ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ ಟಿಟಿಇ ಪ್ರಭಾಕರನ್ ಉಗ್ರನಲ್ಲ, ಕರುಣಾನಿಧಿ

By Staff
|
Google Oneindia Kannada News

Prabhakaran is not a terrorist, asserts Karunanidhi
ನವದೆಹಲಿ, ಏ. 20 : ಎಲ್ ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಭಯೋತ್ಪಾದಕನಲ್ಲ. ಶ್ರೀಲಂಕಾ ಸೇನೆ ನಡೆಸುತ್ತಿರುವ ಸೇನೆ ಕಾರ್ಯಾಚರಣೆಯಲ್ಲಿ ಆತ ಮೃತಪಟ್ಟರೆ ನಾನು ಅತ್ಯಂತ ದುಃಖಪಡುವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಹೇಳಿದ್ದಾರೆ.

ಪ್ರಭಾಕರನ್ ಭಯೋತ್ಪಾದಕನೆಂದು ನಾನು ಭಾವಿಸುವುದಿಲ್ಲ. ಆತ ಒಳ್ಳೆಯ ಮಿತ್ರನಾಗಿದ್ದಾನೆ. ಒಂದೊಮ್ಮೆ ಆತನ ಬೆಂಬಲಿಗರು ಕೃತ್ಯ ನಡೆಸಿದ್ದರೆ, ಅದು ಆತನ ತಪ್ಪಲ್ಲ ಎಂದು ಎನ್ ಡಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ. ಎಲ್ ಟಿಟಿಇ ಮತ್ತು ಲಂಕಾ ಸೇನೆಗಳ ನಡುವೆ ನಡೆಯುತ್ತಿರುವ ಕಾಳಗದಲ್ಲಿ ಪ್ರಭಾಕರನ್ ಮೃತಪಟ್ಟರೆ, ತುಂಬಾ ನೋವಾಗುತ್ತದೆ. ತಮಿಳರ ನಡುವಿನ ಒಗ್ಗಟ್ಟಿನ ಕೊರತೆಯಿಂದಾಗಿ ಪ್ರಭಾಕರನ್ ಸಾವು ಸಂಭವಿಸುತ್ತದೆಯೇ ಹೊರತು, ಲಂಕಾ ಸೇನೆಯ ಸಾಮರ್ಥ್ಯದಿಂದ ಅಲ್ಲ ಎಂದು ಕರುಣಾನಿಧಿ ಹೇಳಿದ್ದಾರೆ.

ಕಾಂಗ್ರೆಸ್ ವಿರೋಧ

ಪ್ರಭಾಕರನ್ ಭಯೋತ್ಪಾದಕನಲ್ಲ ಎಂಬ ಕರುಣಾನಿಧಿ ಹೇಳಿಕೆಗೆ ಡಿಎಂಕೆ ಮಿತ್ರ ಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಪ್ರಭಾಕರನ್ ಒಬ್ಬ ಭಯೋತ್ಪಾದಕ. ಎಲ್ ಟಿಟಿಇ ಒಂದು ಉಗ್ರಗಾಮಿ ಸಂಘಟನೆ ಎಂಬುದು ಕಾಂಗ್ರೆಸ್ ಪಕ್ಷದ ದೃಢವಾದ ನಂಬಿಕೆ. ಕರುಣಾನಿಧಿ ಅವರು ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. 1991 ರಲ್ಲಿ ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರನ್ನು ಚೆನ್ನೈ ಸಮೀಪವಿರುವ ಶ್ರೀಪೆರಂಬೂರು ಎಂಬಲ್ಲಿ ಎಲ್ ಟಿಟಿಇ ಸಂಘಟನೆಯ ಮಾನವ ಆತ್ಮಾಹುತಿ ಬಾಂಬ್ ಗಳಿಂದ ಅವರನ್ನು ಛಿದ್ರ ಛಿದ್ರಗೊಳಿಸಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X