ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ಕಿಂಗ್ ಮೇಕರ್ ಗಳು, ಲಾಲು ಯಾದವ್

By Staff
|
Google Oneindia Kannada News

No govt without fourth front Lalu
ಸೈಪಾಯಿ (ಲಖನೌ), ಏ. 09 : ಹೊಸದಾಗಿ ರಚನೆಯಾಗಿರುವ ನಾಲ್ಕನೇ ರಂಗದ ಬೆಂಬಲವಿಲ್ಲದೇ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರದ ರೈಲ್ವೆ ಸಚಿವ ಲಾಲು ಪ್ರಸಾದ ಯಾದವ್ ಹೇಳಿದರು. ಈ ಹೇಳಿಕೆ ನೀಡುವ ಮೂಲಕ ಅವರು ಕಾಂಗ್ರೆಸ್ ನಾಯಕರಿಗೆ ಬಲವಾಗ ಏಟು ನೀಡಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.

ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಹುಟ್ಟೂರು ಸೈಪಾಯಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಚುನಾವಣೆ ಪ್ರಚಾರ ಸಭೆ ಪಾಲ್ಗೊಂಡು ಮಾತನಾಡಿದ ಲಾಲು, ಬಿಜೆಪಿ ನೇತೃತ್ವ ಎನ್ ಡಿಎ ಹಾಗೂ ಬಹುಜನ ಸಮಾಜ ಪಕ್ಷದ ನಾಯಕಿ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಲಾಲ್ ಕೃಷ್ಣ ಅಡ್ವಾಣಿ ಭಾರತದ ಪ್ರಧಾನಮಂತ್ರಿ ಆಗುವುದು ಕನಸಿನ ಮಾತು. ಅಡ್ವಾಣಿ ಅವರು ಕನಸು ಕಾಣುವುದನ್ನು ಬಿಡಬೇಕು ಎಂದಾಗ ನೆರೆದಿದ್ದ ಜನಸ್ತೋಮ ಹುಚ್ಚೆದ್ದು ಚೆಪ್ಪಾಳೆ ತಟ್ಟತೊಡಗಿತು. ಸಂಕಷ್ಟದ ಸಮಯದಲ್ಲಿ ಕೇಂದ್ರದ ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಲು ಮುಂದೆ ಮುಲಾಯಂ ಸಿಂಗ್ ಯಾದವ್ ಅವರನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ ಲಾಲು, ಉತ್ತರ ಪ್ರದೇಶದಲ್ಲಿ ಬಿಎಸ್ಪಿಯನ್ನು ಸೋಲಿಸುವುದು ನಮ್ಮ ಏಕೈಕ ಗುರಿ ಎಂದು ಹೇಳಿದರು.

ಮುಖ್ಯಮಂತ್ರಿ ಮಾಯಾವತಿ ಮೇಲೆ ಹರಿಹಾಯ್ದ ಎಲ್ ಜೆಪಿ ನಾಯಕ ರಾಂ ವಿಲಾಸ್ ಪಾಸ್ವಾನ್, ಹಿಂದುಳಿದವರು, ಪರಿಶಿಷ್ಠರ ಮತಗಳನ್ನು ಪಡೆದ ಮಾಯಾವತಿ ಅಧಿಕಾರಿ ಅನುಭವಿಸಿದ್ದಾರೆಯೇ ಹೊರತು, ಎಂದಿಗೂ ಕೂಡಾ ಆ ಜನಾಂಗದ ಏಳಿಗೆಗೆ ಕಿಂಚಿತ್ತು ಚಿಂತನೆ ನಡೆಸಿಲ್ಲ. ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಎಸ್ಪಿಗೆ ಮತ ನೀಡಿ ಎಂದು ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು.

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X