ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ವೆಬ್ ಸೈಟ್ ಆರಂಭಿಸಿದ ಗೋಪಿನಾಥ್

By Staff
|
Google Oneindia Kannada News

Capt Gopinath
ಬೆಂಗಳೂರು, ಏ. 1 : 15ನೇ ಲೋಕಸಭೆ ಮಹಾಸಮರದ ಕಣದಲ್ಲಿ ವಿವಿಧ ರಂಗದಲ್ಲಿ ಖ್ಯಾತಿ ಗಳಿಸಿರುವ ಗಣ್ಯರು ರಾಜಕೀಯದ ಕಡೆಗೆ ಮುಖ ಮಾಡುತ್ತಿರುವುದು ಸಂತಸದ ಸಂಗತಿಯೇ ಆಗಿದೆ. ರಾಜಕೀಯ ಅಂದಾಕ್ಷಣ ಬಹುದೂರ ನಿಲ್ಲುತ್ತಿದ್ದ ಪ್ರತಿಷ್ಠಿತರೆಲ್ಲ ಅಖಾಡಕ್ಕೆ ಧುಮುಕುತ್ತಿರುವುದು ರಾಜಕೀಯ ಕ್ಷೇತ್ರದಲ್ಲಿ ಕೂಡಾ ಬದಲಾವಣೆ ಗಾಳಿ ಬೀಸಲಾರಂಭಿಸಿದೆ.

ವಿಜ್ಞಾನ ತಂತ್ರಜ್ಞಾನ ಮುಂದುವರೆದಂತೆಲ್ಲ ಕಾಲಕ್ಕೆ ತಕ್ಕಂತೆ ವಿವಿಧ ಪಕ್ಷಗಳು ಹಾಗೂ ಅದರ ಹುರಿಯಾಳುಗಳು ಬದಲಾಗುತ್ತಿರುವುದು ಸರ್ವೇಸಾಮಾನ್ಯ ದೃಶ್ಯವಾಗಿದೆ. ಇತ್ತೀಚೆಗೆ ಪ್ರತಿ ಅಭ್ಯರ್ಥಿಗಳೂ ಸ್ವಂತ ವೆಬ್ ಸೈಟ್ ಹೊಂದುವ ಮೂಲಕ ಮುಂದುವರೆದ ಜನರ ಮತಗಳು ಗಳಿಸುವ ತಂತ್ರವನ್ನು ಪಾಲಿಸುತ್ತಿದ್ದಾರೆ.

ಕಡಿಮೆ ದರದ ಮೂಲಕ ಸಾಮಾನ್ಯರಿಗೂ ವಿಮಾನದಲ್ಲಿ ಓಡಾಡುವ ಅವಕಾಶ ಕಲ್ಪಿಸಿಕೊಟ್ಟಿರುವ ಡೆಕ್ಕನ್ ಏವಿಯೇಷನ್ ಮುಖ್ಯಸ್ಥ ಕ್ಯಾಪ್ಟನ್ ಗೋಪಿನಾಥ್ ಅವರು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕಿದ್ದಾರೆ. ಈ ಹಿನ್ನೆಲೆಯಲ್ಲಿ ನೆಟ್ ಸ್ಯಾವಿ ಜನಸಾಮಾನ್ಯರಿಗೆ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯ ಗುರಿ, ಯೋಜನೆಗಳು ಜನರಿಗೆ ತಲುಪಬೇಕು ಎನ್ನುವ ದೃಷ್ಟಿಯಿಂದ ಅನೇಕ ಮಹತ್ವದ ಸಂಗತಿಗಳನ್ನು ಒಳಗೊಂಡಿರುವ ನೂತನ ವೆಬ್ ಸೈಟನ್ನು ಆರಂಭಿಸಿದ್ದಾರೆ.

