ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತರಬೇತಿ,ಸಾಮರ್ಥ್ಯದಿಂದ ಉತ್ತಮ ಆಡಳಿತ: ಅಮಿತಾ

By Staff
|
Google Oneindia Kannada News

ಮೈಸೂರು, ಮಾ. 11 : ತರಬೇತಿ ಮತ್ತು ಸಾಮರ್ಥ್ಯ ಅಭಿವೃದ್ಧಿ ಉತ್ತಮ ಆಡಳಿತಕ್ಕೆ ಅನಿವಾರ್ಯವೆಂದು ಆಡಳಿತ ತರಬೇತಿ ಸಂಸ್ಥೆಯ ಮಹಾನಿರ್ದೇಶಕಿ ಡಾ. ಅಮಿತಾ ಪ್ರಸಾದ್‌ ಹೇಳಿದರು. ನೇಪಾಳ್ ದೇಶದ ಆಡಳಿತ ಸುಧಾರಣಾ ಆಯೋಗದ ಸದಸ್ಯರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು. ಮೈಸೂರಿನ ಆಡಳಿತ ತರಬೇತಿ ಸಂಸ್ಥೆ, ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ರಾಜ್ಯ ನಗರಾಭಿವೃದ್ಧಿ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿದ್ದ 2 ದಿನಗಳ ತರಬೇತಿ ಮತ್ತು ಆಡಳಿತ ಸುಧಾರಣೆಗಳ ಬಗ್ಗೆ ಪರಿಚಯದ ಕಾರ್ಯಕ್ರಮ ಮಾರ್ಚ್ 9 ಮತ್ತು 10 ರಂದು ಮೈಸೂರಿನಲ್ಲಿ ನಡೆಯಿತು.

ನೇಪಾಳ ದೇಶದ ಆಡಳಿತ ಸುಧಾರಣಾ ಆಯೋಗದ 13 ಸದಸ್ಯರಿಗೆ ಭಾರತ ಸಾರ್ವಜನಿಕ ಆಡಳಿತ ಸಂಸ್ಥೆ, ನವದೆಹಲಿ ಆಯೋಜಿಸಿದ್ದ ಸಾಮರ್ಥ್ಯ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆಗಳ ನಿರ್ವಹಣೆ ಕುರಿತ ಕಾರ್ಯಕ್ರಮದ ಅಂಗವಾಗಿ ಮೈಸೂರಿಗೆ ತಂಡವು ಭೇಟಿ ನೀಡಿತ್ತು. ಭಾರತದಲ್ಲಿ ರಾಷ್ಟ್ರೀಯ ತರಬೇತಿ ನೀತಿ 1996ರ ಅನ್ವಯ ವಿಶಿಷ್ಟವಾದ ರೀತಿಯಲ್ಲಿ ರಾಜ್ಯಗಳು ಎಲ್ಲಾ ಭಾಗಿದಾರರಿಗೆ ತರಬೇತಿಯನ್ನು ನೀಡಲು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿವೆ ಎಂದು ಡಾ. ಪ್ರಸಾದ್ ತಿಳಿಸಿದರು.

