ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಪೂರ್ಣ ವಿವರ

By Staff
|
Google Oneindia Kannada News

Krishna Byregowda
ಬೆಂಗಳೂರು, ಏ. 8 : ರಾಜ್ಯದ ಪ್ರತಿಷ್ಠಿತ ಕಣ ಎಂದೇ ಗುರುತಿಸಿಕೊಂಡಿರುವ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಎಚ್ ಎನ್ ಅನಂತಕುಮಾರ್, ಕಾಂಗ್ರೆಸ್ ನಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಭೈರೇಗೌಡ, ಜೆಡಿಎಸ್ ನಿಂದ ಪ್ರೊ. ರಾಧಾಕೃಷ್ಣ, ಪಕ್ಷೇತರ ಅಭ್ಯರ್ಥಿಯಾಗಿ ಡೆಕ್ಕನ್ ಏವಿಯೇಷನ್ ನ ಕ್ಯಾಪ್ಟನ್ ಗೋಪಿನಾಥ್ ಕಣದಲ್ಲಿರುವ ಪ್ರಮುಖ ಹುರಿಯಾಳುಗಳು. ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ರವಿಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ.

ಬೆಂಗಳೂರು ದಕ್ಷಿಣಕ್ಕೆ ವಿಜಯನಗರ, ಬಸವನಗುಡಿ, ಚಿಕ್ಕಪೇಟೆ, ಜಯನಗರ, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಪದ್ಮನಾಭ ನಗರ, ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ.

*ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗರು-3.5 ಲಕ್ಷ, ಲಿಂಗಾಯಿತರು-1.20 ಲಕ್ಷ, ಬ್ರಾಹ್ಮಣರು-3.4 ಲಕ್ಷ, ಪರಿಶಿಷ್ಟರು-2.5 ಲಕ್ಷ, ಕುರುಬರು-1.70 ಲಕ್ಷ, ಮುಸ್ಲಿಮರು-1.80 ಲಕ್ಷ, ಕ್ರೈಸ್ತರು-20 ಸಾವಿರ, ಕಮ್ಮ-70 ಸಾವಿರ, ರೆಡ್ಡಿ-80 ಸಾವಿರ, ವೈಶ್ಯರು-30 ಸಾವಿರ ಜನರಿದ್ದಾರೆ.
*ಒಟ್ಟು ಮತದಾರರು-19.20 ಲಕ್ಷ, ಪುರುಷರು-10.18, ಮಹಿಳೆಯರು-9.17,
*ಜನಸಂಖ್ಯೆ-26.3 ಲಕ್ಷ,
*ಭೌಗೋಳಿಕ ವಿಸ್ತೀರ್ಣ-205 ಚದರ ಕಿಮೀ.
*ಮತಗಟ್ಟೆಗಳು-1740,
*ಏಪ್ರಿಲ್ 23ರಂದು ಮತದಾನ ನಡೆಯಲಿದೆ.

ಟಿ ಮಾದೇಗೌಡ (ಕಾಂಗ್ರೆಸ್), ಎಚ್ ಸಿ ದಾಸಪ್ಪ (ಕಾಂಗ್ರೆಸ್-1957, 62), ಕೆ ಹನುಮಂತಯ್ಯ (ಕಾಂಗ್ರೆಸ್-67, 71), ಕೆ ಎಸ್ ಹೆಗಡೆ (ಜನತಾ ಪಕ್ಷ-77), ಟಿ ಆರ್ ಶಾಮಣ್ಣ (ಜನತಾ ಪಕ್ಷ-80), ವಿ ಎಸ್ ಕೃಷ್ಣಯ್ಯರ್ (ಜನತಾ ಪಕ್ಷ-84), ಆರ್ ಗುಂಡೂರಾವ್ (ಕಾಂಗ್ರೆಸ್-89), ಕೆ ವೆಂಕಟಗಿರಿಗೌಡ (ಬಿಜೆಪಿ-91), ಅನಂತಕುಮಾರ್ (ಬಿಜೆಪಿ-96, 98, 99, 2004) ಈವರೆಗಿನ ಸಂಸದರಾಗಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X