ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎ ಬಿ ಪಾಟೀಲರಿಗೆ ಜೆಡಿಎಸ್ ನಿಂದ ಉಡುಗೊರೆ

By Staff
|
Google Oneindia Kannada News

AB Patil
ಬೆಂಗಳೂರು, ಏ. 1 : ಮಂಗಳವಾರವಷ್ಟೇ ಜೆಡಿಎಸ್ ಸೇರ್ಪಡೆಗೊಂಡಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎಬಿ ಪಾಟೀಲ್ ಅವರನ್ನು ಮುಂಬೈ ಕರ್ನಾಟಕದ ಜೆಡಿಎಸ್ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಪಕ್ಷದ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕ ಎಂದೇ ಪರಿಚಿತವಾಗಿರುವ ಕಾಂಗ್ರೆಸ್ ನಲ್ಲಿ ಒಳಜಗಳಗಳಿಂದ ಬೇಸತ್ತು ಜೆಡಿಎಸ್ ಸೇರಿಕೊಂಡಿದ್ದಾರೆ. ಇದನ್ನು ರಾಜಕೀಯ ದಾಳವಾಗಿ ಬಳಸಿಕೊಂಡಿರುವ ಜೆಡಿಎಸ್ ನಾಯಕರು ಲಿಂಗಾಯಿತರ ಮತಗಳನ್ನು ಪಡೆಯಲು ಎ ಬಿ ಪಾಟೀಲ್ ರಿಗೆ ಜೆಡಿಎಸ್ ಕಾರ್ಯಾಧ್ಯಕ್ಷ ಸ್ಥಾನ ನೀಡಿದೆ. ಉತ್ತರ ಕರ್ನಾಟಕದಲ್ಲಿ ಅಭ್ಯರ್ಥಿಗಳಲ್ಲಿದೆ ಕಂಗಾಲಾಗಿದ್ದ ಜೆಡಿಎಸ್ ಪಕ್ಷಕ್ಕೆ ಇದೀಗ ಸ್ವಲ್ಪ ಶಕ್ತಿ ಬಂದಂತಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಉತ್ತರ ಕರ್ನಾಟರ ಭಾಗದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಪಾಟೀಲ್ ಅವರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಹೇಳಿದರು.

ಹುಕ್ಕೇರಿ ಕ್ಷೇತ್ರದ ಶಾಸಕರಾಗಿದ್ದ ಇವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ, ಜೆಡಿಎಸ್ ಅಭ್ಯರ್ಥಿ ಉಮೇಶ ಕತ್ತಿ ಎದುರು ಪರಾಭವಗೊಂಡಿದ್ದರು. ನಂತರ ಕತ್ತಿ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ನಂತರ ನಡೆದ ಉಪಚುನಾವಣೆಯಲ್ಲಿ ಪಾಟೀಲ್ ಸ್ಪರ್ಧಿಸಿರಲಿಲ್ಲ. ಉಮೇಶ ಕತ್ತಿ ಅವರಿಗೆ ದಾಖಲೆ ಜಯ ಲಭಿಸಿತ್ತು. ಇತ್ತೀಚೆಗೆ ಉಮೇಶ್ ಕತ್ತಿ ಅವರೆದುರು ಪಾಟೀಲ್ ಆಟ ಕುಂಠಿತಗೊಂಡಿತ್ತು.

(ದಟ್ಸ್ ಕನ್ನಡ ವಾರ್ತೆ)
ಈ ಯುಗದ ರಾಜಕಾರಣಿಗಳ ಇ ಪ್ರಚಾರ ತಂತ್ರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X