ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಕರುಗಳು ಬಾಯಲ್ಲದು ಬೊಂಬಾಯಿ

By Staff
|
Google Oneindia Kannada News

ಬೆ೦ಗಳೂರು, ಏ. 20 : ಚುನಾವಣೆಯ ಈ ಸಂದರ್ಭದಲ್ಲಿ ರಾಜಕೀಯ ನಾಯಕರುಗಳ ಆರೋಪ, ಪ್ರತ್ಯಾರೋಪ ಮುಗಿಲು ಮುಟ್ಟಿದೆ. ತಮ್ಮ ವಿರೋಧಿ ನಾಯಕರುಗಳ ಮೇಲೆ ಮನಬ೦ದ೦ತೆ ಹೇಳಿಕೆ ನೀಡುತ್ತಾ ಬ೦ದಿದ್ದಾರೆ. ಇದಕ್ಕೆ ಯಾವ ಪಕ್ಷದ ಯಾವ ನಾಯಕರೂ ಹೊರತಾಗಿಲ್ಲ. ಕೆಲವೊಂದು ಹೇಳಿಕೆಗಳು ಜನರಿಗೆ ಪುಕ್ಕಟೆ ಮನರ೦ಜನೆಯ೦ತೂ ಖ೦ಡಿತ ಒದಗಿಸಿವೆ. ಸಾರ್ವಜನಿಕ ಸಭೆಯಲ್ಲಿ ಮತ್ತು ಪತ್ರಿಕಾಗೋಷ್ಠಿಯಲ್ಲಿ ರಾಜಕೀಯ ನಾಯಕರುಗಳು ನೀಡಿರುವ ಹೇಳಿಕೆಗಳು

* ವೀರಶೈವರನ್ನು ಹೊರತುಪಡಿಸಿ ಉಳಿದೆಲ್ಲಾ ವರ್ಗಗಳಿಗೆ ಮುಖ್ಯಮ೦ತ್ರಿ ಅನ್ಯಾಯ ಮಾಡಿದ್ದಾರೆ. ಇದು ರಾಜ್ಯದ ಅತಿಹೆಚ್ಚು ಜನರಿಗೆ ಮಾಡಿದ ದ್ರೋಹ. ಅವರೆಲ್ಲಾ ಈ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ತಿರುಗಿ ಬೀಳಲಿದ್ದಾರೆ. ಬಿಜೆಪಿ ದಲಿತ, ಪರಿಶಿಷ್ಟ ಜಾತಿ ಮತ್ತು ಪ೦ಗಡದ ವಿರೋಧಿ, ಹುಬ್ಬಳ್ಳಿಯಲ್ಲಿ ಕಾ೦ಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ.

* ರಾಷ್ಟ್ರೀಯ ಹಿತಾಸಕ್ತಿಯ೦ತಹ ಗ೦ಭೀರ ವಿಷಯಗಳಲ್ಲೂ ಆಡ್ವಾಣಿ ಜೊತೆ ಮುಖಾಮುಖಿಯಾಗುವುದಕ್ಕೆ ಪ್ರಧಾನಿ ತಪ್ಪಿಸಿಕೊಳ್ಳುತ್ತಿದ್ದಾರೆ. ಬಿರುಸಿನ ಪ್ರಚಾರ ನಡೆಸುವುದಕ್ಕೂ ಅವರಿಗೆ ಆಸಕ್ತಿಯಿಲ್ಲ. ಆದರೆ ಪ್ರಧಾನಿಯಾಗುವುದಕ್ಕೆ ಮಾತ್ರ ಮನಮೋಹನ್ ಸಿಂಗ್ ರೆಡಿ. ಬಿಜೆಪಿ ವಕ್ತಾರ ಅರುಣ್ ಜೇಟ್ಲಿ ನವದೆಹಲಿಯ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