"ನಾನು ರಾಜಕೀಯಕ್ಕೆ ಇಳಿಯಬೇಕು ಎನ್ನುವುದು ನನ್ನ ಜೀವನ ಬಹುದೊಡ್ಡ ನಿರ್ಣಯವಾಗಿದೆ. ಅನೇಕ ಜನ ಮಿತ್ರರು, ಮಾಧ್ಯಮದ ಗೆಳೆಯರು, ಬಂಧು ಬಾಂಧವರು, ಹಾಗೂ ಆಪ್ತ ವಲಯದ ಸ್ನೇಹಿತರ ಸಲಹೆ ಮೇರೆಗೆ ನಾನು ರಾಜಕೀಯ ಚದುರಂಗದೊಳಗೆ ಪ್ರವೇಶಿಸಿರುವೆ. ಇಂದಿನ ರಾಜಕಾರಣ, ರಾಜಕೀಯ ನಾಯಕರ ವರ್ತನೆ ಅಸಹ್ಯ ಹುಟ್ಟಿಸುವಂತಿದೆ. ಇದರಿಂದ ತೀವ್ರ ಬೇಸತ್ತಿರುವ ನಾನು ಈ ನಿರ್ಧಾರ ಕೈಗೊಂಡಿರುವೆ.

"ನಾನು ರಾಜಕೀಯ ಪ್ರವೇಶಿಸುವೆ ಎಂದಾಕ್ಷಣ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಮನೆ ಬಾಗಿಲಿಗೆ ಬಂದು ನನ್ನನ್ನು ಆಹ್ವಾನಿಸಿದವು. ಆದರೆ, ಸದೃಢ ದೇಶವನ್ನು ಕಟ್ಟಬೇಕು ಎಂಬ ಸಂಕಲ್ಪದಿಂದ ನಾನು ರಾಜಕೀಯಕ್ಕೆ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಅನೇಕ ಪಕ್ಷಗಳ ಆಹ್ವಾನವನ್ನು ಸಾರಾಸಗಟಾಗಿ ನಿರಾಕರಿಸಿದೆ. ಉತ್ತಮ ದೇಶ, ಸದೃಢ ದೇಶ, ಅಭಿವೃದ್ಧಿಪರ ದೇಶ, ತಂತ್ರಜ್ಞಾನದ ಹೊಂದಿರುವ ದೇಶ ಕಟ್ಟಬೇಕು ಎನ್ನುವ ಮಹದಾಸೆ ಹೊಂದಿರುವೆ. ಅಲ್ಲದೆ ನನ್ನಂತೆ ಅನೇಕ ವಿದ್ಯಾವಂತರು ರಾಜಕೀಯಕ್ಕೆ ಧುಮುಕಲು ತುದಿಗಾಲ ಮೇಲೆ ನಿಂತಿದ್ದಾರೆ.

"ಆದರೆ, ಇಲ್ಲಿನ ವ್ಯವಸ್ಥೆ ಕಂಡು ವಾಕರಿಕೆಯಿಂದ ಅವರು ದೂರ ನಿಂತು ದೇಶದ ಅಧಃಪತನವನ್ನು ಕಂಡು ಮರುಗುತ್ತಿದ್ದಾರೆ. ಇಂತಹ ಸಂಧಿಗ್ಧ ಸ್ಥಿತಿಯಲ್ಲಿ ಹೊಲಸು ರಾಜಕಾರಣವನ್ನು ಬದಿಗೊತ್ತಿ ಉತ್ತಮ ಸಮಾಜ, ದೇಶದ ಕಟ್ಟುವ ಕನಸು ಕಾಣುತ್ತಿದ್ದೇನೆ. ಆದ್ದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನಗೆ ನಿಮ್ಮ ಅಮೂಲ್ಯ ಮತ ನೀಡಿ ಆರಿಸಿ ತರಬೇಕು ಎಂದು ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇನೆ."

ಸಂಪರ್ಕಕ್ಕೆ : 080-3292 6102 ಅಥವಾ [email protected].

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X