ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್ ನಲ್ಲಿ ಅಕ್ರಮ ತಡೆಗೆ ಹೈಟೆಕ್ ಮಂತ್ರ: ಡಿಸಿ

By Staff
|
Google Oneindia Kannada News

ಬೀದರ, ಏ.20: ಜಿಲ್ಲೆಯಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ಮತ್ತು ಪಿಕೆಪಿಎಸ್ ಕಟ್ಟಡಗಳಲ್ಲಿ ಇದ್ದ 34ಮತದಾನ ಕೇಂದ್ರಗಳನ್ನು ಬದಲಾಯಿಸಲಾಯಿಸಲು ಪ್ರಸ್ತಾಪ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತಾ ಅವರು ತಿಳಿಸಿದ್ದಾರೆ.ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಿರುವ ಕಾರಣ ಆಕ್ಷೇಪಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ನಿಷೇಧಾಜ್ಞೆ ಜಾರಿ: ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಅನುಕೂಲವಾಗುವಂತೆ ಎಪ್ರಿಲ್ 23ರವರೆಗೆ ರಾತ್ರಿ 10.30ಗಂಟೆಯಿಂದ ಬೆಳಿಗ್ಗೆ 6.30 ರ ವರೆಗೆ ಸೆಕ್ಷನ್ 144ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ನಾಲ್ಕಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬೀದರ ವಿಧಾನಸಭೆ ಕ್ಷೇತ್ರಕ್ಕೆ ಸಹ ಮತದಾನ ನಡೆಯುತ್ತಿದ್ದು, ಇಲ್ಲಿನ ಮತಗಟ್ಟೆಗಳಲ್ಲಿ ಲೋಕಸಭೆಗೆ ಮತಚಲಾಯಿಸಿದ ಬಳಿಕ ವಿಧಾನಸಭೆಗೆ ಮತಚಲಾಯಿಸಲು ವ್ಯವಸ್ಥೆ ಮಾಡಲಾಗುವುದು. ಈ ಬಾರಿ ಅಂಧ ಮತದಾರರು ಸಹ ಮತದಾನವನ್ನು ಸ್ವತ: ಮಾಡಲು ಅನುಕೂಲವಾಗುವಂತೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ಬ್ರೈಲ್ ಲಿಪಿಯನ್ನು ಅಳವಡಿಸಲಾಗಿದೆ ಎಂದು ಹೇಳಿದರು.

ನೀತಿ ಸಂಹಿತೆ ಕಟ್ಟುನಿಟ್ಟು: ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಿನಿಂದ ಪಾಲಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 150 ಸೆಕ್ಟರಲ್ ಮ್ಯಾಜಿಸ್ಟ್ರೇಟ್ ಹಾಗೂ ಸೆಕ್ಟರಲ್ ಅಧಿಕಾರಿಗಳಿಗೆ ವಾಹನ ಹಾಗೂ ವಾಕಿಟಾಕಿಗಳನ್ನು ನೀಡಲಾಗಿದೆ. ತಮ್ಮ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಚುನಾವಣಾ ಅಕ್ರಮಗಳ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ. ರಾತ್ರಿ ಗಸ್ತು ಬಿಗಿಗೊಳಿಸಲಾಗಿದೆ. ಹಣ ಮತ್ತು ಹೆಂಡ ಹಂಚುವ ಸಾಧ್ಯತೆಗಳಿರುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಂತಹ ಸ್ಥಳಗಳಲ್ಲಿ ಹೆಚ್ಚಿನ ಗಸ್ತು ಹಾಕಲಾಗಿದೆ ಎಂದು ಹೇಳಿದರು.

ಗಡಿಭಾಗದಲ್ಲಿ ಅಬಕಾರಿ ಇಲಾಖೆ ವತಿಯಿಂದ ಹೆಚ್ಚುವರಿಯಾಗಿ 7ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಪೊಲೀಸ್ ಇಲಾಖೆಯಿಂದ 4ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಚುನಾವಣೆಗೆ 48ಗಂಟೆಗಳ ಮೊದಲು ನೆರೆಯ ರಾಜ್ಯಗಳ ಮೂಲಕ ಸಂಚಾರದ ಮೇಲೆ ನಿರ್ಬಂಧ ಹೇರಲಾಗುವುದು. ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗುವುದು. ಚುನಾವಣಾ ಅಕ್ರಮಗಳ ಬಗ್ಗೆ ಯಾವುದೇ ದೂರನ್ನು 1077ಗೆ ಕರೆ ಮಾಡಿ ದಾಖಲಿಸಬಹುದು ಎಂದು ತಿಳಿಸಿದರು.

