ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳೆನೀರು ವ್ಯಾಪಾರಿ ಲೋಕಸಭೆ ಅಖಾಡಕ್ಕೆ

By Staff
|
Google Oneindia Kannada News

Coconut vendor to contest Bengaluru Central segment
ಬೆಂಗಳೂರು, ಏ. 7 : ಹಣ ಬಲ, ತೋಳ್ಬಲ ಇರುವವರು ಮಾತ್ರ ಚುನಾವಣೆ ಅಖಾಡಕ್ಕೆ ಇಳಿಯಲು ಮಾತ್ರ ಶಕ್ತರು ಎನ್ನುವ ಮಾತನ್ನು ಹುಸಿ ಮಾಡಿರುವ ಅನಕ್ಷರಸ್ಥ ಪುಟ್ಟಪ್ಪ ಎಂಬ ವ್ಯಕ್ತಿ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದಾನೆ. ಈ ಬಗ್ಗೆ ಮಂಗಳವಾರ ಬೆಂಗಳೂರು ಮೀರರ್ ಪತ್ರಿಕೆ ಬೆಳಕು ಚೆಲ್ಲಿದೆ. ಈತ ವೃತ್ತಿಯಿಂದ ಎಳೆನೀರು (ತೆಂಗಿನಕಾಯಿ) ವ್ಯಾಪಾರಿ ಪುಟ್ಟಪ್ಪ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಹದೇವಪುರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಸ್ಥಳೀಯ ಚುನಾವಣೆ ಸೇರಿ ಈ ವರೆಗೂ ಅವರು ಸುಮಾರು 11 ಚುನಾವಣೆಗಳನ್ನು ಎದುರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ, ನಾನು ಬಡವ, ಎಳೆನೀರು ಮಾರಿ ಜೀವನ ಮಾಡುವ ಸಾಮಾನ್ಯರಲ್ಲಿ ಅತೀ ಸಾಮಾನ್ಯ ಮನುಷ್ಯ. ಇಂತಹ ಕಡು ಬಡತನದಲ್ಲಿಯೂ 10 ಸಾವಿರ ರುಪಾಯಿ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಕಣಕ್ಕಿಳಿದಿರುವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಮಹದೇವಪುರ ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ, ಆಗ ನಾನು 220 ಮತಗಳನ್ನು ಪಡೆದುಕೊಂಡಿದ್ದೆ. ಇದರ ಪ್ರೇರಣೆಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ದಿಸಿರುವೆ. ಕಡಿಮೆ ಎಂದರೂ 10 ಸಾವಿರ ಮತಗಳ ಪಡೆಯುವ ಸಾದ್ಯತೆ ಇದೆ ಎಂದು ಪುಟ್ಟಪ್ಪ ವಿವರಿಸುತ್ತಾರೆ.

ಕಳೆದ ಏಪ್ರಿಲ್ 2 ರಿಂದ ಚುನಾವಣೆ ಪ್ರಚಾರ ಆರಂಭಿಸಿರುವ ಪುಟ್ಟಪ್ಪನಿಗೆ ಜನರಿಂದ ಉತ್ತಮ ಪ್ರತಿಕ್ರಿಯ ಬಂದಿದೆ ಎಂದು ಹೇಳುತ್ತಾರೆ. ಅಲ್ಲದೇ ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರವನ್ನು ಆಯೋಗಕ್ಕೆ ಸಲ್ಲಿಸುವುದು ಕಡ್ಡಾಯ. ಪುಟ್ಟಪ್ಪ ಕೂಡಾ ಆಸ್ತಿ ವಿವರ ಸಲ್ಲಿಸಿದ್ದು, 15 ಸಾವಿರ ನಗದು, ವರ್ತೂರಿನಲ್ಲಿ ಸ್ವಂತ ಜಾಗ, ಬ್ಯಾಂಕ್ ನಲ್ಲಿ ಹಣವಿಲ್ಲ. ಜೀವ ವಿಮೆಗಳಿಲ್ಲ. ಚಿನ್ನ ಒಡವೆಗಳು ಇಲ್ಲ. ಮೂರು ಮಕ್ಕಳ ತಂದೆಯಾಗಿರುವ ನಾನು ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿರುವೆ. ಒಬ್ಬ ಮಗ ವಿದ್ಯಾಬ್ಯಾಸ ಮಾಡುತ್ತಿದ್ದಾನೆ ಎಂದು ಪುಟ್ಟಪ್ಪ ಪ್ರಮಾಣ ಪತ್ರದಲ್ಲಿ ಸಲ್ಲಿಸಿದ್ದಾನೆ. ಒಟ್ಟಿನಲ್ಲಿ ಬಡವರು ಸ್ಪರ್ಧಿಸಬಹುದು ಎಂದು ಪುಟ್ಟಪ್ಪ ತೋರಿಸಿಕೊಟ್ಟಿದ್ದಾನೆ. ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ಪಿ ಸಿಮೋಹನ್, ಜೆಡಿಎಸ್ ಜಮೀರ್ ಅಹ್ಮದ್ ಹಾಗೂ ಕಾಂಗ್ರೆಸ್ ಎಚ್ ಟಿ ಸಾಂಗ್ಲಿಯಾನ ಎದುರು ಪುಟ್ಟಪ್ಪ ಸೆಣಸಬೇಕಿದೆ.

(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X