ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿ ನರಸೀಪುರ : ಮರಳು ಗಣಿಗಾರಿಕೆ ನಿಷೇಧ

By Super
|
Google Oneindia Kannada News

Sand mining
ಮೈಸೂರು, ಮಾ. 18 : ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ತಾಲ್ಲೂಕು ತಲಕಾಡಿನ ಪಾರಂಪರಿಕ ಕಟ್ಟಡಗಳು ಹಾಗೂ ಸ್ಥಳಗಳ ಸಂರಕ್ಷೆಣೆಗಾಗಿ ಕೀರ್ತಿ ನಾರಾಯಣ ದೇವಸ್ಥಾನದ ಸುತ್ತ 3 ಕಿ.ಮೀ. ಪರಿಧಿಯಲ್ಲಿ ಮರಳು ಗಣಿಗಾರಿಕೆ ತಡೆಗಟ್ಟುವ ಸಲುವಾಗಿ ತಿ.ನರಸೀಪುರ ತಾಲ್ಲೂಕು ತಹಸೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿ ಎಂ.ಕೆ. ಸವಿತಾ ಅವರು ಮರಳು ಗಣಿಗಾರಿಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ತಿ. ನರಸೀಪುರ ತಾಲ್ಲೂಕಿನ ಕೆಲವು ಜೀವನಾಡಿ ಸಂಪರ್ಕ ಸೇತುವೆ ಆಜೂಬಾಜುಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು , ಇದರಿಂದ ಸೇತುವೆಗಳಿಗೆ ಬಾರಿ ಅಪಾಯ ಒದಗುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿರುವುದರಿಂದ ಸೇತುವೆಗಳ ಸುತ್ತ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆಯನ್ನು ಮಾಡದಂತೆ ಕೂಡ ನಿಷೇಧ ಹೇರಲಾಗಿದೆ.

ತಿ. ನರಸೀಪುರ ತಾಲ್ಲೂಕಿನಲ್ಲಿರುವ ತಿರುಮಕೂಡಲು ವೃತ್ತದಿಂದ ಪಟ್ಟಣವನ್ನು ಸಂಪರ್ಕಿಸುವ ಕಬಿನಿ ಸೇತುವೆ, ಸೋಸಲೆಯನ್ನು ಸಂಪರ್ಕಿಸುವ ಕಾವೇರಿ ಸೇತುವೆ, ಬನ್ನೂರಿನ ಬಳಿ ಕಾವೇರಿ ಸೇತುವೆ ಹಾಗೂ ತಲಕಾಡನ್ನು ಸಂಪರ್ಕಿಸುವ ಹೆಮ್ಮಿಗೆ ಸೇತುವೆ ಸೇರಿದಂತೆ ಈ ನಾಲ್ಕೂ ಸೇತುವೆಗಳ ಇಕ್ಕೆಲಗಳಲ್ಲಿ ಹಾಗೂ ನದಿಯ ಎರಡೂ ದಂಡೆಗಳಲ್ಲಿ ಒಂದು ಕಿ.ಮೀ. ವ್ಯಾಪ್ತಿಗೆ ಒಳಪಟ್ಟಿರುವ ನದಿ ತೀರ ಪ್ರದೇಶಗಳಲ್ಲಿ ಯಾವುದೇ ರೀತಿಯ ಮರಳು ಗಣಿಗಾರಿಕೆ ಮಾಡುವುದನ್ನು ನಿಷೇಧಿಸಿದೆ. ನಿಷೇಧ ಉಲ್ಲಂಘಿಸಿ ಅಕ್ರಮ ಮರಳು ಗಣಿಗಾರಿಕೆ ಮಾಡುವವರ ವಿರುದ್ಧ ಪೋಲೀಸರು ಕಾನೂನು ಕ್ರಮ ಜರುಗಿಸುವರು ಎಂದು ಆದೇಶದಲ್ಲಿ ತಿಳಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

English summary
Mysore district T. Narasipur taluk administration has banned illigal sand mining Tirumalkud heritage spot, Kabini, Hemmige, Bannuru bridges, order ed by Taluk administrative officer MK Savitha
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X