ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೂಟು ಎಸೆಯುವ ಪುರಾಣ ಜಾಗತಿಕ ಮಟ್ಟದ್ದು

By Staff
|
Google Oneindia Kannada News

Bush shoe throw hurl
ಲಂಡನ್, ಏ. 7 : ದೈನಿಕ ಜಾಗರಣೆ ಪತ್ರಿಕೆ ಹಿರಿಯ ವರದಿಗಾರನೊಬ್ಬ ಗೃಹ ಸಚಿವ ಚಿದಂಬರಂ ಮೇಲೆ ಬೂಟು ಎಸೆದು ಸುದ್ದಿ ಮಾಡಿರುವ ಬೆನ್ನಲ್ಲೇ ಈ ಬೂಟು ಎಸೆಯುವ ಸಂಸ್ಕೃತಿಯನ್ನು ಬೆನ್ನತ್ತಿದರೆ, ಜಗತ್ತಿನ ಘಟಾನುಘಟಿಗಳ ನಾಯಕರ ಮೇಲೆ ಬೂಟು ಎಸೆಯಲಾಗಿದೆ. ಅವರೆಲ್ಲರೂ ತಪ್ಪಿಸಿಕೊಂಡಿದ್ದಾರೆಯೋ, ಏಟು ತಿಂದಿದ್ದಾರೆಯೋ ಗೊತ್ತಿಲ್ಲ. ಈ ಬೂಟು ಎಸೆಯುವ ಸಂಸ್ಕೃತಿಯ ಮೂಲ ಕೆದಕುತ್ತಾ ಹೊರಟರೆ ಇದೊಂದು ಜಾಗತಿಕ ಮಟ್ಟದ ಪೀಡೆ ಎಂದು ಮನದಟ್ಟಾಗುತ್ತದೆ.

ಒಂದು ಕಾಲವಿತ್ತು, ರಾಜಕಾರಣಿಗಳ ಬಗ್ಗೆ ಅಸಹನೆಯಿಂದ ಕುದಿಯುತ್ತಿದ್ದ ಜನರು ಆಕ್ರೋಶಗೊಂಡು ವ್ಯಕ್ತಪಡಿಸಿ ಜನರು ಕಲ್ಲು, ಕೊಳೆತ ಟೋಮೆಟೋ ಹಾಗೂ ಮೊಟ್ಟೆಗಳನ್ನು ಎಸೆಯುವುದು ಸಾಮಾನ್ಯವಾಗಿತ್ತು. ಜನರು ಮುಂದುವರೆದಂತೆಲ್ಲಾ ನೂತನ ಪ್ರತಿಭಟನೆಯನ್ನು ಕಂಡುಕೊಂಡರು. ಅದುವೇ ಈ ಬೂಟು ಎಸೆಯುವ ಕೆಲಸ. ಇನ್ನೊಂದು ಮುಖ್ಯ ವಿಚಾರವೆಂದರೆ ಬೂಟಿನ ಕೆಳಗಡೆ ಇರುವ ಸೋಲ್ ಎಸೆದರೆ ಭಾರಿ ಅವಮಾನದಂತೆ ಎನ್ನುವ ನಂಬಿಕೆ ಅರಬ್ ದೇಶಗಳದ್ದು.

ಚೀನಾ ಪ್ರಧಾನಮಂತ್ರಿ ವೆನ್ ಜಿಯಾಬೋ ಅವರ ಮೇಲೆ ಜರ್ಮನ್ ದೇಶದ ಮಾರ್ಟಿನ್ ಜಾಂಕೇ ಎಂಬ ವ್ಯಕ್ತಿ ಬೂಟು ಎಸೆದು ಸುದ್ದಿ ಮಾಡಿದ್ದ. ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಮೇಲೆ ಇರಾಕ್ ಪತ್ರಕರ್ತ ಮುಂತೆದಾರ್ ಅಲ್ ಜೈದಿ ಶೂ ಎಸೆದಿದ್ದ. ಬ್ರಿಟನ್ ಪ್ರಧಾನಿ ಗಾರ್ಡನ್ ಬ್ರೌನ್, ಇದೀಗ ಭಾರತದ ಗೃಹ ಸಚಿವ ಪಿ ಚಿದಂಬರಂ ಅವರದ್ದಾಗಿದೆ. ಸಿಖ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಸಮರ್ಪಕ ಉತ್ತರ ನೀಡಲಿಲ್ಲ ಎಂದು ಆಕ್ರೋಶಗೊಂಡ ವರದಿಗಾರ ಜರ್ನೈಲ್ ಸಿಂಗ್ ಚಿದು ಕಡೆಗೆ ಬೂಟು ಎಸೆದು ಆಕ್ರೋಶಪಡಿಸಿದ್ದಾರೆ. ಜಗತ್ತಿನಲ್ಲಿ ಪ್ರತಿಷ್ಠಿತ ವ್ಯಕ್ತಿಯ ಮೇಲೆ ಪ್ರತಿ ಮೂರು ನಿಮಿಷಕ್ಕೊಂದು ಬೂಟು ಎಸೆಯುವ ಪ್ರಕರಣಗಳು ನಡೆಯುತ್ತದೆ ಎಂದು ಅಂದಾಜಿಸಲಾಗಿದೆ.

(ಏಜನ್ಸೀಸ್)
ಚಿದು ಮೇಲೆ ಬೂಟು ದಾಳಿ, ಬಿಜೆಪಿ ಖಂಡನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X