ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ಪೊಲೀಸ್ ಕೇಂದ್ರದ ಮೇಲೆ ಉಗ್ರರ ದಾಳಿ

By Staff
|
Google Oneindia Kannada News

Pakistan police academy attacked
ಲಾಹೋರ್, ಮಾ. 30: ಶ್ರೀಲಂಕಾದ ಆಟಗಾರರ ಮೇಲೆ ಉಗ್ರರ ದಾಳಿ ನಡೆದ ಬೆನ್ನಲ್ಲೇ ಉಗ್ರರಅಟ್ಟಹಾಸ ಮುಂದುವರೆದಿದ್ದು, ಸುಮಾರು 8 ರಿಂದ 10 ಜನ ಶಸ್ತ್ರಧಾರಿ ಉಗ್ರಗಾಮಿಗಳು ಇಲ್ಲಿನ ಪೊಲೀಸ್ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿ ಸುಮಾರು 15 ಜನರನ್ನು ಕೊಂದು, 30ಕ್ಕೂ ಅಧಿಕ ಜನರನ್ನು ಗಾಯಗೊಳಿಸಿದ್ದಾರೆ.

ಸೋಮವಾರ ಬೆಳಗ್ಗೆ 7 ರ ವೇಳೆಗೆ ಸುಮಾರು 8 ಬಾರಿ ಸ್ಫೋಟದ ಸದ್ದು ಕೇಳಿಸಿತು. ಪೊಲೀಸ್ ತರಬೇತಿ ಕೇಂದ್ರದಲ್ಲಿ ಆ ಸಮಯಕ್ಕೆ ಎಲ್ಲರೂ ಪಥ ಸಂಚಲನದಲ್ಲಿ ನಿರತರಾಗಿದ್ದರು ಎಂದು ತಿಳಿದುಬಂದಿದೆ. ಸಂಪೂರ್ಣವಾಗಿ ತರಬೇತಿ ಕೇಂದ್ರವನ್ನು ತಮ್ಮ ಹತೋಟಿಗೆ ತೆಗೆದುಕೊಂಡಿರುವ ಉಗ್ರರು, ಸುಮಾರು 800 ಕ್ಕೂ ಅಧಿಕ ಪೊಲೀಸರನ್ನು ಒತ್ತೆಯಾಳು ಮಾಡಿಕೊಂಡಿದ್ದಾರೆ. ಪಾಕ್ ಸೈನಿಕರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ.

ಪೊಲೀಸ್ ಸಮವಸ್ತ್ರಧಾರಿಗಳಾದ 8 ರಿಂದ 10 ಮಂದಿ ಉಗ್ರರು, ತರಬೇತಿ ಕೇಂದ್ರ ಪ್ರವೇಶಿಸಿ ಏಕಾಏಕಿ ಗುಂಡಿನ ಮಳೆಗೆರೆದಿದ್ದಾರೆ. ಕೈಬಾಂಬು, ಗ್ರೆನೇಡು, ಗನ್ ಗಳಿಂದ ಮನಬಂದಂತೆ ಎಲ್ಲರನ್ನೂ ಕೊಂದಿದ್ದಾರೆ. ಲಾಹೋರ್ ನ ಹೊರ ಪ್ರದೇಶವಾದ ಮನವಾನ್ ನಲ್ಲಿರುವ ಈ ತರಬೇತಿ ಕೇಂದ್ರದಲ್ಲಿ ಸುಮಾರು 850 ಪೊಲೀಸರು ಇದ್ದಾರೆ. ಉಗ್ರನಿರೋಧ ದಳ ಸ್ಥಳಕ್ಕೆ ಆಗಮಿಸಿದ್ದು, ಕಾರ್ಯಾಚರಣೆ ಮುಂದುವರೆದಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X