ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛೋಟಾ ಶಕೀಲ್ ನ ಐವರು ಸಹಚರರ ಬಂಧನ

By Staff
|
Google Oneindia Kannada News

ಮಂಗಳೂರು, ಮಾ. 31: ಲೋಕಸಭೆ ಚುನಾವಣೆ ವೇಳೆಯಲ್ಲಿ ಪ್ರಮುಖ ರಾಜಕಾರಣಿಗಳನ್ನು ಅಪಹರಿಸಲು ಸಂಚು ರೂಪಿಸಿದ್ದ ಐವರು ಭೂಗತ ಪಾತಕಿಗಳನ್ನು ಮಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಈ ಐವರು ಭೂಗತ ದೊರೆ ಛೋಟಾ ಶಕೀಲ್ ನ ಸಹಚರರು ಎಂದು ತಿಳಿದು ಬಂದಿದೆ ಎಂದು ಡಿಜಿಪಿ ಅಜಯ್ ಕುಮಾರ್ ಸಿಂಗ್ ತಿಳಿಸಿದರು.

ಸೋಮವಾರ ಪಶ್ಚಿಮ ವಲಯದ ವಿಶೇಷ ತನಿಖಾ ತಂಡ ಬಂಧಿಸಿರುವ ಐವರಲ್ಲಿ ಇಂಟರ್ ಪೊಲ್ ನ ವಾಂಟೆಡ್ ಪಟ್ಟಿಯಲ್ಲಿರುವ ಪಾತಕಿ ರಷೀದ್ ಮಲಬಾರಿ ಕೂಡ ಇದ್ದಾನೆ. ಪ್ರಮುಖ ರಾಜಕಾರಣಿಗಳನ್ನು ಅಪಹರಿಸುವುದು, ಹತ್ಯೆಗೈಯುವುದು ಇವರ ಉದ್ದೇಶವಾಗಿತ್ತು. ಇವೆಲ್ಲಾ ಡಾನ್ ದಾವೂದ್ ಇಬ್ರಾಹಿಂ ನ ಬಲಗೈ ಬಂಟ ಶಕೀಲ್ ನ ಯೋಜನೆ ಎಂದು ಅಜಯ್ ಕುಮಾರ್ ಸಿಂಗ್ ಹೇಳಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲದವನಾದ ರಷೀದ್ ಮಲಬಾರಿ ಅಲಿಯಾಸ್ ಡಬಲ್( 38) , ಸಹಿಲ್ ಇಬ್ರಾಹಿಂ ಇಬ್ಬರು ಸದ್ಯ ಮಹಾರಾಷ್ಟ್ರದ ಥಾಣಾ ಜಿಲ್ಲೆಯಲ್ಲಿ ನೆಲೆಯೂರಿ ಈ ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಪಿಸ್ತೂಲ್ ಹಾಗೂ 19 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಸುಮಾರು 13 ವರ್ಷಗಳಿಂದ ತಲೆ ಮರೆಸಿಕೊಂಡಿರುವ ರಷೀದ್ ಮಲಬಾರಿಯ ಮೇಲೆ 5 ಕೊಲೆ ಕೇಸುಗಳಿವೆ . ಮಲೇಷಿಯಾ ಹಾಗೂ ಇಂಟರ್ ಪೊಲ್ ಗೆ ಬೇಕಾದ ಇವನು 9 ತಿಂಗಳ ಹಿಂದೆ ನೇಪಾಳ ಮೂಲಕ ಭಾರತ ಪ್ರವೇಶಿಸಿದ್ದಾನೆ ಎಂದು ಅಜಯ್ ಕುಮಾರ್ ಮಾಹಿತಿ ನೀಡಿದರು.

ಪಾತಕಿಗಳನ್ನುಏ. 13 ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಇವರನ್ನು ಹಿಡಿದ ಪೊಲೀಸ್ ತಂಡಕ್ಕೆ 2 ಲಕ್ಷರು ಬಹುಮಾನ ಘೋಷಿಸಲಾಗಿದೆ ಎಂದು ಐಜಿಪಿ ಗೋಪಾಲ್ ಹೊಸೂರ್ ಹೇಳಿದರು.
(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X