ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯಕ್ಕೆ ಪ್ರಿಯಾಂಕಾ ಗಾಂಧಿ?

By Staff
|
Google Oneindia Kannada News

Rahul Gandhi
ಅಮೇಥಿ, ಏ. 13 : ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ಭಾರತದ ದೇಶದ ಪ್ರಧಾನಮಂತ್ರಿಯಾಗುವುದು ಖಚಿತ ಎಂದು ಸಹೋದರಿ ಪ್ರಿಯಾಂಕಾ ಗಾಂಧಿ ಭವಿಷ್ಯ ನುಡಿದಿದ್ದಾರೆ. ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಿಯಾಂಕಾ ಕಾಂಗ್ರೆಸ್ ಪಕ್ಷದ ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಮನಮೋಹನ್ ಸಿಂಗ್ ಎಂಬುದನ್ನು ಹೇಳುವ ಮೂಲಕ ಕ್ಷಣ ಕಾಲ ಹುಟ್ಟಿದ್ದ ಹೊಸಗಾಳಿಗೆ ತೆರೆ ಎಳೆದರು. ಮುಂದಿನ ದಿನಗಳಲ್ಲಿ ನಾನು ರಾಜಕೀಯಕ್ಕೆ ಬರುವೆ ಎಂಬುದನ್ನು ಸ್ಪಷ್ಟವಾಗಿ ಹೇಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡುವ ಕೆಲಸ ಮಾಡಿದ್ದಾರೆ.

ನಾನು ರಾಜಕೀಯ ಸೇರುವೆ ಎಂದಿರುವ ಪ್ರಿಯಾಂಕಾ ಪಕ್ಷ ಸೇರುವುದು ಯಾವಾಗ ಎನ್ನುವುದನ್ನು ಮಾತ್ರ ಹೇಳಿಲಿಲ್ಲ. ನಾನು ಬೆಳೆಯುತ್ತಾ ಹೋಗುತ್ತಿದ್ದೇನೆ. ಇಂಥ ಕಾಲಘಟ್ಟದಲ್ಲಿ ರಾಜಕೀಯ ಸೇರುವುದಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು 37ರ ಹರೆಯದ ಪ್ರಿಯಾಂಕಾ ಹೇಳಿದರು. ಮನಮೋಹನ್ ಸಿಂಗ್ ಅಸಮರ್ಥ ಪ್ರಧಾನಿ ಎನ್ನುವ ಬಿಜೆಪಿ ಆರೋಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ ಅವರು, ಅವರೊಬ್ಬ ಸಮರ್ಥ ಪ್ರಧಾನಿ. ಅವರ ಸಾಧನೆ ಜನರಿಗೆ ಗೊತ್ತಿದೆ ಎಂದು ಪ್ರಿಯಾಂಕಾ ಹೇಳಿದರು.

(ಏಜೆನ್ಸೀಸ್)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X