ವಿಡಿಯೊ ಕ್ಯಾಮೆರಾ: ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಚುನಾವಣಾ ಪ್ರಕ್ರಿಯೆಯನ್ನು ವಿಡಿಯೋಗ್ರಫಿ ಮಾಡಲಾಗುವುದು. ಇದಕ್ಕಾಗಿ 400ವಿಡಿಯೊ ಕ್ಯಾಮೆರಾಗಳನ್ನು ತರಿಸಲಾಗಿದೆ. ಇದರೊಂದಿಗೆ 150ಕ್ಯಾಮೆರಾಗಳನ್ನು ಸಹ ಸಿದ್ಧವಾಗಿರಿಸಲಾಗಿದೆ. ಮತಗಟ್ಟೆಗಳಲ್ಲಿ 250ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.

ಸಂಪರ್ಕ ವ್ಯವಸ್ಥೆ: ಚುನಾವಣೆಯಂದು ಸುಗಮ ಮತದಾನಕ್ಕಾಗಿ ಹೈಟೆಕ್ ಸಂಪರ್ಕ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿ ತಾಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಅಲ್ಲಿ ಒಂದೇ ಸಂಖ್ಯೆಯ ಐದು ದೂರವಾಣಿ ಲೈನ್‌ಗಳನ್ನು ಸ್ಥಾಪಿಸಲಾಗುವುದು. ಸಾರ್ವಜನಿಕರು ಯಾವುದೇ ಅಡಚಣೆಯಿಲ್ಲದೆ ಈ ದೂರವಾಣಿಗೆ ಕರೆ ಮಾಡಬಹುದಾಗಿದ. ಈ ಕೇಂದ್ರಗಳಲ್ಲಿ ಐದು ಕಂಪ್ಯೂಟರ್‌ಗಳನ್ನು ಹಾಕಲಾಗಿದೆ. ಈ ಎಲ್ಲಾ ಕಂಪ್ಯೂಟರ್‌ಗಳು ವೆಬ್ ಸಂಪರ್ಕ ಹೊಂದಿರುತ್ತವೆ ಎಂದು ಹೇಳಿದರು.

ಪೊಲೀಸ್ ಸಿಬ್ಬಂದಿ: ಚುನಾವಣಾ ಕಾರ್ಯಕ್ಕಾಗಿ 3 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. 60ಗಸ್ತು ತಂಡಗಳನ್ನು ನಿಯೋಜಿಸಲಾಗಿದ್ದು, ಇನ್ನೂ 25 ಪ್ರಹಾರ ದಳಗಳನ್ನು ರಚಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ತಮಿಳುನಾಡು ಮೀಸಲು ಪೊಲೀಸ್ ಪಡೆಯ ಒಂದು ತುಕಡಿ ಜಿಲ್ಲೆಗೆ ಆಗಮಿಸುತ್ತಿದೆ. ಎಪ್ರಿಲ್ 20ಮತ್ತು 21ರಂದು ಈ ತುಕಡಿ ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಲಿದೆ. ಇದರೊಂದಿಗೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ೬ತುಕಡಿಗಳನ್ನು ಜಿಲ್ಲೆಯಲ್ಲಿ ನಿಯೋಜಿಸಲಾಗುವುದು. ಚುನಾವಣಾ ಅಕ್ರಮಗಳನ್ನು ತಡೆಯಲು ರಸ್ತೆ ಬದಿಯ ಢಾಬಾಗಳನ್ನು ರಾತ್ರಿ 10.30 ರ ಒಳಗೆ ಮುಚ್ಚುಗಂತೆ ಆದೇಶಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಸತೀಶ್ ಕುಮಾರ್ ಳಿಸಿದರು.
(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X