ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜನಾಥ್ ವಿರುದ್ಧ ಜೈಟ್ಲಿ ಮುನಿಸು, ಸಭೆಗೆ ಗೈರು

By Staff
|
Google Oneindia Kannada News

Arun Jaitley skips BJP election meeting
ನವದೆಹಲಿ, ಮಾ. 13 : ಚುನಾವಣೆ ಸಮೀಪಿಸುತ್ತಿರುವ ಈ ಗಳಿಗೆಯಲ್ಲಿ ಶಿಸ್ತಿನ ಪಕ್ಷ ಎಂದು ಹೆಗ್ಗಳಿಕೆ ಹೊಂದಿರುವ ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ವೈಮನಸ್ಸು ಸ್ಫೋಟಗೊಂಡಿದೆ. ಬಿಜೆಪಿ ಪಕ್ಷದ ಕೇಂದ್ರ ಚುನಾವಣೆ ಸಮಿತಿ ಇಂದು ಕರೆದಿದ್ದ ಮಹತ್ವದ ಸಭೆಗೆ ಹಿರಿಯ ನಾಯಕ ಅರುಣ್ ಜೈಟ್ಲಿ ಗೈರಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ದೆಹಲಿ, ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗಾಗಿ ಸಭೆಯನ್ನು ಕರೆಯಲಾಗಿತ್ತು. ಆದರೆ, ಈಶಾನ್ಯ ಭಾಗದ ಚುನಾವಣೆ ಪ್ರಚಾರದ ನೇತೃತ್ವ ವಹಿಸಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ರಾಜನಾಥ್ ಸಿಂಗ್ ಅವರೊಂದಿಗೆ ಉಂಟಾಗಿರುವ ಮನಸ್ತಾಪವೇ ಜೈಟ್ಲಿ ಗೈರು ಹಾಜರಾಗಲು ಕಾರಣವಾಗಿದೆ. ಈಶಾನ್ಯ ಭಾಗದ ಪಕ್ಷ ಪ್ರಚಾರ ಸಮಿತಿಗೆ ಸುದಾಂಶು ಮಿತ್ತಲ್ ಅವರನ್ನು ನೇಮಕರ ಮಾಡಿರುವುದು ಜೈಟ್ಲಿ ಮುನಿಸಿಕೊಂಡಿದ್ದಾರೆ. ಸುದಾಂಶು ಅವರು ರಾಜನಾಥ್ ಸಿಂಗ್ ಅವರ ಆಪ್ತರು ಎಂದು ಮೂಲಗಳು ಹೇಳಿವೆ.

ಜೈಟ್ಲಿ ಗೈರು ಸಭೆಯಲ್ಲಿ ನೂರೆಂಟು ಪ್ರಶ್ನೆಗಳಿಗೆ ಕಾರಣವಾಯಿತು. ಲೋಕಸಭೆ ಚುನಾವಣೆಯ ಸೂಕ್ಷ್ಮ ಗಳಿಗೆಯಲ್ಲಿ ಈ ರೀತಿಯ ವರ್ತಿನೆ ಪಕ್ಷದ ಭಾರಿ ಪರಿಣಾಮ ಬೀರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಬಿಹಾರದಲ್ಲಿರುವ 40 ಲೋಕಸಭೆ ಕ್ಷೇತ್ರದಲ್ಲಿ ಜೆಡಿಯು 24 ಕ್ಷೇತ್ರ ಹಾಗೂ ಉಳಿದ 16 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶದ, ಒರಿಸ್ಸಾ ವಿಧಾನಸಭೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಸಭೆಯಲ್ಲಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಸೇರಿ ಅನೇಕ ಮುಖಂಡರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X