ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರ‌್ಯಾಗ್ ಮಾಡುವವರಿಗೆ ಯಾವ ಶಿಕ್ಷೆ ನೀಡಬೇಕು?

By Staff
|
Google Oneindia Kannada News

Ragging victim
*ಮೃತ್ಯುಂಜಯ ಕಲ್ಮಠ

ರ‌್ಯಾಗಿಂಗ್ ಸಮಾಜಕ್ಕೆ ಅಂಟಿರುವ ಬಹುದೊಡ್ಡ ಪಿಡುಗು. ಇದರ ಭೀಕರತೆಗೆ ನೂರಾರು ಅಮಾಯಕ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿದರೂ ಇನ್ನೂ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಪೋಷಕರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ರ‌್ಯಾಗಿಂಗ್ ಎಂದ ತಕ್ಷಣ ಬೆಚ್ಚಬೀಳುವ ಅನೇಕ ವಿದ್ಯಾರ್ಥಿಗಳು ನಮ್ಮ ಕಣ್ಮುಂದೆ ಇದ್ದಾರೆ. ಇತ್ತೀಚೆಗೆ ಇದರ ಭೀಕರತೆಗೆ ಅಮಾಯಕ ವಿದ್ಯಾರ್ಥಿಯೊಬ್ಬ ಬಲಿಯಾಗಿರುವ ಕರುಳ ಹಿಂಡುವ ಸುದ್ದಿಯೊಂದು ಇತ್ತೀಚೆಗೆ ಹಿಮಾಚಲ ಪ್ರದೇಶದ ರಾಜೇಂದ್ರ ಪ್ರಸಾದ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದಿದೆ. ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ಅಮನ್ ಖಚ್ರೋ ಎಂಬಾತನನ್ನು ಹಿರಿಯ ವಿದ್ಯಾರ್ಥಿಗಳು ತೀವ್ರವಾಗಿ ಥಳಿಸಿದ್ದರಿಂದ ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ. ಇದು ಲೋಕಸಭೆ ಚುನಾವಣೆ ಮಾದರಿಯಲ್ಲೇ ದೇಶದಾದ್ಯಂತ ಅತ್ಯಂತ ಚರ್ಚಿತವಾಗುತ್ತಿರುವ ವಿಷಯವಾಗಿದೆ.

ಉನ್ನತ ವಿದ್ಯಾಭ್ಯಾಸದ ಕನಸು ಹೊತ್ತು ನೂರೆಂಟು ಜಂಜಡಗಳನ್ನು ಬದಿಗೊತ್ತಿ ಹಗಲಿರುಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಅಭ್ಯಾಸ ಮಾಡಿ ವೃತ್ತಿಪರ ಕಾಲೇಜುಗಳಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳುವುದು ಒಂದು ಸಾಧನೆಯೇ ಸರಿ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಈ ಸಾಧನೆಯನ್ನು ಅಷ್ಟು ಸರಳ ಸಾಧ್ಯವಲ್ಲ. ಆದರೆ, ಆಸೆ-ಕನಸು ಹೊತ್ತು ಕಾಲೇಜು ಮೆಟ್ಟಿಲು ತುಳಿದರೆ, ಅಲ್ಲಿ ದೆವ್ವದಂತೆ ತಲಬಾಗಿಲನಲ್ಲಿ ನಿಂತಿರುತ್ತಾರೆ ಹಿರಿಯ ವಿದ್ಯಾರ್ಥಿಗಳು. ಅವರು ಹೇಳಿದ ಹಾಗೆ ನಡೆದುಕೊಂಡರೆ ಸರಿ. ಇಲ್ಲದಿದ್ದರೆ, ಕಿರಿಯ ವಿದ್ಯಾರ್ಥಿಯ ಓದು ಅಲ್ಲಿಗೆ ಮುಗಿಯಿತು ಅನ್ನಬೇಕು. ಇಂತಹ ವಾತಾವರಣವನ್ನು ಸೃಷ್ಟಿಸಲಾಗಿದೆ. ರ‌್ಯಾಗಿಂಗ್ ತೀವ್ರತೆಗೆ ಅನೇಕ ವಿದ್ಯಾರ್ಥಿಗಳು ಮಾನಸಿಕ ಅಸ್ವಸ್ಥರಾಗಿರುವುದು ಇದೆ.

