ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡ ಪಿಎಂ ಆದರೆ ಅಚ್ಚರಿಯಿಲ್ಲ: ಬೆಳೆಗೆರೆ

By Staff
|
Google Oneindia Kannada News

Ravi Belagere
ಬೆಂಗಳೂರು, ಏ. 5 : ದೇಶದಲ್ಲಿ ಕಲಸುಮೇಲೋಗರ ಸರ್ಕಾರದ ನಿಷ್ಕ್ರೀಯ ಸಮಾಜವಿದೆ. ಚುನಾವಣೆ ಬಳಿಕವೂ ಇದೇ ಸ್ಥಿತಿ ಮುಂದುವರಿಯುತ್ತದೆ. ದೇವೇಗೌಡರು ಮತ್ತೆ ಪ್ರಧಾನಿಯಾದರೂ ಆಶ್ಚರ್ಯವಿಲ್ಲ ಎಂದು ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳೆಗೆರೆ ಆಭಿಪ್ರಾಯಪಟ್ಟರು.

ಶನಿವಾರ ಸಂಜೆ ನಗರದ ಸಂಸ ಬಯಲು ರಂದ ಮಂದಿರದಲ್ಲಿ ಮೇಜರ್ ಸಂದೀಪ್ ಹತ್ಯೆ, ಅವನೊಬ್ಬನಿದ್ದ ಗೋಡ್ಸೆ ಹಾಗೂ ಲವಲವಿಕೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಕಲಸುಮೇಲೋಗರದ ಸರ್ಕಾರವಾಗಿರುವುದೇ ಇದಕ್ಕೆ ಕಾರಣ. ಮುಂದೆ ಕೂಡಾ ಇದೇ ರೀತಿಯ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ದೇವೇಗೌಡರು ಪ್ರಧಾನಿ ಆದರೂ ಆಚ್ಚರಿ ಇಲ್ಲ ಹೇಳಿದರು.

ಈ ದೇಶ ಸುಧಾರಿಸುವುದಿಲ್ಲ, ಭಯೋತ್ಪಾದಕರ ಪತ್ತೆಗೆಂದು ಇಂಟೆಲಿಜನ್ಸ್ ಬ್ಯೂರೋ ಕೆಲವು ಸಂಘಟನೆಗಳಿಗೆ ಸಿಮ್ ಕಾರ್ಡ್ ಹಂಚುತ್ತದೆ. ಆದರೆ, ಉಗ್ರರ ಬೆನ್ನುಬೀಳುವಲ್ಲಿ ಹಿಂದೆ ಬೀಳುತ್ತದೆ. ಹೀಗಾಗಿ ಇನ್ನೊಂದು ದಾಳಿ ನಡೆದರೂ ಆಶ್ಚರ್ಯವಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ದೇಶದಲ್ಲಿ ಯಾರೂ ಸುಭದ್ರವಾಗಿಲ್ಲ ಎಂದರು.

ದೇವೇಗೌಡರನ್ನು ಯಾರು, ಯಾಕೆ ಹತ್ಯೆ ಮಾಡುತ್ತಾರೆಂದು ಎನ್ಎಸ್ ಜಿ ಕಮಾಂಡೋಗಳನ್ನು ಅವರ ಮನೆಗೆ ರಕ್ಷಣೆಗೆ ನೇಮಿಸಲಾಗುತ್ತಿದೆ ? ಪಾಪಿ ಚಿರಾಯು ಎಂಬ ಮಾತಿಲ್ಲವೇ ಎಂದು ವ್ಯಂಗ್ಯವಾಗಿ ದೇವೇಗೌಡರನ್ನು ಟೀಕಿಸಿದರು. ಬರವಣಿಗೆಯನ್ನು ಪ್ರಾಮಾಣಿಕವಾಗಿ ಮಾಡದಿದ್ದರೆ ನನಗೂ, ಯಡಿಯೂರಪ್ಪನವರಿಗೂ ಏನು ವ್ಯತ್ಯಾಸ ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X