• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೇಟೆ ಐಟಿಯಿಂದ ಹಳ್ಳಿ ಐಟಿಗೆ ಬಂದ ಜನಾರ್ಧನ ಸ್ವಾಮಿ

By Super Admin
|

ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಹಳೆ ತಲೆಗಳ ನಡುವೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ತಂದು ಅಖಾಡಕ್ಕಿಳಿಸಿವೆ. ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ವ್ಯಕ್ತಿಯೊಬ್ಬರು ಅಮೆರಿಕದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು, ತಿಂಗಳಿಗೆ ಲಕ್ಷಾಂತರ ರುಪಾಯಿ ಸಂಬಳದ ಕೆಲಸವನ್ನು ಬಿಟ್ಹಾಕಿ ಜನಸೇವೆ ಮಾಡಲು ಮುಂದಾಗಿದ್ದಾರೆ. ನಿಮಗಿಗಾಗಲೇ ಗೊತ್ತಾಗಿರಬಹುದು. ಹೌದು ನಿಮ್ಮ ಊಹೆ ಸರಿಯಾಗಿದೆ. ಅವರೇ ಜನಾರ್ದನಸ್ವಾಮಿ. ಚಿತ್ರದುರ್ಗ (ಮೀಸಲು) ಲೋಕಸಭೆ ಕ್ಷೇತ್ರದ ಭಾರತೀಯ ಜನತಾ ಪಕ್ಷ ಹುರಿಯಾಳು.

ರಾಜಕೀಯ ಅಂದಾಕ್ಷಣ ಸುಶಿಕ್ಷಿತರು, ವಿದ್ಯಾವಂತರು, ಸಾಧಕರು ದೂರು ದೂರು ಹೋಗುತ್ತಿದ್ದ ಕಾಲಕ್ಕೆ ಅಂತ್ಯ ಹಾಡುವ ಸಮಯದ ಬಂದಿದೆ ಎಂದು ಕಾಣಿಸುತ್ತೆ. ದೂರದ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಸ್ವಾಮಿ ಅವರು, ವಿದೇಶಿ ನೆಲಕ್ಕೆ ನನ್ನ ಸೇವೆ ಸಾಕು. ತಾಯ್ನಾಡಿಗೆ, ನನ್ನ ಹುಟ್ಟೂರಿನ ಅಭಿವೃದ್ಧಿಗೆ ಏನಾದರೂ ಸೇವೆ ಮಾಡಬೇಕು ಎಂಬ ಏಕೈಕ ಹಂಬಲದೊಂದಿಗೆ ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಕಳ್ಳಹಟ್ಟಿ ಗ್ರಾಮದ ಜನಾರ್ದನಸ್ವಾಮಿ ಅಪ್ಪಟ ಗ್ರಾಮೀಣ ಪ್ರತಿಭೆ. ಗ್ರಾಮೀಣ ಒಡನಾಟದಲ್ಲಿ ಬೆಳೆದ ಸ್ವಾಮಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ದಾವಣಗೆರೆ ಮತ್ತು ಚಿತ್ರದುರ್ಗ ಸರ್ಕಾರಿ ಶಾಲೆಯಲ್ಲಿ ಮುಗಿಸಿದರು. ದಾವಣಗೆರೆಯ ಯುಬಿಡಿಟಿ ಇಂಜನಿಯರಿಂಗ್ ಕಾಲೇಜಿನಲ್ಲಿ ಪದವಿ ನಂತರ ಅವರು ಭಾರತದ ಪ್ರತಿಷ್ಠಿತ ವಿಜ್ಞಾನ ಕೇಂದ್ರವಾದ ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಎಲೆಕ್ಟ್ರೀಕಲ್ ಕಮ್ಯುನಿಕೇಷನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ವಿಶ್ವ ಪ್ರಖ್ಯಾತ ತಂತ್ರಜ್ಞಾನ ಸ್ಥಳ ಸಿಲಿಕಾನ್ ವ್ಯಾಲಿಯಲ್ಲಿ ಕಳೆದ ಹತ್ತು ವರ್ಷದಿಂದ ಕೆಲಸ ಮಾಡಿದ್ದಾರೆ. ಅಮೆರಿಕದ ಸನ್ ಮೈಕ್ರೋಸಿಸ್ಟಮ್ ಕಂಪನಿಯಲ್ಲಿ ಮುಖ್ಯ ಇಂಜಿನಿಯರ್ ಆಗಿ ಅಲ್ಲಿನ ದೊಡ್ಡದೊಂದು ತಂಡವನ್ನು ಮುನ್ನೆಡೆಸಿದ್ದರು. ಆ ತಂಡದಲ್ಲಿರುವವರ ಪೈಕಿ ವಯಸ್ಸಿನಲ್ಲಿ ಇವರೇ ಅತೀ ಕಿರಿಯರು ಆಗಿದ್ದುದು ಇವರ ಪ್ರತಿಭೆಗೆ ಸಾಕ್ಷಿ. ಅತ್ಯಂತ ಆಧುನಿಕ ತಾಂತ್ರಿಕ ವಿಷಯಗಳಾದ ಚಿಪ್ ಡಿಸೈನ್ ನಂತಹ ವಿಷಯದಲ್ಲಿಯೇ ಹೊಸ ಸಂಶೋಧನೆ ಮಾಡಿ ಅಮೆರಿಕದ ಸರ್ಕಾರದಿಂದ ಪೇಟೆಂಟ್ ಸಹ ಗಳಿಸಿದ್ದಾರೆ. ಇವರ ಇನ್ನೂ ಅನೇಕ ಪ್ರಮುಖ ಸಂಶೋಧನೆಗಳು ಅಂತಹ ಪೇಟೆಂಟ್ ಗೆ ಈಗಾಗಲೇ ಕಾಯುತ್ತಿವೆ.