ಶೋಕಿಗಾಗಿ ನಡೆಯುತ್ತಿದ್ದ ರ್ಯಾಗಿಂಗ್ ಪೀಡೆ, ಇತ್ತಿತ್ತಲಾಗಿ ಹಿರಿಯ ವಿದ್ಯಾರ್ಥಿಗಳ ಕಿರುಕುಳ ಅತಿಯಾಯಿತು. ಇದರ ನೋವು ತಾಳಲಾರದ ಕಿರಿಯ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಸಾಕಷ್ಟಿವೆ. ಓದನ್ನೇ ಕೈಬಿಟ್ಟ ನೂರೆಂಟು ಪ್ರಕರಣಗಳು ಇವೆ. ಇಷ್ಟಾದರೂ ಕೂಡ ಅವ್ಯಾಹತವಾಗಿ ಮುಂದುವರೆಯತೊಡಗಿವೆ. ಭಾರತದಾದ್ಯಂತ ಇರುವ ವೃತ್ತಿಪರ ಕಾಲೇಜ್ ಗಳಲ್ಲಿ ಇದು ಹೆಚ್ಚಾಗಿದೆ ಎಂದು ಅಂಕಿ ಅಂಶಗಳು ದೃಢಪಡಿಸುತ್ತವೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಇತ್ತೀಚೆಗೆ ಬಿಜಾಪುರದ ಬಿಎಲ್ ಡಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿನಿಯನ್ನು ಹಿರಿಯ ವಿದ್ಯಾರ್ಥಿಗಳು ಲೈಂಗಿಕ ಕಿರುಕುಳ ನಡೆಸಿ ಮೂರು ದಿನ ಅನ್ನ, ನೀರು ನೀಡದೆ ಕೂಡಿಹಾಕಿರುವುದು ಬೆಳಕಿಗೆ ಬಂದಿತ್ತು. ಅಲ್ಲದೆ, ಹಾಸನದ ನರ್ಸಿಂಗ್ ಕಾಲೇಜಿನಲ್ಲಿ ರ‌್ಯಾಗಿಂಗ್ ಹಾವಳಿ ಹೊರಬಂದಿತ್ತು. ದಕ್ಷಿಣ ಭಾರತದಲ್ಲಿ ಅಂಧ್ರಪ್ರದೇಶದ ವಿದ್ಯಾರ್ಥಿಗಳು ಹೆಚ್ಚಾಗಿ ರ‌್ಯಾಗಿಂಗ್ ಮಾಡುತ್ತಾರೆ ಎನ್ನುವುದು ಅಂಕಿ ಅಂಶಗಳು ಹೇಳುತ್ತವೆ. ರ‌್ಯಾಗಿಂಗ್ ಗೆ ಕಾಲೇಜ್ ಗಳ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ಕಡಿವಾಣ ಹಾಕುವ ದೃಷ್ಟಿಯಿಂದ ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಆದರೆ, ಅದರಿಂದ ಏನು ಪ್ರಯೋಜನವಾಗಿಲ್ಲ ಎನ್ನುವುದು ಸುದ್ದಿ ಬಿಡಿ.

ರ‌್ಯಾಗಿಂಗ್ ಗೆ ಸಂಬಂಧಿಸಿದಂತೆ ದಕ್ಷಿಣ ಭಾರತ ಮತ್ತು ಉತ್ತರ ಭಾರತಕ್ಕೆ ಹೋಲಿಸಿದರೆ, ಇದು ಉತ್ತರ ಭಾರತದ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ದಕ್ಷಿಣ ಭಾರತದಲ್ಲಿ ಇದು ಕಡಿಮೆ ಇದೆ ಎಂದರೂ ಕೂಡ ಕರ್ನಾಟಕ, ಅಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿರುವ ವೃತ್ತಿಪರ ಕಾಲೇಜುಗಳಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳು ತುಂಬಿಕೊಂಡಿದ್ದರಿಂದ ದಕ್ಷಿಣ ಭಾರತದಲ್ಲೂ ಇದರ ವಾತಾವರಣ ಇದೆ ಎನ್ನುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ.

ರ‌್ಯಾಗಿಂಗ್ ಗೆ ಪರಿಹಾರ?
ರ‌್ಯಾಗಿಂಗ್ ನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಣಿಮಿಸಿವೆ. ಆದರೆ, ಪರಿಣಾಮಕಾರಿಯಾಗಿ ಜಾರಿ ತರಲು ವಿಫಲವಾಗಿವೆ ಎನ್ನಬಹುದು. ಇದರ ಪೈಶಾಚಿಕತೆಗೆ ಅಮಾಯಕ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ತಪ್ಪಿಸಲು ಸರ್ಕಾರ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕಿದೆ.

ನಾವು ಹಿರಿಯ ವಿದ್ಯಾರ್ಥಿಗಳು ಕಿರಿಯ ನಮಗೆ ಸಲಾಮ್ ಹೊಡೆಯಬೇಕು ಎಂಬ ಮನಸ್ಥಿತಿ ಹೊಂದಿರುವ ವಿದ್ಯಾರ್ಥಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆರೋಪಿಯನ್ನು ಗಲ್ಲಿಗೇರಿಸುವುದು, ಜೀವಾವಧಿ ಶಿಕ್ಷೆ ನೀಡುವುದು ಅಷ್ಟು ಸಮಂಜಸ ಅಲ್ಲ ಎಂದು ಖಂಡಿತವಾಗಿ ಹೇಳಬಹುದು.

ಹಾಗಾದರೆ ಏನು ಮಾಡಬೇಕು. ರ‌್ಯಾಗಿಂಗ್ ನಡೆಸಿ ಬಂಧಿತರಾಗಿರುವ ವಿದ್ಯಾರ್ಥಿಗಳಿಗೆ ಕನಿಷ್ಠ ಮೂರರಿಂದ ಐದು ವರ್ಷಗಳ ಶಿಕ್ಷೆ. ಇದು ಮೊದಲ ಪ್ರಥಮ ಹಂತದ ಶಿಕ್ಷೆ. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಇಲ್ಲವೆ ಖಾಸಗಿ ಸಂಸ್ಥೆಗಳ ಮೂಲಕ ಆರೋಪಿಗೆ ಕೌನ್ಸಲಿಂಗ್ ನೀಡಬೇಕು. ಇಷ್ಟಾಗಿಯೂ ಅದೇ ವಿದ್ಯಾರ್ಥಿ ಮತ್ತೆ ಇದೇ ಆರೋಪದ ಮೇಲೆ ಕಾನೂನಿನಡಿಯಲ್ಲಿ ಸಿಕ್ಕಿಬಿದ್ದರೆ, ಆತನಿಗೆ ಕ್ಷಮೆ ಅಸಾಧ್ಯ. ಮುಖ್ಯವಾಗಿ ಆತನಿಗೆ ದೇಶದ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ನಿರಾಕರಿಸಬೇಕು. ಹಾಗೂ ಸರ್ಕಾರಿ ಉದ್ಯೋಗಕ್ಕೆ ಅನರ್ಹಗೊಳಿಸಬೇಕು. ