• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿವಿಜಿ ಅವರ 122ನೇ ಜನ್ಮದಿನಾಚರಣೆ

By Staff
|

ಬೆಂಗಳೂರು, ಮಾ. 13 : ಐಟಿ ಕ್ಷೇತ್ರದ ಉತ್ಸಾಹಿ ಯುವಪಡೆಯನ್ನು ಹೊಂದಿರುವ ನಗರದ 'ಸಮಾಜ ಸೇವಕರ ಸಮಿತಿ'ಯವರು ಮಾರ್ಚ್ 17ರಂದು ದಾರ್ಶನಿಕ ಸಾಹಿತಿ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ(ಡಿವಿಜಿ) ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಡಿವಿಜಿಯವರ ವ್ಯಕ್ತಿತ್ತ್ವ ಮತ್ತು ಸಾಹಿತ್ಯದ ಪ್ರಚಾರ ಸಂಸ್ಥೆಯ ಪ್ರಮುಖ ಉದ್ದೇಶಗಳಲ್ಲೊಂದಾಗಿದೆ. ಈ ಅಂಗವಾಗಿ ಸತತವಾಗಿ ನಾಲ್ಕನೆ ವರ್ಷ ಕೂಡ ಸಾರ್ವಜನಿಕರು, ಸಾಹಿತ್ಯಾಭಿಮಾನಿಗಳು ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮದ ಉದ್ದೇಶ ಈಡೇರಬಹುದೆಂಬ ನಿರೀಕ್ಷೆ ಹೊಂದಿದ್ದೇವೆ ಎಂದು ಸಂಸ್ಥೆಯ ಮುಖ್ಯಸ್ಥ ರಾಜ್ ಕುಮಾರ್ ದಟ್ಸ್ ಕನ್ನಡಕ್ಕೆ ತಿಳಿಸಿದರು.

ಡಿ.ವಿ. ಗುಂಡಪ್ಪನವರು ಬಾಳಿ ಬದುಕಿದ್ದು 19 ಮತ್ತು 20 ನೆಯ ಶತಮಾನಗಳಲ್ಲಿ. ಕನ್ನಡ ನೆಲದಲ್ಲಿ ಜನಿಸಿ ಸಾಹಿತ್ಯ, ವೃತ್ತಪತ್ರಿಕೆ, ರಾಜಕೀಯ, ಸಾಮಾಜಿಕ ಸಂಘಟನೆ, ಸಾರ್ವಜನಿಕ ಸೇವೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದ ಗುಂಡಪ್ಪನವರು ವಿರಳರಲ್ಲಿ ವಿರಳರು. ಇಂತಹ ಮಹಾನ್ ವ್ಯಕ್ತಿ ಯಾವುದಾದರೂ ಮುಂದುವರಿದ ರಾಷ್ಟ್ರದಲ್ಲಿ ಜನಿಸಿದ್ದರೆ ಅಲ್ಲಿನ ಅತ್ಯುನ್ನತ ಪದವಿಯನ್ನು ಅಲಂಕರಿಸುತ್ತಿದ್ದರು ಎಂಬುದು ಅವರನ್ನು ಅಭ್ಯಸಿಸಿದ ಮತ್ತು ಹತ್ತಿರದಿಂದ ಕಂಡ ಗಣ್ಯ ವ್ಯಕ್ತಿಗಳ ಸ್ಪಷ್ಟವಾದ ಅಭಿಪ್ರಾಯವಾಗಿದೆ.