* ಸುವರ್ಣರಥ ರೈಲಿನಲ್ಲಿ ಮುಖ್ಯಮ೦ತ್ರಿಗಳು ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಮೂಲಕ ಸೂಟ್ ಕೇಸಗಳಲ್ಲಿ ಹಣ ರವಾನೆ ಮಾಡಿರುವುದಕ್ಕೆ ನಮ್ಮಲ್ಲಿ ಪುರಾವೆಗಳಿವೆ. ಮುಖ್ಯಮ೦ತ್ರಿಗಳೇ ನಿಮಗೆ ತಾಕತ್ತಿದ್ದರೆ ನನ್ನ ಮೇಲೆ ಇನ್ನೊ೦ದು ಮಾನನಷ್ಟ ಮೊಕದ್ದಮೆ ಹೂಡಿ. ಇದು ಸಿಎ೦ಗೆ ಕುಮಾರಸ್ವಾಮಿ ತುಮಕೂರು ಸಾರ್ವಜನಿಕ ಸಭೆಯಲ್ಲಿ ಹಾಕಿರುವ ಬಹಿರ೦ಗ ಸವಾಲು.

* ಎಚ್ ಡಿ ಕುಮಾರಸ್ವಾಮಿ ತಾವು ಮುಖ್ಯಮ೦ತ್ರಿಯಾಗಿದ್ದಾಗ ಹಳ್ಳಿಹಳ್ಳಿಗಳಿಗೆ ಮಧ್ಯರಾತ್ರಿ ಎರಡು ಘ೦ಟೆಗೆ ಹೋಗಿ ಬೆಳ್ಳ೦ಬೆಳ್ಳಗೆ ಐದು ಘ೦ಟೆಗೆ ಎದ್ದು ಬಂದಿರುವುದೇ ಇವರ ದೊಡ್ಡ ಸಾಧನೆ. ಇವರು ಗ್ರಾಮ ವಾಸ್ತವ್ಯ ಮಾಡಿದ್ದ ಕೆಲ ಮನೆಯವರು ಸತ್ತು ಹೋಗಿದ್ದಾರೆ. ಇವರ ಕಾಲ್ಗುಣ ಒಳ್ಳೆಯದಲ್ಲ, ಎಚ್ಡಿಕೆ ಗ್ರಾಮ ವಾಸ್ತವ್ಯ ಬಗ್ಗೆ ಸಿದ್ದು ಲೇವಡಿ

* ಕಾ೦ಗ್ರೆಸ್ ಪಕ್ಷಕ್ಕೆ ನೆರವಾಗಲು ಕೆಲವಡೆ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ನಮ್ಮ ದೇವೇಗೌಡ ಸಾಹೇಬ್ರು ಯುಪಿಎನಲ್ಲಿದ್ದಾರೋ ಅಥವಾ ತೃತೀಯರ೦ಗದಲ್ಲಿದ್ದಾರೋ ಅನ್ನುವುದು ಅವರದೇ ಪಕ್ಷದ ಕಾರ್ಯಕರ್ತರಿಗೆ ತಿಳಿದ ಹಾಗಿಲ್ಲ. ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಹೇಳಿಕೆ.

* ಕಾ೦ಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಗೆ ವಯಸ್ಸಾಗಿದೆ. ಪಾಪ ಅವರೆಲ್ಲಿಗೇ ಹೋದರೂ ಅವರ ಸಹಾಯುಕರು ಅವರನ್ನು ಸೀಟ್ ನಲ್ಲಿ ಕೂರಿಸುವುದು ಎಬ್ಬಿಸುವುದು ಮಾಡಬೇಕು. ತಾವು ಉಟ್ಟಿದ ಕಚ್ಚೆ ಕಟ್ಟಿಕೊಳ್ಳಲೂ ಆಗದು. ರಾಜಕೀಯ ನಿವೃತ್ತಿ ತೆಗೆದುಕೊ೦ಡು ಮನೆಯಲ್ಲಿ ಹಾಯಾಗಿ ಇರಬೇಕಲ್ಲವೇ, ಉಡುಪಿಯಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ ವಿ ಸದಾನ೦ದ ಗೌಡ ನೀಡಿರುವ ಹೇಳಿಕೆ.

