ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಉತ್ತರ ಕ್ಷೇತ್ರ ಪರಿಚಯ

By Staff
|
Google Oneindia Kannada News

ಬೆಂಗಳೂರು, ಏ. 11 : ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಈ ಕ್ಷೇತ್ರದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಪ್ರಾಬಲ್ಯ. ಆದರೆ ಕಳೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಿತ್ತು. ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬೆಂಗಳೂರು ಕೇಂದ್ರದಿಂದ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ತನ್ನ ಹಳೆಹುಲಿ ಜಾಫರ್ ಷರೀಫ್ ಮೇಲೆ ನಂಬಿಕೆ ಇಟ್ಟಿದ್ದರೆ, ಕಾಂಗ್ರೆಸ್ ಪಕ್ಷದ ಹಳೆ ಹುಲಿ ಚಂದ್ರೇಗೌಡ ಬಿಜೆಪಿಯಿಂದ ಅಖಾಡಲ್ಲಿದ್ದಾರೆ.

ಈ ಕ್ಷೇತ್ರದಲ್ಲಿ ಕನ್ನಡ ಮಾತನಾಡುವವರು ವಿರಳ. ಕೂಲಿ ಮತ್ತು ಕಾರ್ಮಿಕರು ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಉತ್ತರ ಭಾರತೀಯರ ಪ್ರಾಬಲ್ಯ ಜಾಸ್ತಿ. ಪ್ರಸಿದ್ಧ ಇಸ್ಕಾನ್ ಮತ್ತು ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಆಂಜನೇಯ ಸ್ವಾಮಿ ದೇವಾಲಯ, ಹೆಬ್ಬಾಳದ ಮೇಲುಸೇತುವೆ ಮುಂತಾದವುಗಳು ಕ್ಷೇತ್ರದ ಆಕರ್ಷಣೆ.

ಕ್ಷೇತ್ರ - ಬೆಂಗಳೂರು ಉತ್ತರ
* ಚುನಾವಣೆ ದಿನಾಂಕ : ಏಪ್ರಿಲ್ 23

ಅಭ್ಯರ್ಥಿಗಳು

* ಕಾಂಗ್ರೆಸ್ - ಸಿ ಕೆ ಜಾಫರ್ ಷರೀಫ್
* ಬಿಜೆಪಿ - ಡಿ ಬಿ ಚಂದ್ರೇಗೌಡ,
* ಜನತಾದಳ - ಸುರೇಂದ್ರಬಾಬು

ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು

* ಮಲ್ಲೇಶ್ವರ
* ಕೃಷ್ಣರಾಜಪುರ
* ಬ್ಯಾಟರಾಯನಪುರ
* ಯಶವಂತಪುರ
* ದಾಸರಹಳ್ಳಿ
* ಮಹಾಲಕ್ಷ್ಮಿ ಬಡಾವಣೆ
* ಹೆಬ್ಬಾಳ
* ಪುಲಿಕೇಶಿನಗರ

ಒಟ್ಟು ಮತದಾರರು - 20.49 ಲಕ್ಷ

* ಪುರುಷರು - 10.78 ಲಕ್ಷ
* ಮಹಿಳೆಯರು - 9.71 ಲಕ್ಷ

ಜಾತಿವಾರು ಲೆಕ್ಕಾಚಾರ

* ಒಕ್ಕಲಿಗರು 5.10 ಲಕ್ಷ
* ಲಿಂಗಾಯತರು, ಬ್ರಾಹ್ಮಣರು 3.2 ಲಕ್ಷ
* ಎಸ್ ಸಿ-ಎಸ್ ಟಿ 3.10 ಲಕ್ಷ
* ಮುಸ್ಲಿಂ 2.65 ಲಕ್ಷ
* ಕ್ರೈಸ್ತ 85 ಸಾವಿರ
* ಇತರರು ಮತ್ತು ವಲಸಿಗರು 4 ಲಕ್ಷ

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X