ವಿವಿಧ ರಾಜ್ಯಗಳಲ್ಲಿ ಕ್ರಮಬದ್ಧವಾದ ತರಬೇತಿಯನ್ನು ಬೇಕಾದ ಅಗತ್ಯತೆಗಳನ್ನು ವಿಶ್ಲೇಷಿಸಿ ಜ್ಞಾನ ಮತ್ತು ನೈಪುಣ್ಯ ಹಾಗೂ ಮನೋಭಾವಗಳ ಕೊರತೆಯನ್ನು ನೀಗಿಸಲು ತರಬೇತಿಯ ಅನುಷ್ಠಾನಗೊಳಿಸಲಾಗುತ್ತಿದೆ. ಈ ದಿಕ್ಕಿನಲ್ಲಿ ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಆಡಳಿತ ತರಬೇತಿ ಸಂಸ್ಥೆಗಳು ಪರಿಣಾಮಕಾರಿಯಾಗಿ ತರಬೇತಿಯನ್ನು ನೀಡುತ್ತಿವೆ ಎಂದರು. ಕರ್ನಾಟಕ ರಾಜ್ಯದಲ್ಲಿ "ಭೂಮಿ" "ನೆಮ್ಮದಿ" ಯಂತಹ ಸೇವಾ ಸೌಲಭ್ಯಗಳು ಮತ್ತು ಈಗಾಗಲೇ 5 ಲಕ್ಷ ಜನರನ್ನು ತಲುಪಿರುವ ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮಗಳು ಈಗ ಯಶೋಗಾಥೆಗಳಾಗಿ ಆಡಳಿತ ಸುಧಾರಣೆಗೆ ಕರ್ನಾಟಕದಲ್ಲಿ ವಿಶಿಷ್ಟವಾಗಿವೆ ಎಂದರು.

ನೇಪಾಳ ಆಡಳಿತ ಸುಧಾರಣಾ ಆಯೋಗ ತಂಡಕ್ಕೆ ಉಪಗ್ರಹ ಆಧಾರಿತ ತರಬೇತಿ ಬಗ್ಗೆ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಹೇಶ್‌ಕುಮಾರ್ ಪರಿಚಯಿಸಿದರು.ನಂತರ ತಂಡವು ಇನ್‌ಪೋಸಿಸ್ ಜಾಗತಿಕ ತರಬೇತಿ ಕೇಂದ್ರ ಮೈಸೂರು ಇಲ್ಲಿಗೆ ಭೇಟಿ ನೀಡಿತ್ತು. ಇನ್‌ಪೋಸಿಸ್ ಸಂಸ್ಥೆಯ ಪರಿಚಯವನ್ನು ಸಂದೀಪ್ ಆಚಾರ್ ನಡೆಸಿಕೊಟ್ಟರು. ನಂತರ ತಂಡವು ಮೈಸೂರು ಮಹಾನಗರ ಪಾಲಿಕೆಗೆ ಭೇಟಿ ನೀಡಿತು. ನಂಜುಂಡಸ್ವಾಮಿ, ಸಾಂಖಿಕ ಅಧಿಕಾರಿ, ಮೈಸೂರು ಮಹಾನಗರ ಪಾಲಿಕೆ ಪ್ರಸ್ತುತ ಆಡಳಿತ ಸುಧಾರಣಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷತೆಗಳ ಮೂಲಕ ಪರಿಚಯಿಸಿದರು. ನೇಪಾಳಿ ತಂಡವು ಮಾರ್ಚ್ 10ರಂದು ಮೈಸೂರಿನ ಮೃಗಾಲಯದಲ್ಲಿ ಪ್ರತಿದಿನ 1.5 ಟನ್ ಎರೆಹುಳು ಗೊಬ್ಬರದ ಘಟಕಕ್ಕೆ ಭೇಟಿ ನೀಡಿ ಮೃಗಾಲಯದ ಪರಿಸರ ಶಿಕ್ಷಕ ಸೋಮಶೇಖರ್ ಅವರಿಂದ ಘಟಕದ ವಿವರಗಳನ್ನು ಪಡೆದರು. ನಂತರ ತಂಡವು ಶ್ರೀರಂಗಪಟ್ಟಣದ ವಿಶೇಷ ತಹಸಿಲ್ದಾರ್ ವಿಜಯರವರ ನೇತೃತ್ವದಲ್ಲಿ ಅಲ್ಲಿನ ಐತಿಹಾಸಿಕ ಸ್ಥಳಗಳು ಮತ್ತು ದೇವಸ್ಥಾನಕ್ಕೆ ಭೇಟಿ ನೀಡಿ ದೆಹಲಿಗೆ ಪ್ರಯಾಣಿಸಿತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X