ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ಕಸಬ್ ಪರ ಕಾನೂನು ಹೋರಾಟಕ್ಕೆ ಅಂಜಲಿ

By Staff
|
Google Oneindia Kannada News

Anjali Waghmare
ಮುಂಬೈ, ಏ. 1 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪರ ವಕಾಲತ್ತು ನಡೆಸಲು ಮುಂಬೈ ಮೂಲದ ವಕೀಲೆ ಅಂಜಲಿ ವಾಗ್ಮೋರೆ ಅವರನ್ನು ಮುಂಬೈನ ವಿಶೇಷ ನ್ಯಾಯಾಲಯ ನೇಮಿಸಿದೆ. ದೇಶದ ಹಿತಾಸಕ್ತಿ ಹಾಗೂ ನ್ಯಾಯವನ್ನು ಎತ್ತಿಹಿಡಿಯುವ ಉದ್ದೇಶದಿಂದ ಈ ಪ್ರಕರಣದ ಪರವಾಗಿ ವಕಾಲತ್ತು ನಡೆಸಲು ಒಪ್ಪಿಕೊಂಡಿರುವೆ ಎಂದು ಅಂಜಲಿ ಸ್ಪಷ್ಟಪಡಿಸಿದ್ದಾರೆ.

ಕಸಬ್ ಪರವಾಗಿ ಅಂಜಲಿ ವಾಗ್ಮೋರೆ ಪ್ರಕರಣ ಕೈಗೆತ್ತಿಕೊಂಡಿರುವುದಕ್ಕೆ ತೀವ್ರ ವಿರೋಧ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದ ಶಿವಸೇನೆ ಕಾರ್ಯಕರ್ತರು ಮುಂಬೈಯ ವೊರ್ಲಿಯಲ್ಲಿರುವ ಅಂಜಲಿ ಅವರ ನಿವಾಸದ ಮೇಲೆ ಮಂಗಳವಾರ ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಭಯಗೊಂಡಿದ್ದ ಅಂಜಲಿ ಅವರು ಪ್ರಕರಣ ಕೈಗೆತ್ತಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಒಂದು ದಿನ ಕಾಲಾವಕಾಶ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.

ಇಂದು ನ್ಯಾಯಾಲಯಕ್ಕೆ ತೆರಳಿದ ಅಂಜಲಿ ಅವರು ಉಗ್ರ ಕಸಬ್ ಪರವಾಗಿ ವಕಾಲತ್ತು ವಹಿಸುವೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಮೂರ್ತಿ ಎಂ ಎಲ್ ತಹಿಲ್ ಯಾನಿ ಅವರೆದುರು ಒಪ್ಪಿಕೊಂಡಿದ್ದಾರೆ. ಅಂಜಲಿ ಸಹಾಯಕರಾಗಿ ಕೆ ಪಿ ಪವಾರ್ ಕಾರ್ಯನಿರ್ವಹಿಸಲಿದ್ದಾರೆ. ಅಂಜಲಿ ಅವರಿಗೆ ಝಡ್ ದರ್ಜೆಯ ಭದ್ರತೆ ಒದಗಿಸುವ ಸಾಧ್ಯತೆ ಇದೆ. ನಮ್ಮ ಕುಟುಂಬಕ್ಕೆ ಭದ್ರತೆ ನೀಡಬೇಕು ಎಂದು ಅಂಜಲಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಕಳೆದ ವರ್ಷ ನವೆಂಬರ್ ತಿಂಗಳು 26 ರಂದು ನಡೆದ ಮುಂಬೈ ಭಯೋತ್ಪಾದನೆಯಲ್ಲಿ 180 ಮಂದಿ ಮೃತಪಟ್ಟು, 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪಾಕ್ ಮೂಲದ ಲಷ್ಕರ್ ಇ ತೊಯ್ಬಾ ಈ ಕೃತ್ಯ ಎಸಗಿತ್ತು.

(ದಟ್ಸ್ ಕನ್ನಡ ವಾರ್ತೆ)
ಕಸಬ್ ಪರ ವಕೀಲರಾಗಿ ಅಂಜಲಿ ವಾಗ್ಮಾರೆ ನೇಮಕ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X