ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಡಗೋಡದಲ್ಲಿ ಕಲ್ಲು ತೂರಾಟ, ಪರಿಸ್ಥಿತಿ ಉದ್ವಿಗ್ನ

By Staff
|
Google Oneindia Kannada News

Mundagod is tense
ಮುಂಡಗೋಡ, ಮಾ. 16 : ಹೋಳಿ ಹಬ್ಬದ ಮೆರವಣಿಗೆ ಮೇಲೆ ಕೆಲವು ಕಿಡಿಗೇಡಿಗಳು ಭಾನುವಾರ ಕಲ್ಲು ಮತ್ತು ಚಪ್ಪಲಿ ತೂರಾಟ ನಡೆಸಿದ್ದರಿಂದ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಘಟನೆಯಲ್ಲಿ ಎಸ್ಪಿ ಸೇರಿ 15 ಮಂದಿ ಗಾಯಗೊಂಡಿದ್ದಾರೆ. 3 ಪೊಲೀಸ್ ಜೀಪ್ ಗಳು, ಹಲವು ರಿಕ್ಷಾಗಳು, ದ್ವಿಚಕ್ರ ವಾಹನ ಜಖಂಗೊಂಡಿವೆ. ಗೂಡಂಗಡಿಗಳನ್ನು ಧ್ವಂಸಗೊಳಿಸಲಾಗಿದೆ.

ಹೋಳಿ ಅಂಗವಾಗಿ ಹಳ್ಳೂರಿನಿಂದ ಕಾಮನ ಮೆರವಣಿಗೆ ಸಾಗುತ್ತಿತ್ತು. ಮೆರವಣಿಗೆ ಯಲ್ಲಾಪುರ ರಸ್ತೆಯ ಬಸ್ತಿಕಟ್ಟೆ ಬಳಿ ಬಂದಾಗ ಪ್ರಾರ್ಥನಾ ಮಂದಿರದಿಂದ ಕೆಲವರು ಚಪ್ಪಲಿ ತೂರಿದರು. ಇದರ ಹಿಂದೆಯೇ ಮೆರವಣಿಗೆ ಮೇಲೆ ನೂರಾರು ಕಲ್ಲುಗಳು ತೂರಿಬಂದವು. ಕಲ್ಲು ತೂರಾಟದಲ್ಲಿ ಕಾಮಣ್ಣನ ಮೂರ್ತಿ ಭಗ್ನಗೊಂಡಿತು. ಮೆರವಣಿಗೆಯಲ್ಲಿ ಸಾಗುತ್ತಿದ್ದವರು ಕೆರಳಿ ಪ್ರತಿಕಾರವಾಗಿ ಪ್ರಾರ್ಥನಾ ಮಂದಿರದ ಮೇಲೆ ಕಲ್ಲು ತೂರಾಟ ಆರಂಭಿಸಿದರು.

ಸುದ್ದಿ ತಿಳಿದ ತಕ್ಷಣ ಎರಡು ಕೋಮಿನ ಸಾವಿರಾರು ಮಂದಿ ಕೋಲು, ದೊಣ್ಣೆ ಹಿಡಿದು ಹಿಂಸಾಚಾರಕ್ಕಿಳಿದರು. ಗಲಭೆಯಲ್ಲಿ ಕೆಲವು ಗೂಡಂಗಡಿಗಳು ವಾಹನಗಳು ಧ್ವಂಸಗೊಂಡವು. ಪ್ರಾರ್ಥನಾ ಮಂದಿರದ ಗಾಜುಗಳು ಪುಡಿಪುಡಿಯಾದವು. ಬಸ್ ನಿಲ್ದಾಣದ ಬಳಿ ಬಸ್ಸೊಂದಕ್ಕೆ ಕೆಲವರು ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ವಿಫಲಗೊಳಿಸಿದರು. ಕೆಲವೇ ಗಂಟೆಗಳಲ್ಲಿ ಗಲಭೆ ಇಡೀ ಪಟ್ಟಣಕ್ಕೆ ವ್ಯಾಪಿಸಿತು. ಘಟನೆ ಖಂಡಿಸಿ ಹಿಂದೂ ಸಂಘಟನೆಗಳು ಇಂದು ಮುಂಡಗೋಡ ಬಂದ್ ಗೆ ಕೆರೆ ನೀಡಿವೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಹಿಂದೂಗಳು ಭಯೋತ್ಪಾದಕರು, ಫಾದರ್
ಹೋಳಿ ಆಚರಿಸೋಣು, ಓಕುಳಿ ಎರಚೋಣು ಬರ್ರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X