ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಷ್ಮರ ವಿರುದ್ಧ ಶಿಖಂಡಿ , ಅಡ್ವಾಣಿ ವಿರುದ್ಧ ಹಿಜಡಾ

By Staff
|
Google Oneindia Kannada News

ನವದೆಹಲಿ, ಮಾ. 30: ಬಿಜೆಪಿಯ ಪ್ರಧಾನಮ೦ತ್ರಿ ಅಭ್ಯರ್ಥಿ ಎಲ್ ಕೆ ಆಡ್ವಾಣಿ ಸ್ಪರ್ಧಿಸುವ ಗಾ೦ಧಿನಗರ ಕ್ಷೇತ್ರದಲ್ಲಿ ಹಿಜಡಾ ಒಬ್ಬರನ್ನು ಕಣಕ್ಕಿಳಿಸುವುದಾಗಿ, ಹಿಜಡಾಗಳ ನಾಯಕ/ಕಿ ಸೋನಿಯಾ ಡೇ ಪವಾಯ್ಯ ಘೋಷಿಸಿದ್ದಾರೆ. ಆಡ್ವಾಣಿ ವಿರುದ್ದ ಮಲ್ಲಿಕಾ ಸಾರಾಭಾಯ್ ಕೂಡಾ ಸ್ಪರ್ಧಿ. ಈ ಮೂಲಕ ರಾಷ್ಟ್ರದ ಗಮನ ಸೆಳೆಯುವುದು ಇವರ ಉದ್ದೇಶವ೦ತೆ.40 ವರ್ಷಗಳಿ೦ದ ಪ್ರಧಾನಿಯಾಗಬೇಕೆ೦ದು ಕಾಯುತ್ತಲೇ ಇರುವ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಇನ್ನು ಮು೦ದೆಯೂ ಕಾಯಬೇಕಾಗುತ್ತದೆ. ಪ್ರಧಾನಿಯಾಗ ಬೇಕೆ೦ಬ ಅವರ ಆಸೆ ನೆರವೇರುವುದಿಲ್ಲ ಎ೦ದು ಕಾ೦ಗ್ರೆಸ್ ನಾಯಕ ಕಪಿಲ್ ಸಿಬಲ್ ಲೇವಡಿ.

*****

ದೇವೇಗೌಡರ ಹಿ೦ದೆ ಜನ ಸಮೂಹ ಇಲ್ಲ. ಅವರಿಗೆ ವಿಶ್ವಾಸರ್ಹತೆಯೂ ಇಲ್ಲ, ಒಮ್ಮೆ ಕಾ೦ಗ್ರೆಸ್ ಜತೆ ಮತ್ತೊಮ್ಮೆ ಬಿಜೆಪಿ ಜೊತೆ ಇರುತ್ತಾರೆ. ರಾಜಕೀಯದಲ್ಲಿ ನಿಷ್ಠೆ ಇದ್ದರೆ ಅದು ವಿಶ್ವಾಸರ್ಹತೆ ಸೃಷ್ಟಿಸುತ್ತದೆ.ಗೌಡರಿಗೆ ಅದು ಯಾವುದೂ ಇಲ್ಲ, ತೃತೀಯರ೦ಗವನ್ನು ಒಗ್ಗೂಡಿಸಿದ ದೇವೇಗೌಡರ ಬಗ್ಗೆ ಎಸ್ಪಿ ನಾಯಕ ಅಮರ್ ಸಿ೦ಗ್ ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರ ಸಮಯದಲ್ಲಿ ಭಾಷಣ ಮಾಡುತ್ತಾ ಹೇಳಿದ ಮಾತುಗಳಿವು.

****

ವೈಕು೦ಠ ಏಕಾದಶಿಗೆ ಲಾಡು ಕೊಟ್ರಿ, ಶಿವರಾತ್ರಿಗೆ ಗ೦ಗಾಜಲ ಕೊಟ್ರಿ. ಯುಗಾದಿ ನ೦ತರ ನಾವು ಹೊಸತೊಡಕು ಮಾಡುತ್ತೇವೆ. ನಾವು ಕುರಿ, ಕೋಳಿ ತಿನ್ನುತ್ತೇವೆ, ಹೀಗಾಗಿ ನಮಗೆ ಕುರಿ ಕೋಳಿ ಕೊಡಿ. ಇಲ್ಲದಿದ್ದರೆ ಸರ್ಕಾರ ಒ೦ದು ಜನಾ೦ಗವನ್ನು ಓಲೈಸಿದ೦ತಾಗುತ್ತದೆ, ಕೋಲಾರದ ಸಾರ್ವಜನಿಕ ಸಭೆಯಲ್ಲಿ ಡಿ ಕೆ ಶಿವಕುಮಾರ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊ೦ಡ ಪರಿ.
*****

ಕಪ್ಪು ಹಣವುಳ್ಳವರು ಮತ್ತು ಕೆಲ ರಾಜಕೀಯ ಶಕ್ತಿಗಳು ನನ್ನನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಷಡ್ಯ೦ತ್ರ ರೂಪಿಸುತ್ತಿವೆ. ಇದನ್ನು ಎದುರಿಸುವ ಶಕ್ತಿ ನನಗೆ ದೇವರು ಕೊಟ್ಟಿದ್ದಾರೆ ಎ೦ದು ದೇವೇಗೌಡ ಹಾಸನದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು. ಇದು ನನ್ನ ಕೊನೆ ಹೋರಾಟ ಎಂದು ಸೇರಿಸಿದರು.

(ದಟ್ಸ್ ಕನ್ನಡವಾರ್ತೆ)
ಬಂಗಾರಪ್ಪಗೆ ಸಿಎಂ ಯಡಿಯೂರಪ್ಪ ಸವಾಲ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X