ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ, ಉಡುಪಿಯಿಂದ ಮುತಾಲಿಕ್ ಸ್ಪರ್ಧೆ ?

By Staff
|
Google Oneindia Kannada News

Mutalik likely to contest Udupi LS segment
ಉಡುಪಿ, ಮಾ. 13 : ಸ್ವಾಭಿಮಾನ ಹಿಂದೂ ವೇದಿಕೆ ಮತ್ತು ರಾಷ್ಟ್ರೀಯ ಹಿಂದೂ ಸೇನೆ ತನ್ನ ಅಭ್ಯರ್ಥಿಗಳನ್ನು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸುವ ಮೂಲಕ ಬಿಜೆಪಿಯ ಅಭ್ಯರ್ಥಿ ಸದಾನಂದಗೌಡರಿಗೆ ಸಡ್ಡು ಹೊಡೆಯಲು ನಿರ್ಧರಿಸಿದೆ. ಇಲ್ಲಿಂದ ಸ್ಪರ್ಧಿಸುವ೦ತೆ ರಾಷ್ಟ್ರೀಯ ಹಿಂದೂ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಅವರಿಗೆ ಕಾರ್ಯಕರ್ತರು ತೀವ್ರ ಒತ್ತಡ ಹೇರುತ್ತಿದ್ದಾರೆ.

ಶ್ರೀರಾಮಸೇನೆಯ ಕಾರ್ಯಕಾರಿಣಿಯಲ್ಲಿ ಹಿಂದೂಗಳ ಪರ ಸಂಸತ್ತಿನಲ್ಲಿ ಧ್ವನಿಯೆತ್ತಲು ಪ್ರಮೋದ್ ಮುತಾಲಿಕ್ ಯೋಗ್ಯ ವ್ಯಕ್ತಿ ಎಂದು ನಿರ್ಧರಿಸಿ ಮುತಾಲಿಕ್ ಮೇಲೆ ಒತ್ತಡ ತರಲು ನಿರ್ಧರಿಸಲಾಗಿದೆ ಎಂದು ಸೇನೆ ಕಾರ್ಯದರ್ಶಿ ತಿಳಿಸಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಸ್ವಾಭಿಮಾನಿ ವೇದಿಕೆಯ ಸದಸ್ಯರಾದ ಅಣ್ಣಾ ವಿನಯಚಂದ್ರ ಮತ್ತು ಕೃಷ್ಣ ಬೋರ್ಕರ್ ಉಡುಪಿಗೆ ಭೇಟಿ ನೀಡಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಒಂದು ವೇಳೆ ಮುತಾಲಿಕ್ ಒಪ್ಪದಿದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ರಾಘವೇಂದ್ರ ಆಚಾರ್ಯ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಬಿಎಸ್ ವೈ ಸರ್ಕಾರಕ್ಕೆ ನಾನಾ ಕಷ್ಟಗಳು: ಕೋಡಿ ಮಠ
ಲೋಕಸಭಾ ಕ್ಷೇತ್ರಗಳ ಮತದಾರ ವಿವರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X