ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರರೇ ನಿಮ್ಮ ಹೆಸರು ಮತಪಟ್ಟಿಯಲ್ಲಿದೆಯೇ?

By Staff
|
Google Oneindia Kannada News

ಬೆಂಗಳೂರು, ಮಾರ್ಚ್.12: ಮತದಾರರು ತಮ್ಮ ಹೆಸರು ಮತಪಟ್ಟಿಯಲ್ಲಿ ಇದ್ದೇ ಇರುತ್ತದೆಂಬ ಭಾವನೆಯಿಂದ ಇರದೆ ಈ ಬಗ್ಗೆ ಮೊದಲೇ ಖಚಿತಪಡಿಸಿಕೊಳ್ಳಬೇಕು, ಯಾವ ಮತದಾನ ಕೇಂದ್ರದಲ್ಲಿದೆ, ಕ್ರಮಸಂಖ್ಯೆಯೇನು ಮುಂತಾದ ವಿವರಗಳನ್ನು ಖಚಿತಪಡಿಸಿಕೊಂಡಲ್ಲಿ ಈಗಲೂ ಸಹ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಸೇರ್ಪಡೆಗೆ ಅವಕಾಶವಿದೆ.

ನಮ್ಮ ನಗರಗಳಲ್ಲಿನ 50 ಮತದಾರರ ಸೇವಾ ಕೇಂದ್ರಗಳ ಮುಖಾಂತರ ಈವರೆಗೆ ಸುಮಾರು 3.4 ಲಕ್ಷ ಮತದಾರರು ಸಹಾಯ ಪಡೆದಿದ್ದಾರೆ . ಅವರಲ್ಲಿ 1.9 ಲಕ್ಷ ಜನರಿಗೆ ಎಪಿಕ್ ಕಾರ್ಡ್ ನೀಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಎಂ.ಎನ್. ವಿದ್ಯಾಶಂಕರ್ ತಿಳಿಸಿದರು. ಅವರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ನಗರ ಸೇವಾ ಕೇಂದ್ರಗಳಲ್ಲಿ ಹಿಂದುಳಿದ ವರ್ಗಗಳು, ಕೊಳಚೆ ನಿವಾಸಿಗಳಿಗೆ (ಹೆಚ್ಚಿನ ದಾಖಲಾತಿಗಳ ಲಭ್ಯತೆ ಇಲ್ಲದ ಕಾರಣ) ಹೆಚ್ಚಿನ ಆದ್ಯತೆ ಮೇಲೆ ನೆರವು ನೀಡಲಾಗುತ್ತಿದೆಯೆಂದು ಅವರು ತಿಳಿಸಿದರು.

ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಮದ್ಯದ ಸಾಗಣೆ, ಮಾರಾಟ ಕುರಿತಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಅಕ್ರಮ ಮದ್ಯಸಾಗಣೆ ಅಥವಾ ಮಾರಾಟ ಪ್ರತಿಕ್ರಿಯೆಯು ಯಾವ ಜಿಲ್ಲೆಯಿಂದ ಆರಂಭಗೊಂಡಿವೆ, ಯಾವುದು ಮೂಲ ಕಾರಣಕರ್ತ ಜಿಲ್ಲೆಯಾಗಿದೆಯೋ ಅಲ್ಲಿನ ಅಬಕಾರಿ ಜಿಲ್ಲಾಧಿಕಾರಿಯನ್ನು ಈ ಬಗ್ಗೆ ಜವಾಬ್ದಾರನ್ನಾಗಿ ಮಾಡಲು ನಿರ್ಣಯಿಸಲಾಗಿದೆ. ಸಂಚಾರಿ ದಳ, ಸ್ಥಾವರಗಳ ಮೂಲಕ ದಿನಂಪ್ರತಿ ಈ ಸಂಬಂಧ ವಿವರಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳು ಪಡೆಯುವ ವ್ಯವಸ್ಥೆ ಮಾಡಲಾಗಿದೆಯೆಂದರು.

ವಾಣಿಜ್ಯ ತೆರಿಗೆ ಇಲಾಖೆ, ಬ್ಯಾಂಕಿಂಗ್ ಸಂಸ್ಥೆಗಳು ಮತ್ತಿತರ ಹಣಕಾಸು ಸಂಸ್ಥೆಗಳೊಂದಿಗೆ ಮಾರ್ಚ್ 12ರಂದು ಸಭೆ ನಡೆಸಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಹಣಕಾಸು ಹಂಚಿಕೆ ಕುರಿತಂತೆ ಸಾಕಷ್ಟು ದೂರುಗಳು ಬಂದಿದ್ದ ಕಾರಣ ಈ ಮುನ್ನಚ್ಚರಿಕೆ ತೆಗೆದುಕೊಳ್ಳಲಾಗುತ್ತದೆಯೆಂದರು. ಆ ಸಂಸ್ಥೆಗಳಲ್ಲಿ ಇತರ ವೇಳೆಗಿಂತ ಈ ಅವಧಿಯಲ್ಲಿ ಹೆಚ್ಚಿನ ಹಣಕಾಸು ವ್ಯವಹಾರ ಜರುಗಿದ ವಿವರ ಪಡೆದು ಅದನ್ನು ಆಧರಿಸಿ ನಿರ್ಧಾರಕ್ಕೆ ಬರಲಾಗುತ್ತದೆ. ಪೊಲೀಸ್ ಇಲಾಖೆ ಡಿ.ಜಿ. ಇನ್ಸ್‌ಪೆಕ್ಟರ್ ಜನರಲ್ ರೊಂದಿಗೆ ಕಾನೂನು ಸುವ್ಯವ್ಯಸ್ಥೆ ಕುರಿತಂತೆ ಚರ್ಚಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ 15ರಿಂದ 16 ಹುದ್ದೆಗಳು ಖಾಲಿಯಿದ್ದು ಅವುಗಳನ್ನು ಭರ್ತಿ ಮಾಡುವ ಬಗ್ಗೆ ಸಹ ಚರ್ಚಿಸಲಾಗಿದೆ ಎಂದು ಸಹ ವಿದ್ಯಾಶಂಕರ್ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X