ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗದೀಶ ಟೈಟ್ಲರ್ ನಾಮಪತ್ರ ವಾಪಸ್ ಸಾಧ್ಯತೆ

By Staff
|
Google Oneindia Kannada News

Jagadish Tytler
ನವದೆಹಲಿ, ಏ. 9 : ಸಿಖ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಜಗದೀಶ ಟೈಟ್ಲರ್ ಅವರನ್ನು ಸಿಬಿಐ ಪೊಲೀಸರು ನಿರಪರಾಧಿ ಎಂದು ಘೋಷಿಸಿದ ಕ್ರಮವನ್ನು ಖಂಡಿಸಿ ಪಂಜಾಬನಲ್ಲಿ ಸಿಖ್ ಜನಾಂಗ ಭಾರಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಲ್ಲಿಸಿದ್ದ ಉಮೇದುವಾರಿಕೆ ವಾಪಸ್ ಪಡೆಯುವಂತೆ ಕಾಂಗ್ರೆಸ್ ಟೈಟ್ಲರ್ ಅವರಿಗೆ ಸೂಚನೆ ನೀಡಿದೆ ಎನ್ನಲಾಗಿದೆ.

ಸಿಖ್ ಮತಗಳನ್ನು ಕಳೆದುಕೊಳ್ಳಲು ತಯಾರಿಲ್ಲದ ಕಾಂಗ್ರೆಸ್ ಪಕ್ಷ ನೈತಿಕತೆಯ ಹಿನ್ನೆಲೆಯಲ್ಲಿ ಜಗದೀಶ ಟೈಟ್ಲರ್ ತಮ್ಮ ನಾಮಪುತ್ರ ಹಿಂದಕ್ಕೆ ಪಡೆಯುವಂತೆ ಒತ್ತ ಹೇರಿದೆ ಎನ್ನಲಾಗಿದೆ. ಇದಕ್ಕೆ ಪ್ರಕ್ರಿಯಿಸಿರುವ ಟೈಟ್ಲರ್, ಇಂದು ಮಧ್ಯಾಹ್ನ ದೆಹಲಿ ಹೈಕೋರ್ಟ್ ಈ ಕುರಿತು ಅಂತಿಮ ತೀರ್ಪು ನೀಡಲಿದೆ. ನ್ಯಾಯಾಲಯ ನೀಡುವ ತೀರ್ಪಿಗೆ ಬದ್ಧವಾಗಿದ್ದು. ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ನನ್ನ ಅಂತಿಮ ನಿರ್ಧಾರ ತಿಳಿಸುವುದಾಗಿ ಟೈಟ್ಲರ್ ಹೇಳಿದರು.

1984ರಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಹತ್ಯೆ ನಂತರ ಸಿಖ್ ಜನಾಂಗದ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಸುಮಾರು 2770 ಮಂದಿ ಸಿಖ್ ರನ್ನ ಹತ್ಯೆ ಮಾಡಿದ್ದರು. ಸಿಖ್ ಮಾರಣಹೋಮಕ್ಕೆ ಕಾಂಗ್ರೆಸ್ ನಾಯಕ ಜಗದೀಶ ಟೈಟ್ಲರ್ ಕಾರಣ ಎನ್ನುವ ಆರೋಪವನ್ನು ಎದುರಿಸುತ್ತಿದ್ದರು. ಸುದೀರ್ಘ ವಿಚಾರಣೆ ನಂತರ ಸಿಬಿಐ ಪೊಲೀಸರು ಜಗದೀಶ್ ಟೈಟ್ಲರ್ ನಿರಪರಾಧಿ, ಪ್ರಕರಣಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿತ್ತು.

ಜಗದೀಶ ಟೈಟ್ಲಪ್ ನಿರಪರಾಧಿ ಎಂದು ಬಹಿರಂಗಗೊಂಡ ತಕ್ಷಣ ಪಂಜಾಬದಾದ್ಯಂತ ತೀವ್ರ ಪ್ರತಿಭಟನೆಗಳು ಆರಂಭಿವಾಗಿವೆ. ನವದೆಹಲಿಯ ಜಂತರ್ ಮಂತರ್ ಮತ್ತು ಸೋನಿಯಾ ಗಾಂಧಿ ನಿವಾಸದ ಎದುರು ಪ್ರತಿಭಟನೆಗಳು ಶುರುವಾಗಿವೆ. ಈ ಮಧ್ಯೆ, ಸಿಖ್ ಹತ್ಯಾಕಾಂಡ ಕುರಿತು ಸ್ಪಷ್ಟ ಉತ್ತರ ನೀಡಲಿಲ್ಲ ಎಂದು ಆಕ್ರೋಶಗೊಂಡ ದೈನಿಕ ಜಾಗರಣ ಪತ್ರಿಕೆಯ ಹಿರಿಯ ವರದಿಗಾರ ಜರ್ನೈಲ್ ಸಿಂಗ್ ಗೃಹ ಸಚಿವ ಪಿ ಚಿದಂಬರಂ ಅವರ ಮೇಲೆ ಬೂಟು ಎಸೆದ ಪ್ರಕರಣವೂ ನಡೆದಿದೆ.

(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X