ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ

By Staff
|
Google Oneindia Kannada News

BJP releases LS election manifesto
ನವದೆಹಲಿ, ಏ. 3 : ತೀವ್ರ ಟೀಕೆ ಟಿಪ್ಪಣಿಗಳ ನಂತರ ಕೊನೆಗೂ ಭಾರತೀಯ ಜನತಾ ಪಕ್ಷ ತನ್ನ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತ್ತದೆ ಹಳೆಯ ಆಲದ ಮರಕ್ಕೆ ಜೋತು ಬಿದ್ದಿರುವ ಬಿಜೆಪಿ, ರಾಮಮಂದಿರ ನಿರ್ಮಿಸಿಯೇ ಸಿದ್ಧ ಎಂದು ಹೇಳಿದೆ. ಅಕ್ಕಿ ರಾಜಕೀಯಕ್ಕೆ ಮುಂದಾಗಿರುವ ಕೇಸರಿ ಪಡೆ, 2 ರುಪಾಯಿ ದರದಲ್ಲಿ ಪ್ರತಿ ತಿಂಗಳು 35 ಕೆಜಿ ಮತ್ತು ಅಕ್ಕಿ, ಗೋಧಿ ನೀಡುತ್ತೇವೆ ಎಂದು ವಾಗ್ದಾನ ಮಾಡಿದೆ.

ಉಳಿದಂತೆ ಹಳಸಲು ಭರವಸೆಗಳ ಮಹಾಪೂರವೇ ಪ್ರಣಾಳಿಕೆಯಲ್ಲಿ ತುಂಬಿದೆ. ರಸ್ತೆ ನಿರ್ಮಾಣ, ಮೂಲಭೂತ ಸೌಕರ್ಯ ಕಲ್ಪಿಸುವುದು. ಉದ್ಯೋಗ ಸೃಷ್ಟಿಸುವುದು, ರೈತರ ಸಾಲ ಮನ್ನಾ, ವೇತನ ಹೆಚ್ಚಳ ಇಂತಹ ಕೆಲ ಚುನಾವಣೆ ಗಿಮಿಕ್ ಗಳು ಬಿಜೆಪಿ ಪ್ರಣಾಳಿಕೆಯಲ್ಲಿ ಅಡಗಿವೆ. ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ, ಅಧ್ಯಕ್ಷ ರಾಜನಾಥ್ ಸಿಂಗ್, ಅರುಣ್ ಜೈಟ್ಲಿ, ಮುರಳಿ ಮನೋಹರ ಜೋಶಿ, ವೆಂಕಯ್ಯ ನಾಯ್ಡು ಉಪಸ್ಥಿತರಿದ್ದರು. ಬಿಜೆಪಿ ಪ್ರಣಾಳಿಕೆ ಮುಖ್ಯಾಂಶಗಳು.

* ಗ್ರಾಮೀಣ ರಸ್ತೆಗಳ ಅಭಿವೃದ್ಧಿ
* ದೇಶಾದ್ಯಂತ ಲಾಡ್ಲಿ ಲಕ್ಷ್ಮಿ ಯೋಜನೆ ಜಾರಿ
* ಪ್ರತಿ ಭಾರತೀಯ ಪ್ರಜೆಗೂ ಕಡ್ಡಾಯ ಗುರುತಿನ ಚೀಟಿ
* ಜಾಗತಿಕ ಆರ್ಥಿಕ ಕುಸಿತಕ್ಕೆ ಸೂಕ್ತ ಕ್ರಮ
* ಪೋಟಾ ಮಾದರಿ ವಿನೂತನ ಕಾಯ್ದೆ ಜಾರಿ
* ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆಗೆ ಬೆಂಬಲ
* ಗ್ರಾಮೀಣ ಮೂಲ ಸೌಕರ್ಯಗಳಿಗೆ ಒತ್ತು
* ರಾಮಮಂದಿರ ನಿರ್ಮಾಣಕ್ಕೆ ಬದ್ಧ
* ಬಿಪಿಎಲ್ ಕುಟುಂಬಗಳಿಗೆ 2 ಕೆಜಿ ಅಕ್ಕಿ ಮತ್ತು ಗೋಧಿ
* ಶಕ್ತಿಶಾಲಿ ವಿದೇಶಾಂಗ ನೀತಿ ಹೊಂದುವತ್ತ ಚಿಂತನೆ
* ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕ್ರಮ
* 3 ಲಕ್ಷಕ್ಕಿಂತ ಕಡಿಮೆ ಆದಾಯವಿರುವವರಿಗೆ ತೆರಿಗೆ ವಿನಾಯಿತಿ
* ರೈತರ ಸಾಲ ಮನ್ನಾ ಮಾಡಲು ಕ್ರಮ
* ರಾಮಸೇತು ರಕ್ಷಣೆಗೂ ಬದ್ಧ
* ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ. 33 ಮೀಸಲು ನೀಡಲು ಸಿದ್ಧ
* ಹಿರಿಯ ನಾಗರಿಕರಿಗೆ ತೆರಿಗೆ ವಿನಾಯತಿ
* ದೇಶಾದ್ಯಂತ ಬಾಲಲಕ್ಷ್ಮಿ ಯೋಜನೆ
* ಬಡವರಿಗೆ ಶೇ.4 ಬಡ್ಡಿದರದಲ್ಲಿ ಸಾಲ
* ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ತಿಂಗಳು 35 ಕೆಜಿ ಅಕ್ಕಿ
* ಸೇನೆ, ಅರೆಸೇನಾಪಡೆ ಸಿಬ್ಬಂದಿಗೂ ತೆರಿಗೆ ವಿನಾಯಿತಿ
* ಐಟಿ ಕ್ಷೇತ್ರದಲ್ಲಿ ಹೊಸ 1.2 ಕೋಟಿ ಉದ್ಯೋಗ ಸೃಷ್ಟಿಗೆ ಕ್ರಮ
* ಕಂಪ್ಯೂಟರ್ ಉಪಕರಣಗಳ ದರ ಕಡಿತ
* ಪಿಂಚಣಿ ಮೇಲಿನ ತೆರಿಗೆ ರದ್ದು
* ವಿದೇಶದಲ್ಲಿರುವ ಅಕ್ರಮ ಹಣ ಹಿಂಪಡೆಯಲು ಕ್ರಮ
* ಸೇನಾಪಡೆಗಳ ಸಿಬ್ಬಂದಿಗಳ ವೇತನ ಏರಿಕೆ ವಿಶೇಷ ಆಯೋಗ ರಚನೆ
* ಉಲ್ಫಾ ಉಗ್ರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ
* ಬಿಪಿಎಲ್ ವಿದ್ಯಾರ್ಥಿಗಳ ಉಚಿತ ಸೈಕಲ್ ವಿತರಣೆ

(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X