ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸೋಲಿಸಲು ಪ್ರಕಾಶ್ ಕಾರಟ್ ಮನವಿ

By Staff
|
Google Oneindia Kannada News

Defeat Communal forces, Karat
ದಾಬಸ್ ಪೇಟೆ, ಮಾ.12: ದಕ್ಷಿಣ ಭಾರತದ ಪ್ರತಿಷ್ಠಿತ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ಕೋಮುವಾದಿ ಭಾರತೀಯ ಜನತಾ ಪಕ್ಷದ ಕೈಯಲ್ಲಿ ಸಿಕ್ಕಿರುವುದು ದುರದೃಷ್ಟಕರ ಸಂಗತಿ. ಬಿಜೆಪಿ ಅಧಿಕಾರಕ್ಕೆ ಬಂದು ಆರು ತಿಂಗಳಲ್ಲೇ ತನ್ನ ನಿಜ ಸ್ವರೂಪ ಏನೆಂಬುದನ್ನು ಪ್ರಸ್ತುತಪಡಿಸಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ದಾಳಿ ಜನಮಾನಸದಿಂದ ಇನ್ನೂ ಅಳಿಸಿಲ್ಲ ಎಂದು ಸಿಪಿಐ(ಎಂ) ಪ್ರದಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಬಿಜೆಪಿ ಸರ್ಕಾರದ ವಿರುದ್ದ ತೀವ್ರ ವಾಗ್ಧಾಳಿ ನಡೆಸಿದರು.

ದಾಬಸ್ ಪೇಟೆಯಲ್ಲಿ ಆಯೋಜಿಸಲಾಗಿರುವ ತೃತೀಯ ರಂಗದ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಕನ್ನಡಿಗರೆ ನಿಮ್ಮಲ್ಲಿ ನನ್ನದೊಂದು ಕಳಕಳಿಯ ವಿನಂತಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿ ಎಂದು ಮನವಿ ಮಾಡಿಕೊಂಡರು. ನಾವೆಲ್ಲರೂ ಸೇರಿ ಶಾಂತಿ ಸೌಹಾರ್ದಯುತ ದೇಶ ಕಟ್ಟೋಣ ಎಂದು ಕಾರಟ್ ಹೇಳಿದರು.

ಕರ್ನಾಟಕವನ್ನು ಇನ್ನೊಂದು ಗುಜರಾತ ಮಾಡಲು ಬಿಡುವುದಿಲ್ಲ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಆರು ಕಳೆದಿಲ್ಲ. ಆಗಲೇ ರಾಜ್ಯ ಏನೆಲ್ಲಾ ಘಟನೆಗಳು ಸಂಭವಿಸಿವೆ. ಒಂದು ಸಾರಿ ಆತ್ಮಾವಲೋಕನ ಮಾಡಿಕೊಂಡು, ನಿಮ್ಮ ಅಮೂಲ್ಯ ಮತ ಚಲಾಯಿಸಿ ಎಂದ ಸಲಹೆ ನೀಡಿದ ಅವರು, ಕರ್ನಾಟಕದಲ್ಲಿ ಬಿಜೆಪಿಯನ್ನು ಕಿತ್ತೊಗೆಯಲು ದೇವೇಗೌಡರೊಂದಿಗೆ ಹೋರಾಟ ಆರಂಭಿಸುವುದಾಗಿ ಹೇಳಿದರು.

ಎನ್ ಡಿಎ ಹಾಗೂ ಯುಪಿಎಗೆ ತೃತೀಯ ರಂಗ ಪರ್ಯಾಯ ಶಕ್ತಿ, ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತದಿಂದ ಬೇಸತ್ತಿರುವ ಜನರು ತೃತೀಯರಂಗದ ಕಡೆಗೆ ವಾಲುತ್ತಿದ್ದಾರೆ ಎಂದು ಹೇಳಿದರು. ಯುಪಿಎ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ನಿರುದ್ಯೋಗಿ ಸಮಸ್ಯೆ ಬೃಹದಾಕಾರವಾಗಿ ಬೆಳೆಗಿದೆ. ಆರ್ಥಿಕ ಹಿಂಜರಿತವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಿಲ್ಲ. ದೇಶ ವಿರೋಧಿ ಪರಮಾಣ ಒಪ್ಪಂದ ಮಾಡಿಕೊಂಡಿದ್ದಾರೆ. ಬ್ಯಾಂಕುಗಳ ಖಾಸಗೀಕರಣ ಎಲ್ಲವೂ ಜನವಿರೋಧಿ ಕೆಲಸಗಳೆ ಎಂದು ಕಾರಟ್ ಯುಪಿಎ ಸರ್ಕಾರದ ಮೇಲೆ ಮುಗಿಬಿದ್ದರು.

(ದಟ್ಸ್ ಕನ್ನಡ ವಾರ್ತೆ)
ಬಿಜೆಪಿ ಕಿತ್ತೊಗೆಯಲು ತೃತೀಯ ರಂಗದ ಸಮಾವೇಶ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X