ಇಂತಹ ಮುಂದುವರೆದ ದಿನಗಳಲ್ಲಿಯೂ ಭಾರತದ ಹಳ್ಳಿಗಳ ಸ್ಥಿತಿಗತಿ, ರೈತ ಕುಟುಂಬದಿಂದ ಬಂದ ಇವರನ್ನು ಸದಾ ಕಾಡುತ್ತಿತ್ತು. ರೈತರ ಬದುಕು ದಿನದಿನಕ್ಕೆ ಕುಸಿಯತೊಡಗಿರುವುದು, ನೂತನ ಕೃಷಿ ಪದ್ಧತಿ ಅಳವಡಿಕೆ ವಿಷಯದಲ್ಲಿ ರೈತರ ಉದಾಸೀನತೆ ಇಂದು ಭಾರತದ ಅಭಿವೃದ್ಧಿಗೆ ಕಂಟಕವಾಗಿವೆ ಎನ್ನುವುದು ಇವರ ಅಭಿಪ್ರಾಯವಾಗಿದೆ. ಅನೇಕ ದೇಶದಲ್ಲಿ ಕೆಲಸ ಮಾಡಿ ಗಳಿಸಿರುವ ಅಪಾರ ಅನುಭವದೊಂದಿಗೆ ಸ್ವದೇಶಕ್ಕೆ ಮರಳಿರುವ ಸ್ವಾಮಿ ಅವರು, ತಮ್ಮ ಜಾಗತಿಕ ಅನುಭವದಿಂದ ಕರ್ನಾಟಕ, ಚಿತ್ರದುರ್ಗ ಜಿಲ್ಲೆಯ ಏಳ್ಗೆಯ ಬಗ್ಗೆ ಒಂದು ನಿಖರವಾದ ಕನಸು ಇಟ್ಟುಕೊಂಡಿದ್ದಾರೆ. ಅಭಿವೃದ್ಧಿಯ ಬಗ್ಗೆ ಸಮಗ್ರ ಗ್ರಾಮೀಣಾಭಿವೃದ್ಧಿಗೆ ಮತ್ತು ಶಿಕ್ಷಣಾಭಿವೃದ್ಧಿಗೆ ಹೊಸ ಕಾಯಕಲ್ಪ ನೀಡಬೇಕು ಎಂದು ದೃಢ ನಿಲುವು ಹೊಂದಿದ್ದಾರೆ.

ನಮ್ಮ ಭವಿಷ್ಯದ ದಿನಗಳನ್ನು ಮತ್ತು ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟಕೊಂಡು ಒಬ್ಬ ಕಾಳಜಿಯಿರುವ, ತಿಳಿವಳಿಕೆ ಇರುವ, ನಾಡು ನುಡಿ ಅರಿತಿರುವ, ರಾಜ್ಯ-ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಭವವಿರುವ, ನಾಡಿನ ಗಣ್ಯರ-ಗೌರವ ಸಂಪಾದಿಸಿರುವ, ಅನೇಕ ಕ್ಷೇತ್ರದಲ್ಲಿ ಚಿಕ್ಕ ವಯಸ್ಸಿನಲ್ಲಿ ವಿಶ್ವ ಮಟ್ಟದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಜನಾರ್ದನಸ್ವಾಮಿ ಅವರು ಇಂದು ರಾಜಕೀಯಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ.

ಚಿತ್ರದುರ್ಗ ಲೋಕಸಭೆ ಕ್ಷೇತ್ರ ರಾಜ್ಯದ ಅತೀ ಹಿಂದುಳಿದ ಕ್ಷೇತ್ರ. ಹಿಂದುಳಿದ ಜನಾಂಗವೇ ಅತೀ ಹೆಚ್ಚು ಸಂಖ್ಯೆಯಲ್ಲಿದ್ದರೂ, ಈವರೆಗೊ ಹಿಂದುಳಿದ ಜನಾಂಗದ ವ್ಯಕ್ತಿಗಳು ಇಲ್ಲಿಂದ ಸಂಸತ್ತಿಗೆ ಆಯ್ಕೆಯಾದರೂ ಕವಡೆ ಕಾಸಿನ ಕೆಲಸ ಆಗಿಲ್ಲ. ನಿರುದ್ಯೋಗ ಹಾಸಿಹೊದ್ದು ಮಲಗಿದೆ. ಮೂಲಭೂತ ಸೌಕರ್ಯಗಳು ಇಲ್ಲದೇ ಇಲ್ಲಿನ ಜನ ಪರದಾಡುತ್ತಿದ್ದಾರೆ. ರೌಡಿಗಳು, ಕೊಲೆಗಡುಕರು, ಭ್ರಷ್ಟರು ಹೀಗೆ ಅನೇಕ ಮಂದಿಯನ್ನು ಸಂಸತ್ತಿಗೆ ಕಳುಹಿಸಿ ಜನರಿಗೆ ಸಾಕಾಗಿದೆ. ಇದೀಗ ಬದಲಾವಣೆಯ ಗಾಳಿ ಬೀಸತೊಡಗಿದೆ. ಜನಾರ್ದನಸ್ವಾಮಿ ಅಂತಹ ವ್ಯಕ್ತಿ ಸಂಸತ್ತಿನಲ್ಲಿದ್ದರೆ, ಅವರಿಂದ ನಾವು ಏನಾದರೂ ನಿರೀಕ್ಷೆ ಮಾಡಲು ಸಾಧ್ಯ.

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bharatiya Janatha Party fielded Tichie Janardhanswamy in Chitradurge Lok Sabha reserve segment
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more