ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಬ್ ಬಾಲಾಪರಾಧಿ : ಅಬ್ಬಾಸ್ ಕಜ್ಮಿ

By Staff
|
Google Oneindia Kannada News

Kasab's trial should be held in a juvenile court ; Kazmi
ಮುಂಬೈ, ಏ. 17 : ಮುಂಬೈ ಭಯೋತ್ಪಾದನೆ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಕಸಬ್ ನ ವಿಚಾರಣೆ ಇಂದು ಆರಂಭವಾಯಿತು. ಅರ್ಥರ್ ಜೈಲಿನಲ್ಲಿ ನ್ಯಾಯಾಲಯ ನಿರ್ಮಿಸಿ ಕಸಬ್ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿತು. ಕಸಬ್ ಮೇಲೆ 166 ಮಂದಿಯನ್ನು ಕೊಂದಿರುವ ಗಂಭೀರ ಆರೋಪವಿದ್ದು, ಅವನ ಮೇಲೆ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ.

ಮುಂಬೈ ಭಯೋತ್ಪಾದನೆಗೆ ಸಂಚು ರೂಪಿಸಿದವರ 10 ಮಂದಿ ಉಗ್ರರ ಪಟ್ಟಿಯಲ್ಲಿ ಕಸಬ್ ಕೂಡ ಒಬ್ಬನಾದ್ದಾನೆ. ಅಲ್ಲದೇ ಮುಂಬೈನ ಪ್ರತಿಷ್ಠಿತ ಸ್ಥಳಗಳ ಮೇಲೆ ದಾಳಿ ನಡೆಸುವುದಲ್ಲದೇ, ವಿದೇಶಿ ಗಣ್ಯರನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗಿದ್ದಾರೆ. ಮಹತ್ವ ಸಂಗತಿ ಎಂದರೆ, ಮುಸ್ಲಿಮರು ವಾಸಿಸುವ ಸ್ಥಳಗಳ ಮೇಲೆ ದಾಳಿ ನಡೆಸಲು ಮುಂದಾಗದಿರುವುದು. ಕಸಬ್ ಬಂಧನದ ನಂತರ ನಡೆಸಿದ ವಿಚಾರಣೆಯಿಂದ ಆತನೆ ತಪ್ಪೊಪ್ಪಿಕೊಂಡ 21 ಪುಟಗಳ ಅಷ್ಟೂ ಅಂಶಗಳನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಮ್ ನ್ಯಾಯಾಲಯಕ್ಕೆ ಸಲ್ಲಿಸಿದರು.

ಮುಂಬೈ ದಾಳಿ ವೇಳೆ ಕಸಬ್ ಅಪ್ರಾಪ್ತನಾಗಿರುವ ಹಿನ್ನೆಲೆಯಲ್ಲಿ ಆತನ ವಿಚಾರಣೆಯನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ವಹಿಸಬೇಕು ಎಂದು ಉಗ್ರ ಕಸಬ್ ಪರ ನ್ಯಾಯವಾದಿ ಅಬ್ಬಾಸ್ ಕಜ್ಮಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ. ಕಜ್ಮಿ ವಾದವನ್ನು ಸ್ಪಷ್ಯವಾಗಿ ತಳ್ಳಿಹಾಕಿರುವ ನಿಕ್ಕಮ್, ವಿಚಾರಣೆ ವೇಳೆಯಲ್ಲಿ ಆತನ ಹೇಳಿದ ಪ್ರಕಾರ ಡಿಸೆಂಬರ್ 30 1987 ಆತನ ಜನ್ಮದಿನವಾಗಿದೆ. ಅಲ್ಲದೇ ಪಾಕಿಸ್ತಾನದ ಸೇನಾಡಳಿತವೂ ಮುಂಬೈ ದಾಳಿಯಲ್ಲಿ ಸ್ಪಷ್ಟವಾದ ಕೈವಾಡವಿದೆ. ಎಕೆ 47 ಉಪಯೋಗಿಸಲು ಕಲಿಸಿರುವುದು ಪಾಕ್ ಸೇನೆ ಎಂದು ನಿಕ್ಕಮ್ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ಕಸಬ್ ನನ್ನು ನೇಣಿಗೇರಿಸಿ : ಬಾಳಾ ಠಾಕ್ರೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X