ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡ್ವಾಣಿ ಬಲಹೀನ ನಾಯಕ: ಸೋನಿಯಾ ಗಾಂಧಿ

By Staff
|
Google Oneindia Kannada News

Advani is weak not Manmohan Singh: Sonia
ಕರೀಂನಗರ (ಹೈದರಾಬಾದ್), ಏ. 8 : ಭಾರತದ ಅತ್ಯಂತ ಬಲಹೀನ ಪ್ರಧಾನಮಂತ್ರಿ ಎಂದರೆ ಮನಮೋಹನ್ ಸಿಂಗ್ ಎಂದು ಭಾರತೀಯಜನತಾ ಪಕ್ಷ ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಮಾಡಿರುವ ಆರೋಪಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಎನ್ ಡಿಎ ಆಡಳಿತದಲ್ಲಿ ಉಪಪ್ರಧಾನಮಂತ್ರಿ ಹುದ್ದೆಯನ್ನೇ ಸರಿಯಾಗಿ ನಿಭಾಯಿಸಲಾರದವರು ದೇಶವನ್ನು ಮುನ್ನೆಡೆಸುವ ಸಾಮರ್ಥ್ಯ ಅಡ್ವಾಣಿ ಅವರಲ್ಲಿ ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಕರಿಂನಗರದಲ್ಲಿ ಚುನಾವಣೆ ಪ್ರಚಾರ ಸಭೆ ಪಾಲ್ಗೊಂಡ ಅವರು ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಮನಮೋಹನ್ ಸಿಂಗ್ ಅವರನ್ನು ಬಲಹೀನ ಪ್ರಧಾನಮಂತ್ರಿ ಎಂದು ಜರಿಯಲು ಅವರಿಗೆ ಯಾವ ಹಕ್ಕಿದೆ ಎಂದು ಪ್ರಶ್ನಿಸಿದ ಸೋನಿಯಾ, ಎನ್ ಡಿಎ ಆಡಳಿತದಲ್ಲಿದ್ದಾಗ ಅಡ್ವಾಣಿ ಕೇಂದ್ರದ ಗೃಹ ಸಚಿವರಾಗಿದ್ದರು. ಆಗ ಏನಾಯಿತು ಎಂದು ಕಿಡಕಾರಿದ ಅವರು, ಕಂದಹಾರ್ ನಲ್ಲಿ ಅಪಹರಣ ಪ್ರಕರಣ ನಡೆಯಿತು. ದೇಶದ ಹೃದಯಭಾಗ ಸಂಸತ್ತಿನ ಮೇಲೆ ದಾಳಿ ನಡೆದಿದ್ದು ಸುಳ್ಳೇ ಇದೀಗ ಹೇಳಿ ಯಾರು ಬಲಹೀನ ಮುಖಂಡರು ಎಂದು ಸೋನಿಯಾ ಗಾಂಧಿ ಬಿಜೆಪಿ ಮತ್ತು ಅದರ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ದೇಶ ಇಂದು ಅಭಿವೃದ್ಧಿ ಪಥದಲ್ಲಿ ಮುನ್ನೆಡೆಯಬೇಕಾದರೆ ಮನಮೋಹನ್ ಸಿಂಗ್ ಅವರ ಸಮರ್ಥ ನಾಯತಕ್ವವೇ ಕಾರಣ. ವಿಶ್ವ ಶ್ರೇಷ್ಠ ಆರ್ಥಿಕ ತಜ್ಞ ಎನಿಸಿರುವ ಮನಮೋಹನ್ ಸಿಂಗ್ ಹಾಗೂ ಚಿದಂಬರಂ ಅವರ ದೂರದೃಷ್ಟಿ ಫಲವಾಗಿ ಇಂದು ಆರ್ಥಿಕ ಹಿಂಜರಿತದಿಂದ ಭಾರತ ಕೆಂಗಟ್ಟಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಭಯೋತ್ಪಾದನೆ ಹಾಗಬ ಭಯೋತ್ಪದಕರ ಬಗ್ಗೆ ಮೃದುಧೋರಣೆ ಹೊಂದಿಲ್ಲ. ದೇಶದ್ರೋಹಿ ಕೃತ್ಯ ಎಸಗುವವರನ್ನು ಖಂಡಿತವಾಗಿಯು ಮಟ್ಟಹಾಕಲು ಕಾಂಗ್ರೆಸ್ ಸಿದ್ದ ಎಂದು ಸೋನಿಯಾ ಗಾಂಧಿ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X