* ಮೊದಲು ದೇಶ ಅನ್ನುವ ಬಿಜೆಪಿ ಹೇಳಿಕೆ ಹಾಸ್ಯಾಸ್ಪದ ಮತ್ತು ಸುಳ್ಳಿನ ಕ೦ತೆ. ದೇಶಕ್ಕಾಗಿ ಪ್ರಾಣತೆತ್ತ ಒಬ್ಬನೇ ಒಬ್ಬ ತನ್ನ ನಾಯಕನ ಹೆಸರನ್ನು ಬಿಜೆಪಿ ಹೇಳಲಿ. ಆಗ ಬಿಜೆಪಿಯ ನಿಜವಾದ ದೇಶಭಕ್ತಿ ಬಗ್ಗೆ ತಿಳಿಯುತ್ತದೆ. ಆಡ್ವಾಣಿ ಕೇ೦ದ್ರ ಗೃಹ ಸಚಿವರಾಗಿದ್ದಾಗಲೇ ಕ೦ದಹಾರ್ ಘಟನೆ ನಡೆದಿದ್ದು ಅನ್ನುವುದು ಬಿಜೆಪಿ ಪ್ರಧಾನಮ೦ತ್ರಿ ಅಭ್ಯರ್ಥಿಗೆ ತಿಳಿದಿರಲಿ. ಮಧ್ಯಪ್ರದೇಶದ ಚುನಾವಣಾ ಸಭೆಯಲ್ಲಿ ಸೋನಿಯಾ ಗಾ೦ಧಿ.

* ಪ್ರಧಾನಿ ಮನಮೋಹನ್ ಸಿ೦ಗ್ ಅಶಕ್ತರೆನ್ನಲು ಆಡ್ವಾಣಿ ಏನು ಎ೦ಬಿಬಿಎಸ್ ಡಾಕ್ಟರಾ? ಅಥವಾ ಆಡ್ವಾಣಿ ಮತ್ತು ವಾಜಪೇಯಿ ಇನ್ನೂ ಚಿರಯುವಕರಾ? ಬಾಯಿಗೆ ಬ೦ದ ಹಾಗೆ ಮಾತನಾಡುತ್ತಾರಲ್ಲಾ, ವಯೋವೃದ್ದ ಆಡ್ವಾಣಿ ಮತ್ತು ವಾಜಪೇಯಿಯವರನ್ನು ಮೊದಲು ಸಮುದ್ರಕ್ಕೆ ಎಸೆಯಬೇಕು. ಕಾ೦ಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಹೇಳಿಕೆ.

* ಕರ್ನಾಟಕದಲ್ಲಿ ಜಾತ್ಯಾತೀತ ಜನತಾದಳ 15-16 ಸ್ಥಾನ ಪಡೆದರೆ. ಇಡೀ ಹಿ೦ದೂಸ್ತಾನವನ್ನು ಬದಲಾವಣೆ ಮಾಡಿ ತೋರಿಸುತ್ತೇನೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲದು. ಒ೦ದು ವೇಳೆ ಅಲ್ಲಿ ಬಿಜೆಪಿ ಗೆದ್ದರೆ ಮತ್ತೆ ನಾನೆ೦ದೂ ಹಾವೇರಿಗೆ ಕಾಲಿಡುವುದಿಲ್ಲ. ಇದು ನನ್ನ ಶಪಥ, ಬ್ಯಾಡಗಿ ಸಾರ್ವಜನಿಕ ಸಭೆಯಲ್ಲಿ ಎಚ್ ಡಿ ದೇವೇಗೌಡ ಘೋಷಣೆ.

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X