ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ರೋ ವಿರೋಧಿಸಿ ಮಾನವ ಸರಪಳಿ ಪ್ರತಿಭಟನೆ

By Staff
|
Google Oneindia Kannada News

Human Chain protest against BMRCL project
ಬೆಂಗಳೂರು, ಏ. 15 : ಮೆಟ್ರೋ ರೈಲು ನಿಲ್ದಾಣದ ನಿರ್ಮಾಣಕ್ಕಾಗಿ ಅಪರೂಪದ ಹಾಗೂ ಅಮೂಲ್ಯ ಸಸ್ಯರಾಶಿ ಮತ್ತು ಗಿಡಗಳನ್ನು ಹೊಂದಿರುವ ಲಾಲ್ ಬಾಗ್ ನ್ನು ನಾಶ ಮಾಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಹಸಿರು ಉಸಿರು ನಾಗರಿಕ ವೇದಿಕೆ ವತಿಯಿಂದ ಏಪ್ರಿಲ್ 15 ಬುಧವಾರ ಸಂಜೆ 6 ಗಂಟೆಗೆ ಲಾಲ್ ಬಾಗ್ ಮುಂಭಾಗದಲ್ಲಿ ಮಾನವ ಸರಪಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಮೆಟ್ರೋ ರೈಲು ನಿರ್ಮಾಣಕ್ಕಾಗಿ ಈಗಾಗಲೇ ಲಾಲ್ ಬಾಗ್ ನ ಗೋಡೆ ಹಾಗೂ ಆರ್ ವಿ ರಸ್ತೆಯಲ್ಲಿ ನೂರಾರು ಮರಗಳನ್ನು ಸರ್ಕಾರ ಕೆಡವಿ ಹಾಕಿದೆ. ಸರ್ಕಾರ ಅಮೂಲ್ಯ ಸಂಪತ್ತು ಹೊಂದಿರುವ ಲಾಲ್ ಬಾಗ್ ನಾಶ ಪಡಿಸಲು ಮುಂದಾಗಿರುವುದು ಜನವಿರೋಧಿ ಕ್ರಮವಾಗಿದೆ. ಲಾಲ್ ಬಾಗ್ ಉಳಿಸಲು ಸರ್ಕಾರ ವಿಶೇಷ ಕ್ರಮ ತೆಗೆದುಕೊಳ್ಳಬೇಕು. ಮೆಟ್ರೋ ರೈಲು ನಿರ್ಮಾಣವನ್ನು ಬೇರೆಡೆಗೆ ವರ್ಗಾಯಿಸಬೇಕು.

ಲಾಲ್ ಬಾಗ್ ಮೇಲೆ ಸರ್ಕಾರ ನಡೆಸುತ್ತಿರುವ ದೌರ್ಜನ್ಯ ಕೂಡಲೇ ನಿಲ್ಲಬೇಕು ಹಾಗೂ ಈ ಕುರಿತು ವ್ಯಾಪಕ ಸಾರ್ವಜನಿಕ ಚರ್ಚೆಯಾಗಬೇಕು. ಲಾಲ್ ಬಾಗ್ ವಶಕ್ಕೆ ತೆಗೆದುಕೊಂಡು ಅಲ್ಲಿ ಮೆಟ್ರೋ ರೈಲು ನಿಲ್ದಾಣ, ಪಾರ್ಕ್ ಹಾಗೂ ಮಾಲ್ ಗಳನ್ನು ನಿರ್ಮಿಸುವ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಹಸಿರು ಉಸಿರು ನಾಗರಿಕ ವೇದಿಕೆ ಸರ್ಕಾರಕ್ಕೆ ಆಗ್ರಹಿಸಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 42110351,
ಸೂಚನೆ: ಕ್ಯಾಪ್ಟನ್ ಗೋಪಿನಥ್ ಕೂಡ ಪರಿಸರ ಸಂರಕ್ಷಣೆಗಾಗಿ ಈ ಸರಪಳಿಗೆ ಕೈಜೋಡಿಸಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X