ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಧಾಕರ ರಾವ್ ಗೆ ಕನಸಾದ ಚು.ಅಧಿಕಾರಿ ಸ್ಥಾನ?

By Staff
|
Google Oneindia Kannada News

V S Sampath to be new election commissioner
ನವದೆಹಲಿ, ಫೆ. 24 : ಕರ್ನಾಟಕದ ಮುಖ್ಯ ಕಾರ್ಯದರ್ಶಿ ಸುಧಾಕರರಾವ್ ಅವರನ್ನು ಚುನಾವಣಾ ಆಯೋಗಕ್ಕೆ ನೇಮಿಸುವ ಕುರಿತು ಇದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ. ರಾಜ್ದಾನ್, ಜೋಸೆಫ್ ಹಾಗೂ ರಾವ್ ಎಲ್ಲರನ್ನೂ ಹಿಂದಿಕ್ಕಿ ಅಂಧ್ರದ ವಿಎಸ್ ಸಂಪತ್ ನವೀನ್ ಚಾವ್ಲಾ ಅವರ ಸ್ಥಾನಕ್ಕೇರಲಿದ್ದಾರೆ ಎಂಬ ಸುದ್ದಿ ಬಂದಿದೆ. ಮುಖ್ಯ ಆಯುಕ್ತ ಎನ್ ಗೋಪಾಲಸ್ವಾಮಿ ಅವರ ಸ್ಥಾನದಲ್ಲಿ ನವೀನ್ ಚಾವ್ಲಾ ಅವರು ಈಗಾಗಲೇ ಭಾರತೀಯ ಮುಖ್ಯ ಚುನಾವಣಾ ಆಯುಕ್ತರಾಗಿ ಕೂರುವುದು ಖಚಿತವಾಗಿದೆ.

ಏಪ್ರಿಲ್ 20 ರಂದು ಮುಖ್ಯ ಆಯುಕ್ತ ಎನ್ ಗೋಪಾಲಸ್ವಾಮಿ ನಿವೃತ್ತರಾಗಲಿದ್ದು, ಬಳಿಕ ಸುಧಾಕರರಾವ್ ಅವರು ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ದಕ್ಷಿಣದಿಂದ ಒಬ್ಬ ಪ್ರತಿನಿಧಿ ಬೇಕೆಂದು ರಾವ್ ಅವರ ಹೆಸರನ್ನು ಈ ಮುಂಚೆ ಸೂಚಿಸಲಾಗಿತ್ತು. ಆದರೆ ಕಳೆದ ರಾತ್ರಿ ವಿಎಸ್ ಸಂಪಂತ್ ಅವರ ಆಯ್ಕೆಗೆ ಪ್ರಧಾನಿ ಅಂಕಿತ ಹಾಕಿದ್ದಾರೆ.

ಸೋನಿಯಾ ಗಾಂಧಿ ಅವರು ಎರಡು ದಿನಗಳ ಹಿಂದಷ್ಟೇ ಆಂಧ್ರದ ಕರೀಂನಗರ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದರು. ಆಂಧ್ರದ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಅವರು ಸಂಪಂತ್ ಅವರ ಹೆಸರನ್ನು ಸೂಚಿಸಿದ್ದಾರೆ ಎನ್ನಲಾಗಿದೆ. ಇದುವರೆಗೂ ಸಂಭವನೀಯ ಪಟ್ಟಿಯಲ್ಲಿರ ಸಂಪತ್ ದೀಢಿರನೇ ಹುದ್ದೆಗೆ ಆಯ್ಕೆ ಆಗಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.

ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ ಜಾನಿ ಜೋಸೆಫ್, ಕರ್ನಾಟಕದ ಮುಖ್ಯಕಾರ್ಯದರ್ಶಿ ಸುಧಾಕರ್ ರಾವ್, ಮಾಜಿ ಶಕ್ತಿ ಇಲಾಖೆ ಕಾರ್ಯದರ್ಶಿ ಅನಿಲ್ ರಾಜ್ದಾನ್ ಹಾಗೂ ಕಾನೂನು ಕಾರ್ಯದರ್ಶಿ ಟಿಕೆ ವಿಶ್ವನಾಥನ್ ಅವರಿಗಿಂತ 1973 ನೇ ಐಎಎಸ್ ಅಧಿಕಾರಿಗಳ ತಂಡದಿಂದ ಹೊರಬಂದಿರುವ ಸಂಪಂತ್ ಅವರ ಅನುಭವ ಕಮ್ಮಿ ಎಂಬುದು ಸರ್ವವೇದ್ಯವಾಗಿದ್ದರೂ ಸರ್ಕಾರದ ಈ ಕ್ರಮ ಹಲವು ಗುಮಾನಿಗೆ ಈಡುಮಾಡಿದೆ.

(ದಟ್ಸ್ ಕನ್ನಡವಾರ್ತೆ)

ಸುಧಾಕರರಾವ್ ಕೇಂದ್ರ ಚು ಆಯುಕ್ತರಾಗಿ ನೇಮಕ ?
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X