ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಸಡ್ಡು ಹೊಡೆದ ಆರ್ಎಸ್ಎಸ್, ಭಜರಂಗದಳ

By Staff
|
Google Oneindia Kannada News

Mahesndra Kumar
ಬೆಂಗಳೂರು ಎ 4: ಹಿರಿಯ ಆರ್ಎಸ್ಎಸ್ ಮುಖಂಡ, ಮಾಜಿ ಶಾಸಕ ಉರಿಮಜಲು ರಾಮ್ ಭಟ್ ಜನಸಂಘ ಮತ್ತು ಸ್ವತಂತ್ರ ನೆಲೆಯಲ್ಲಿ ಎರಡೂ ನಾಮಪತ್ರವನ್ನು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಲ್ಲಿಸಿದ್ದಾರೆ. ಇತ್ತ ಬಜರಂಗದಳದ ರಾಜ್ಯ ಘಟಕದ ಸಂಚಾಲಕ ಮಹೇಂದ್ರ ಕುಮಾರ್ ಶ್ರೀರಾಮ ಸೇನೆ ಸೇರಿದ್ದು ಭಾರತೀಯ ಜನಸಂಘದಿಂದ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಈ ಎರಡೂ ಬೆಳವಣಿಗೆ ಬಿಜೆಪಿಯ ಭದ್ರಕೋಟೆ ಮಂಗಳೂರು ಮತ್ತು ಉಡುಪಿಯಲ್ಲಿ ಪಕ್ಷಕ್ಕೆ ಹೆಚ್ಚಿನ ತೊಂದರೆಯಾಗುವ ಸಾಧ್ಯತೆಗಳಿವೆ.

ನಾನಾ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದ ರಾಮ್ ಭಟ್ ಕಳೆದ ಒಂದು ವರ್ಷಗಳಿಂದ ಬಿಜೆಪಿಯೊಂದಿಗೆ ಮುನಿಸಿಕೊಂಡು ಸಮಾನ ಮನಸ್ಕರ ಜೊತೆ ಸೇರಿ ಸ್ವಾಭಿಮಾನಿ ವೇದಿಕೆ ಸ್ಥಾಪಿಸಿದ್ದರು. ಜನಸಂಘವನ್ನು ಕಟ್ಟುವ ಜೊತೆಗೆ ಬಿಜೆಪಿಗೆ ಪಾಠ ಕಲಿಸುವುದು ತಮ್ಮ ಹೋರಾಟದ ಉದ್ದೇಶ ಎಂದಿದ್ದರೆ ರಾಮ್ ಭಟ್. ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮಹೇಂದ್ರ ಕುಮಾರ್, ಭಾರತೀಯ ಜನಸಂಘದಿಂದ ಸ್ಪರ್ಧೆಗೆ ತಾಂತ್ರಿಕ ತೊಂದರೆ ಎದುರಾದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X