. ಒಂದು ಕಾಲದಲ್ಲಿ ಕೆಂಪು ಬಾವುಟಗಳಿಗೆ (ಕಮ್ಯೂನಿಸ್ಟ್) ಹೆಸರಾಗಿದ್ದ ದಾವಣಗೆರೆ ಈಗ ಬರೀ ಎರಡು ಪಕ್ಷಗಳ ನಡುವೆ ನೇರ ಹಣಾಹಣಿಗೆ ವೇದಿಕೆಯಾಗಿದೆ. ಇಲ್ಲಿ ಲಿಂಗಾಯಿತ ಮತದಾರರ ಪ್ರಾಬಲ್ಯ. ನಂತರ ಕುರುಬರು, ಯಾದವರು, ಮುಸ್ಲಿಂ ಮತ್ತು ಇತರರು.

1996ರ ವರೆಗೆ ಇದು ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಮೊದಲಬಾರಿಗೆ 1996ರಲ್ಲಿ ಬಿಜೆಪಿಯಿಂದ ಮಲ್ಲಿಕಾರ್ಜುನಪ್ಪ ಜಯಗಳಿಸುವುದರ ಮೂಲಕ ಬಿಜೆಪಿ ತನ್ನ ಖಾತೆ ತೆರೆಯಿತು. ಜಿಲ್ಲೆಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಬಿಜೆಪಿ ಶಾಸಕರಿದ್ದಾರೆ. ಇಲ್ಲಿ ಜನತಾದಳದಿಂದ ಪ್ರಬಲ ಸ್ಪರ್ಧಿಗಳಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿರುವುದರಿಂದ ಕುರುಬರ ಮತ ಕಾಂಗ್ರೆಸ್ ಪಾಲಾಗಬಹುದು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಇಲ್ಲಿಂದಲೇ ಪಕ್ಷದ ಚುನಾವಣಾ ಪ್ರಚಾರ ಆರಂಭಿಸಿದ್ದರು.

ಕೃಷಿ, ತೋಟಗಾರಿಕೆ ಜೊತೆಗೆ ವಾಣಿಜ್ಯ ಪ್ರಧಾನ ಜಿಲ್ಲೆಯಲ್ಲಿ ಶೇ. 60ರಷ್ಟು ಜನ ಕೃಷಿಕರು. ಭತ್ತ, ಮೆಕ್ಕೆ ಜೋಳ,ಅಡಿಕೆ, ಕಬ್ಬು, ವೀಳ್ಯದೆಲೆ ಇಲ್ಲಿನ ಪ್ರಮುಖ ಬೆಳೆ. ಭದ್ರಾ ಜಲಾಶಯ ಜಿಲ್ಲೆಯ ಜೀವನದಿ. ಹರಿಹರೇಶ್ವರ ದೇವಸ್ಥಾನ, ಸೂಳೆಕೆರೆ, ಎಲೇಬೇತೂರು, ಆನೆಕೊಂಡ, ಸಂತೇಬೆನ್ನೂರು, ಪುಷ್ಕರಣಿ, ಉಚ್ಚಂಗಿ ದರ್ಗಾ, ಮುಂತಾದ ಐತಿಹಾಸಿಕ ಸ್ಥಳಗಳಿವೆ. ಕಿರ್ಲೋಸ್ಕರ್ ಮತ್ತು ಸೋನಾಲ್ಕರ ಕಾರ್ಖಾನೆ ಮುಚ್ಚಿದ ನಂತರ ಜಿಲ್ಲೆಯಲ್ಲಿ ಕೈಗಾರಿಕೆಗೆ ಹಿನ್ನಡೆ ಉಂಟಾಗಿದೆ.

* ಕ್ಷೇತ್ರ - ದಾವಣಗೆರೆ
* ಚುನಾವಣೆ ದಿನಾ೦ಕ - ಎಪ್ರಿಲ್ 30

ಕಣದಲ್ಲಿರುವ ಅಭ್ಯರ್ಥಿಗಳು

* ಕಾ೦ಗ್ರೆಸ್ - ಎಸ್ ಎಸ್ ಮಲ್ಲಿಕಾರ್ಜುನ
* ಬಿಜೆಪಿ - ಜಿ ಎಂ ಸಿದ್ದೇಶ್

ಒಟ್ಟು ಮತದಾರರು - 13.07 ಲಕ್ಷ

* ಪುರುಷರು - 6.72 ಲಕ್ಷ
* ಮಹಿಳೆಯರು - 6.34 ಲಕ್ಷ

ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳು

* ಹರಪನಹಳ್ಳಿ
* ಜಗಳೂರು
* ದಾವಣಗೆರೆ ಉತ್ತರ
* ದಾವಣಗೆರೆ ದಕ್ಷಿಣ
* ಹರಿಹರ
* ಮಾಯಕೊಂಡ
* ಹೊನ್ನಾಳಿ
* ಚನ್ನಗಿರಿ

ಜಾತಿವಾರು ಲೆಕ್ಕಾಚಾರ (ಅಂದಾಜು)

* ಲಿ೦ಗಾಯಿತರು 4.5 ಲಕ್ಷ
* ಎಸ್ ಸಿ 1.5 ಲಕ್ಷ
* ಎಸ್ ಟಿ 1.25 ಲಕ್ಷ
* ಕುರುಬ 2.20 ಲಕ್ಷ
* ಒಬಿಸಿ 1.25 ಲಕ್ಷ
* ಮುಸ್ಲಿ೦ 1.5 ಲಕ್ಷ
* ಇತರೆ 85 ಸಾವಿರ

ಕ್ಷೇತ್ರದ ಸಮಸ್ಯೆಗಳು

* ದಾವಣಗೆರೆ - ಚಿತ್ರದುರ್ಗ - ಬೆಂಗಳೂರು ರೈಲು ಮಾರ್ಗ.
* ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ.
* ಅರ್ಧದಲ್ಲೇ ನಿಂತಿರುವ ನೀರಾವರಿ ಯೋಜನೆಗಳು
* ಗ್ರಾಮೀಣ ಪ್ರದೇಶಗಳ ಹದೆಗೆಟ್ಟ ರಸ್ತೆಗಳು
* ಫ್ಲೋರೈಡ್ ಮುಕ್ತ ನೀರು ಸರಬರಾಜು

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X