ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ಹಂತದ ಚುನಾವಣೆಗೆ 237 ನಾಮಪತ್ರ

By Staff
|
Google Oneindia Kannada News

MN Vidyashankar
ಬೆಂಗಳೂರು, ಏ.10: ರಾಜ್ಯದಲ್ಲಿ 15ನೇ ಲೋಕಸಭೆಗೆ ಎರಡನೇ ಹಂತದಲ್ಲಿ ನಡೆಯಲಿರುವ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲಿ ಒಟ್ಟು 237ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಎಂ.ಎನ್. ವಿದ್ಯಾಶಂಕರ್ ಅವರು ತಿಳಿಸಿದರು.

ನಾಮಪತ್ರ ಸಲ್ಲಿಕೆಯ ಕ್ಷೇತ್ರವಾರು ವಿವರ ಹೀಗಿದೆ:
ಧಾರವಾಡ: 23
ಮೈಸೂರು:23
ಮಂಡ್ಯ: 28
ಚಾಮರಾಜನಗರ:16
ಶಿವಮೊಗ್ಗ:17
ಹಾಸನ:17
ದಕ್ಷಿಣ ಕನ್ನಡ:17
ಉಡುಪಿ-ಚಿಕ್ಕಮಗಳೂರು:13
ದಾವಣಗೆರೆ :36
ಹಾವೇರಿ:23
ಬಾಗಲಕೋಟೆ: 24
ಒಟ್ಟು : 237

ನೀತಿ ಸಂಹಿತೆ ಉಲ್ಲಂಘನೆ
ರಾಜ್ಯದಲ್ಲಿ ವಿವಿಧ ಪಕ್ಷಗಳಿಂದ ನೀತಿ ಸಂಹಿತೆ ಉಲ್ಲಂಘನೆಯ 191 ಪ್ರಕರಣ ದಾಖಲಿಸಲಾಗಿದ್ದು ಅವರುಗಳ ಪಕ್ಷವಾರು ವಿವರ ಹೀಗಿದೆ:
ಬಿಎಸ್‌ಪಿ -8, ಬಿಜೆಪಿ-65, ಕಾಂಗ್ರೆಸ್- 35, ಸಿಪಿಐಎಂಎಲ್- 2, ಜೆಡಿಎಸ್ 24, ಇತರೆ- 57. ಮುಳಬಾಗಲಿನಲ್ಲಿ ಬುಧವಾರ ರೂ. 15 ಲಕ್ಷ ಮೌಲ್ಯದ 771 ಪೆಟ್ಟಿಗೆಯಷ್ಟು ಮದ್ಯ ವಶಪಡಿಸಿಕೊಳ್ಳಲಾಗಿದೆ. ಈ ಮದ್ಯವನ್ನು ಮಧ್ಯಪ್ರದೇಶದಿಂದ ಸಾಗಿಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಅವರು ತಿಳಿಸಿದರು.

ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಒಟ್ಟು 899 ಪ್ರಕರಣ ದಾಖಲಿಸಲಾಗಿದ್ದು ಅದರಲ್ಲಿ ಅತಿ ಹೆಚ್ಚು ಅಂದರೆ 225 ಪ್ರಕರಣಗಳು ಬಳ್ಳಾರಿಯಲ್ಲಿ ದಾಖಲಾಗಿವೆ ಎಂದು ಅವರು ತಿಳಿಸಿದರು. ದಾಖಲಾದ ಪ್ರಕರಣಗಳ ಜಿಲ್ಲಾವಾರು ವಿವರ ಹೀಗಿದೆ.

ಬಳ್ಳಾರಿ - 225, ಶಿವಮೊಗ್ಗ- 104, ಬೆಳಗಾವಿ- 82, ಚಾಮರಾಜನಗರ-73, ರಾಯಚೂರು 59, ಬೀದರ್- 14. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಉತ್ತರಕನ್ನಡದ ಅಭ್ಯರ್ಥಿ ಅನಂತಕುಮಾರ ಹೆಗಡೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಚುನಾವಣಾ ಆಯೋಗವು ಅವರಿಗೆ ವಾಗ್ದಂಡನೆ ವಿಧಿಸಿದೆ ಎಂದು ಅವರು ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X