ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಕ್ಕಿಂ ಮಹಿಳೆಯ ಮತಚೀಟಿಯಲ್ಲಿ ಬಚ್ಚನ್ ಚಿತ್ರ!

By Staff
|
Google Oneindia Kannada News

Sikkim EPIC chaos
ಗ್ಯಾಂಗ್ಟಾಕ್ , ಏ.4:ಚುನಾವಣ ಆಯೋಗ ತಲೆ ತಗ್ಗಿಸುವಂತ ಕೆಲಸ ಸಿಕ್ಕಿಂ ರಾಜಧಾನಿ ಗ್ಯಾಂಗ್ಟಾಕ್ ನಲ್ಲಿ ನಡೆದಿದೆ. ಡಂಕಾ ಭುಟಿಯಾ ಎನ್ನುವ 67 ವರ್ಷದ ಮಹಿಳೆ ಎಲೆಕ್ಟ್ರಾನಿಕ್ ಫೋಟೋ ಐಡೆಂಟಿಟಿ ಕಾರ್ಡ್ ಪಡೆಯಲು ಹೋದಾಗ, ಆಕೆಯ ಗುರುತಿನ ಫೋಟೋ ಇರುವ ಜಾಗದಲ್ಲಿ ಹಿಂದಿ ಚಿತ್ರರಂಗದ ಮೇರು ನಟ ಅಮಿತಾಬ್ ಬಚ್ಚನ್ ಅವರ ಫೋಟೋ !!. ಈ ಕಾರ್ಡನ್ನು ಪಡೆದ ಈಕೆ ಒಂದು ಕ್ಷಣ ಕಕ್ಕಾಬಿಕ್ಕಿ.. ಅಮಿತಾಬ್ ಗೆ ಕೂಡ ಆಕೆಯಷ್ಟೇ ವಯಸ್ಸು ಎಂಬುದು ಕಾಕತಾಳೀಯವಾಗಿದೆ.

ಈ ಘಟನೆ ನಡೆದಿದ್ದು ಪೂರ್ವ ಸಿಕ್ಕಿಂ ನ ನಾಮಚೆಬುಂಗ ಎನ್ನುವ ಕ್ಷೇತ್ರದಲ್ಲಿ. ಕ್ಷೇತ್ರಕ್ಕೆ ಸಂಬಂಧಪಟ್ಟ ಚುನಾವಣಾ ಕಚೇರಿ ಈಕೆಗೆ ಗುರುತಿನ ಚೀಟಿ(EPIC) ಸಂಖ್ಯೆ CDC0078857 ವಿತರಿಸಿತ್ತು. ಇದರಲ್ಲಿ ಆಗಿರುವ ತಪ್ಪಿನ ಬಗ್ಗೆ ಕೂಡಲೇ ಈಕೆ ಚುನಾವಣಾಧಿಕಾರಿಗಳಿಗೆ ಸಂಪರ್ಕಿಸಿ ದೂರು ನೀಡಿದರು. ಅಧಿಕಾರಿಗಳಿಗೆ ತಮ್ಮ ತಪ್ಪಿನ ಅರಿವಾಗಿ ಗುರುತಿನ ಚೀಟಿಯನ್ನು ಸರಿಪಡಿಸುವ ಭರವಸೆ ನೀಡಿದರು. ಮಹಿಳೆಯ ಫೋಟೋ ಇರುವ ಜಾಗದಲ್ಲಿ ಅಮಿತಾಬ್ ಬಚ್ಚನ್ ಭಾವಚಿತ್ರ ಹೇಗೆ ಬಂತು ಅನ್ನುವುದು ಅವರಿಗೆ ತಿಳಿಯುತ್ತಿಲ್ಲವಂತೆ !! ವಿಷಯ ಅಮಿತಾಬ್ ಗೆ ತಿಳಿದರೆ ಅವರ ಪ್ರತಿಕ್ರಿಯೆ ಹೇಗಿರುತ್ತೆ ಎಂದು ಆಲೋಚನೆಯಲ್ಲಿ ಡಂಕಾ ಮುಳುಗಿದ್ದಾಳೆ ಎನ್ನುತ್ತಾರೆ ಗ್ರಾಮಸ್ಥರು.
(ಏಜೆನ್ಸೀಸ್)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X