ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರುಣ್ ಸ್ಪರ್ಧಿಸುವಂತಿಲ್ಲ ಆಯೋಗ

By Staff
|
Google Oneindia Kannada News

Varun gulity; EC asks BJP not to field Varun
ನವದೆಹಲಿ, ಮಾ. 23 : ಉತ್ತರಪ್ರದೇಶದ ಫಿಲಿಬಿತ್ ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಬಗ್ಗೆ ಚುನಾವಣ ಆಯೋಗ ನೀಡಿದ್ದ ನೋಟೀಸ್ ಗೆ ಬಿಜೆಪಿ ನಾಯಕ ವರುಣ್ ಗಾಂಧಿ ನೀಡಿದ್ದ ಪ್ರತಿಕ್ರಿಯೆ ತೃಪ್ತಿಕರವಾಗಿರದ ಹಿನ್ನಲೆಯಲ್ಲಿ ಕೇಂದ್ರ ಚುನಾವಣ ಆಯೋಗ, ಇವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅನರ್ಹರು ಎಂದು ತೀರ್ಮಾನಿಸಿ ಅವರನ್ನು ಕಣಕ್ಕಿಳಿಸದಂತೆ ಭಾರತೀಯ ಜನತಾ ಪಕ್ಷಕ್ಕೆ ಸಲಹೆ ನೀಡಿದೆ.

ಭಾಷಣದ ಸಿಡಿಯನ್ನು ತಿರುಚಲಾಗಿದೆ ಎನ್ನುವ ವರುಣ್ ವಾದ ನಂಬಲರ್ಹವಾಗಿಲ್ಲ. ವರುಣ್ ಪ್ರಚೋದನಕಾರಿ ಭಾಷಣ ಮಾಡಿದ್ದು ಸತ್ಯಕರವಾಗಿದೆ. ಇದು ಆಯೋಗದ ಸಲಹೆ ಮಾತ್ರ. ನಮ್ಮ ಅಭಿಮತವನ್ನು ಪರಿಶೀಲಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.

ಸಾರ್ವಜನಿಕ ಚುನಾವಣಾ ಸಭೆಯೊಂದರಲ್ಲಿ 'ಇದು ಕಮಲದ ಶಕ್ತಿ ಇರುವ ಕೈ. ಹಿಂದೂಗಳನ್ನು ಅವಹೇಳನ ಮಾಡುವವರ ತಲೆ ಕತ್ತರಿಸುವ ಶಕ್ತಿ ಈ ಕೈಗಿದೆ. ಯಾರಾದರು ಹಿಂದೂಗಳ ವಿರುದ್ದ ಕೈಯೆತ್ತಿದರೆ ಗೀತೆಯ ಮೇಲಾಣೆ ಅಂತವರ ಕೈಗಳನ್ನು ಕಡಿದು ಹಾಕುವೆ, ಜೈ ಶ್ರೀರಾಮ್" ಎಂದು ವರುಣ್ ಗಾಂಧಿ ಭಾಷಣ ಮಾಡಿದ್ದರು.

(ದಟ್ಸ್ ಕನ್ನಡ ವಾರ್ತೆ)
ನಿರೀಕ್ಷಣಾ ಜಾಮೀನು ಪಡೆದ ವರುಣ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X