ಡಿವಿಜಿಯವರನ್ನು ಇಂದಿನ ಜನಾಂಗಕ್ಕೆ ಪರಿಚಯಿಸುವ ಸದುದ್ದೇಶದಿಂದ ಸಮಾಜ ಸೇವಕರ ಸಮಿತಿಯು ಕಿರುಚಿತ್ರವೊಂದನ್ನು ನಿರ್ಮಿಸುತ್ತಿದೆ. ಡಿವಿಜಿಯವರನ್ನು ಕಣ್ಣಾರೆ ಕಂಡಿದ್ದ, ಅವರ ಸಾಹಿತ್ಯ ಕಾರ್ಯದಲ್ಲಿ ಒಡನಾಟದಲ್ಲಿದ್ದ, ಅವರ ಶಿಷ್ಯತ್ವವನ್ನು ಸ್ವೀಕರಿಸಿದ್ದ, ಅವರ ಸಾಹಿತ್ಯವನ್ನು ಅಭ್ಯಸಿಸಿರುವ ಮಹನೀಯರು ಮತ್ತು ಡಿವಿಜಿ ಕುಟುಂಬಸ್ಥರನ್ನು ಸಂದರ್ಶನ ಮಾಡಿರುವ ದೃಶ್ಯಗಳು, ಇಂದಿನ ಡಿವಿಜಿ ರಸ್ತೆಯ ದೃಶ್ಯಗಳನ್ನು ಈ ಕಿರುಚಿತ್ರ ಒಳಗೊಂಡಿರುತ್ತದೆ. ಈ ಚಿತ್ರವನ್ನು ಮಾರ್ಚ್ 17ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರದರ್ಶಿಸುವ ಗುರಿಯನ್ನು ಹೊಂದಿದೆ, ಆ ಸಲುವಾಗಿಯೇ ಭರದಿಂದ ಕಾರ್ಯ ಸಾಗುತ್ತಿದೆ. ಈ ಕೆಲಸವನ್ನು ಅಂದುಕೊಂಡ ಸಮಯದಲ್ಲೇ ಸಾಧಿಸುವ ನಂಬಿಕೆಯನ್ನಿಟ್ಟುಕೊಂಡಿದೆ.

ಕಾರ್ಯಕ್ರಮ ವಿವರ:

ಡಿವಿಜಿಯವರ 122ನೆಯ ಜನ್ಮದಿನದ ಶೀರ್ಷಿಕೆಯಾಗಿ "ತಬ್ಬಿಕೊಳೊ ವಿಶ್ವವನು - ಮಂಕುತಿಮ್ಮ" ಎಂದಿಟ್ಟುಕೊಳ್ಳಲಾಗಿದೆ. ಡಿವಿಜಿಯವರಿಂದ ಸ್ಥಾಪಿತವಾದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಎಸ್. ಆರ್. ರಾಮಸ್ವಾಮಿಯವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುತ್ತಾರೆ. ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿಯವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಿವಿಜಿಯವರ "ಮೈಸೂರಿನ ದಿವಾನರು" - ಜ್ಞಾಪಕ ಚಿತ್ರಶಾಲೆ ಮತ್ತು ಪ್ರಹಸನ ತ್ರಯೀ ನಾಟಕವನ್ನು ಆಧರಿಸಿದ "ತಲ್ಲಣಿಸುತಿದೆ ಜನಗಣಮನ..." ಎಂಬ ಕಿರುನಾಟಕವೊಂದನ್ನು ಪ್ರದರ್ಶಿಸಲಾಗುತ್ತಿದೆ. ಪರಿಕಲ್ಪನೆ, ರಚನೆ ಮತ್ತು ನಿರ್ದೇಶನದ ಹೊಣೆ ಹೊತ್ತಿರುವವರು ವೇದಪುಷ್ಪ. ಗಾಯನ ಡಾ. ರೋಹಿಣಿ ಮೋಹನ್‌ರವರದು. ಸಮಿತಿಯ ಸದಸ್ಯರು ಅಭಿನಯಿಸುತ್ತಿದ್ದಾರೆ.

ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ಸಮಯ:

ಏ.ಡಿ.ಏ ರಂಗ ಮಂದಿರ, ಜೆ. ಸಿ. ರಸ್ತೆ, ಬೆಂಗಳೂರು

ದಿನಾಂಕ: ಮಾರ್ಚ್ 17, 2009, ಮಂಗಳವಾರ

ಸಮಯ: ಸಂಜೆ 5 ಗಂಟೆಗೆ

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

ರಾಜ ಕುಮಾರ್ - 94481 71069

ನವೀನ - 98868 22119

ರಾಘವೇಂದ್ರ - 98866 83008

ಎಲ್ಲರಿಗೂ ಮುಕ್ತ ಹೃದಯದ ಸ್ವಾಗತವನ್ನು ಬಯಸುವವರು ಸಮಾಜ ಸೇವಕರ ಸಮಿತಿಯ ಸದಸ್ಯರು.

(ದಟ್ಸ್ ಕನ್ನಡ ಸಭೆ ಸಮಾರಂಭ)

ಪೂರಕ ಓದಿಗೆ

ಕನ್ನಡದ ಹೆಮ್ಮೆಯ ಸಾರುವ ಟೀ ಶರ್ಟ್ಗಳು

ಕನ್ನಡಿಗರ ಮನದಲ್ಲಿ ಆತ್ಮ ವಿಶ್ವಾಸ ತುಂಬುವ ಟೀ ಶರ್ಟ್!

ಒಂದೇ ಟಿ ಶರ್ಟಿನ ಎರಡು ಮುಖಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X