ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾಜಸೇವೆಗೆ ಮುಂದಾದ ನಾರಾಯಣಮೂರ್ತಿ

By Staff
|
Google Oneindia Kannada News

Murthys pledge wealth for social welfare projects
ಬೆಂಗಳೂರು, ಏ. 20 : ವಾರೆನ್ ಬಫೆಟ್ ಗೊತ್ತಲ್ಲ, ಜಗತ್ತಿನ ಎರಡನೇ ಕುಬೇರನಾದರೂ ಅತ್ಯಂತ ಸೀದಾ ಸಾದಾ ಜೀವನ ನಡೆಸುತ್ತಿರುವ ವಾರೆನ್ ಬಫೆಟ್ ಸಮಾಜ ಏಳ್ಗೆ ಅವರ ಕೊಡುಗೆ ಗಣನೀಯ. ಸಮಾಜಸೇವೆಯಲ್ಲಿ ತೊಡಗಿರುವ ಬಿಲ್ ಗೇಟ್ ಫೌಂಡೇಷನ್ ಸೇರಿದಂತೆ ಅನೇಕ ಸರ್ಕಾರೇತರ ಸಂಸ್ಥೆಗಳಿಗೆ ಅಪಾರ ಪ್ರಮಾಣದ ಹಣವನ್ನು ನೀಡಿದ್ದಾರೆ ಹಾಗೂ ನೀಡುತ್ತಿದ್ದಾರೆ. ಅದೇ ಹಾದಿಯಲ್ಲಿ ನಮ್ಮ ಹೆಮ್ಮೆಯ ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಮುಖ್ಯಸ್ಥ ನಾಗವಾರ ರಾಮರಾಯ ನಾರಾಯಣಮೂರ್ತಿ ಹಾಗೂ ಅವರ ಧರ್ಮಪತ್ನಿ ಸುಧಾಮೂರ್ತಿ ಸಮಾಜ ಸೇವೆಯ ಕಡೆಗೆ ಮುಖಮಾಡಿದ್ದಾರೆ. ಧಾರ್ಮಿಕ ದತ್ತಿ ಕಾರ್ಯಗಳಲ್ಲಿ ಈಗಾಗಲೇ ತೊಡಗಿಸಿಕೊಂಡಿರುವ ಇವರು ಇದೀಗ ಬಡಮಕ್ಕಳ ಶಿಕ್ಷಣ, ಆರೋಗ್ಯಕ್ಕಾಗಿ ಅಪಾರ ಪ್ರಮಾಣದ ಹಣ ವಿನಿಯೋಗಿಸಲು ಮುಂದೆ ಬಂದಿದ್ದಾರೆ.

ತಾವು ನೀಡುವ ಹಣ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎನ್ನುವುದು ಈ ದಂಪತಿಗಳ ಮಹತ್ವಾಕಾಂಕ್ಷೆ. ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಾಮಾಣಿಕವಾಗಿ ಬಡಮಕ್ಕಳ ಬಗ್ಗೆ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಕಾಳಜಿ ಹೊಂದಿರುವ ಸಂಘ ಸಂಸ್ಥೆಗಳಿಗೆ ಹಣ ನೀಡಿ, ಆ ಮೂಲಕ ಸಮಾಜ ಸೇವೆಗೆ ಚಿಂತನೆಯನ್ನು ನಾರಾಯಣಮೂರ್ತಿ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಬಡಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಹಣ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ನಾವು ನೀಡುತ್ತಿರುವ ಹಣ ಅರ್ಹರಿಗೆ ಮುಟ್ಟಿದರೆ ಅದೇ ನಮಗೆ ಸಂತೋಷ ಎಂದು ಹೇಳುತ್ತಾರೆ.

ನಾರಾಯಣಮೂರ್ತಿ ದಂಪತಿಗಳು ಒಟ್ಟು 4 ಸಾವಿರ ಕೋಟಿ ರುಪಾಯಿಗಳನ್ನು ಆಸ್ತಿಯನ್ನು ಹೊಂದಿದ್ದು, ಇದರಲ್ಲಿ ತಮ್ಮ ಇಬ್ಬರು ಮಕ್ಕಳಾದ ರೋಹನ್ ಮತ್ತು ಅಕ್ಷತಾಗೆ ಸೇರಬೇಕಾದ ಆಸ್ತಿ, ಇನ್ಫೋಸಿಸ್ ನಲ್ಲಿ ಅವರು ಹೊಂದಿರುವ ಷೇರು ಪ್ರಮಾಣ, ಸ್ಟಾಕ್ಸ್ ಎಲ್ಲವೂ ಸೇರಿದೆ. ಸುಧಾಮೂರ್ತಿ ಫೌಂಡೇಷನ್ ಮೂಲಕ ಧಾರ್ಮಿಕ ದತ್ತಿಗೆ ಸಂಬಂಧಿಸಿದಂತೆ ಅನೇಕ ಶ್ಲಾಘನೀಯ ಕಾರ್ಯಗಳನ್ನು ಮಾಡಿರುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ಹಳ್ಳಿಯಲ್ಲಿ ಹುಟ್ಟಿದ ರೈತರ ಹಾಗೂ ಸಾಮಾನ್ಯ ಮದ್ಯಮವರ್ಗದವರ ಮಕ್ಕಳಿಗೆ ಭವ್ಯ ಜೀವನ ನೀಡಿದ್ದಲ್ಲದೆ, ಅಮೆರಿಕ ಎಂಬ ಕನಸಿನ ಅರಮನೆಯನ್ನು ತೋರಿಸಿದ ದೀಮಂತ ಸಾಧಕ ನಾರಾಯಾಣಮೂರ್ತಿ ಅವರಿಗೆ ಬಡವರ ಇರುವ ಕಾಳಜಿ ಪ್ರಶ್ನಿಸುವಂತಿಲ್ಲ. ಪ್ರತಿಯೊಬ್ಬರಿಗೂ ಆದರ್ಶಪ್ರಾಯರಾಗಿರುವ ನಾರಾಯಣಮೂರ್ತಿ ಅವರನ್ನು ಎಷ್ಟೂ ಪ್ರಶಂಸಿಸಿದರೂ ಸಾಲದು. ಅವರ ಕನಸು ನನಸಾಗಲಿ, ಅವರಿಂದ ನೂರೆಂಟು ಬಡ ವಿದ್ಯಾರ್ಥಿಗಳು ಜೀವನ ನಂದಾದೀಪವಾಗಲಿ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X