ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟ್ಟ ಪೋರನಾದರೂ ನಡೆದಾಡುವ ವಿಶ್ವಕೋಶ

By Staff
|
Google Oneindia Kannada News

Pranav veer
ಶಿಕಾಗೋ, ಮಾ. 13 : ವೈಜ್ಞಾನಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಅಲ್ಬರ್ಟ್ ಐನ್ ಸ್ಟೀನ್ ಜಗತ್ತು ಕಂಡು ಅಸಾಮಾನ್ಯ ಪ್ರತಿಭಾವಂತ. ಆದರೆ, ಒಂದು ಆಶ್ಚರ್ಯಕರ ಸಂಗತಿಯೆಂದರೆ, ಭಾರತೀಯ ಮೂಲದ ಅಮೆರಿಕ ನಿವಾಸಿ ಪ್ರಸಾದ್ ವೀರ್ ಹಾಗೂ ಸುಚಿತ್ರ ದಂಪತಿಗಳ ಪುತ್ರ ಪ್ರಣವ್ ವೀರ್ ಐನ್ ಸ್ಟೀನ್ ಹೊಂದಿದ್ದ ಹೆಚ್ಚಿನ ಐಕ್ಯೂ ಮಟ್ಟವನ್ನು ಹೊಂದಿದ್ದು, 6ರ ಹರೆಯದಲ್ಲಿಯೇ ತಾನೊಬ್ಬ ಪ್ರತಿಭಾವಂತ ಎಂಬುದನ್ನು ಸಾಬೀತು ಮಾಡಿದ್ದಾನೆ.

ಬೆಳೆಯುವ ಸಿರಿ ಮೊಳೆಕೆಯಲ್ಲಿ ಎನ್ನುವ ಗಾದೆ ಅನ್ವರ್ಥಕ ಎಂಬಂತಿರುವ ಪ್ರಣವ್, ಅಪಾರ ಬುದ್ಧಿಶಕ್ತಿಯನ್ನು ಹೊಂದಿದ್ದಾನೆ. 6 ವರ್ಷದ ಈ ಮಗುವಿನ ಐಕ್ಯೂ ಮಟ್ಟ 176 ಎಂದು ವೈದ್ಯರು ಖಚಿತಪಡಿಸಿದ್ದಾರೆ. ಅದರೆ, ಖ್ಯಾತ ವಿಜ್ಞಾನ ಅಲ್ಬರ್ಟ್ ಐನ್ ಸ್ಟೀನ್ ಅವರ ಐಕ್ಯೂ ಮಟ್ಟ 160 ಎಂದು ದಾಖಲೆಗಳು ಹೇಳುತ್ತವೆ. ಅವರಿಗಿಂತ ಹೆಚ್ಚಿನ ಬುದ್ಧಮಟ್ಟ ಹೊಂದಿರುವ ಪ್ರಣವ್, ಪ್ರಚಂಡವಾದ ನೆನಪಿನ ಶಕ್ತಿ ಇದೆ. ಅಮೆರಿಕ ದೇಶದ ಅಧಿಕಾರ ಚುಕ್ಕಾಣಿ ಹಿಡಿದ ಅಷ್ಟೂ ಅಧ್ಯಕ್ಷ ಹೆಸರನ್ನು ಅರಳು ಹುರಿದಂತೆ ಪಟಪಟನೆ ಹೇಳುತ್ತಾನೆ. 2000 ವರ್ಷದಿಂದ ಈಚೆಗೆ ನಡೆದ ಪ್ರಮುಖ ಘಟನಾವಳಿಗಳು, ಇಸ್ವಿ, ದಿನಾಂಕ, ಘಟನೆ ಹೀಗೆ ಪ್ರತಿಯೊಂದನ್ನು ಚಾಚು ತಪ್ಪದೆ ನಿಖರ ಹೇಳುವ ಮೂಲಕ ಎಲ್ಲರನ್ನೂ ನಿಬ್ಬೆರಗುಗೊಳಿಸುತ್ತಾನೆ.

ಈತನ ತಂದೆ ಪ್ರಸಾದ್ ವೀರ್ ಹಾಗೂ ತಾಯಿ ಸುಚಿತ್ರಾ ಪುತ್ರ ಜಾಣ್ಮೆಗೆ ಸಂತಸ ವ್ಯಕ್ತಪಡಿಸುತ್ತಾರೆ. ಶಾಲೆಯಲ್ಲಿ ಪ್ರಣವ್ ಹಿರೋ, ಶಿಕ್ಷಕಿಯರು ಈತನನ್ನು ಕಂಡರೆ ಅಕ್ಕರೆ. ಮುಂದೊಂದು ದಿನ ಪ್ರಣವ್ ದೊಡ್ಡ ಸಾಧನೆ ಮಾಡಲಿದ್ದಾನೆ ಎಂದು ಅವನು ವಿದ್ಯಾಭ್ಯಾಸ ಮಾಡುವ ಶಾಲಾ ಶಿಕ್ಷಕಿಯರು ಹೆಮ್ಮೆಯಿಂದ ಹೇಳುತ್ತಾರೆ. ನಾನೊಬ್ಬ ಬಾಹ್ಯಾಕಾಶ ವಿಜ್ಞಾನಿಯಾಗಬೇಕು ಪ್ರಣವ್ ತನ್ನ ಅಭಿಲಾಷೆ ವ್ಯಕ್ತಪಡಿಸುತ್ತಾನೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X