ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಭಯೋತ್ಪಾದನೆ : ಕಸಬ್ ವಿಚಾರಣೆ

By Staff
|
Google Oneindia Kannada News

26/11: Trial begins today, Kasab to be tried for 166 murders
ಮುಂಬೈ, ಏ. 17 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಪಾಕಿಸ್ತಾನ ಮೂಲದ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಕುರಿತ ವಿಚಾರಣೆಯನ್ನು ಇಂದು ಮುಂಬೈ ನ ವಿಶೇಷ ನ್ಯಾಯಾಲಯ ನಡೆಸಲಿದೆ. ಕಸಬ್ ಪರ ವಾದ ಮಂಡಿಸಲು ನೇಮಕವಾಗಿದ್ದ ಅಂಜಲಿ ವಾಗ್ಮಾರೆ ಅವರು ವಜಾಗೊಂಡ ಹಿನ್ನೆಲೆಯಲ್ಲಿ ನೂತನವಾಗಿ ನೇಮಕಗೊಂಡಿರುವ ಅಬ್ಬಾಸ್ ಕಜ್ಮಿ ಕಸಬ್ ಪರ ವಾದ ಮಂಡಿಸಲಿದ್ದಾರೆ.

ಅಂಜಲಿ ವಜಾಗೊಂಡ ನಂತರ ಪಾಕಿಸ್ತಾನದ ವಕೀಲರನ್ನು ನನ್ನ ಪರ ವಾದಿಸಲು ನೇಮಿಸಲಬೇಕು ಎಂದು ವಿಶೇಷ ನ್ಯಾಯಾಲಯ ನ್ಯಾಯಾಧೀಶ ಎಂ ಎಲ್ ತೆಹಲಿಯಾನಿ ಅವರಲ್ಲಿ ಮನವಿ ಮಾಡಿಕೊಂಡಿದ್ದ. ಆದರೆ, ನ್ಯಾಯಾಲಯ ಕಸಬ್ ಮನವಿಯನ್ನು ತಿರಸ್ಕರಿಸಿ ಅಬ್ಬಾಸ್ ಕಜ್ಮಿ ಅವರನ್ನು ನೇಮಿಸಿತ್ತು. ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಪ್ರಕಾರ, ಕಳೆದ ವರ್ಷ ನವೆಂಬರ್ 26 ರಂದು ನಡೆದ ಮುಂಬೈ ಭಯೋತ್ಪಾದನೆಯಲ್ಲಿ 166 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಕಸಬ್ ಕೈವಾಡವಿರುವ ಕುರಿತು ಸಮಗ್ರ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಕಸಬ್ ನೊಂದಿಗೆ ಸಿಕ್ಕಿಬಿದ್ದಿರುವ ಇನ್ನಿಬ್ಬರು ಉಗ್ರರಾದ ಪಾಹೀಮ್ ಅನ್ಸಾರಿ ಮತ್ತು ಮಹಾಬುದ್ಧೀನ್ ಅಹ್ಮದ್ ಅವರಪ ವಿಚಾರಣೆಯೂ ನಡೆಯಲಿದೆ. ಭಾರತೀಯ ಸಂವಿಧಾನ ಸೆಕ್ಷನ್ 302 ಅಡಿಯಲ್ಲಿ ಕಸಬ್ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮುಂಬೈ ಪೊಲೀಸರು ಕಸಬ್ ವಿರುದ್ಧ 11 ಸಾವಿರ ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ಅರ್ಥರ್ ಜೈಲಿನಲ್ಲಿ ಉಗ್ರ ಕಸಬ್ ಇಂದು ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇದ್ದು. ಸುಮಾರು 300 ಇಂಡೋಟಿಬೇಟ್ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ನ್ಯಾಯಾಲಯದ ಸುತ್ತಿ ಬಿಗಿ ಪಹರೆ ಹಾಕಲಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಕಸಬ್ ವಕೀಲ ಅಂಜಲಿ ವಾಗ್ಮಾರೆ ಅಮಾನತು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X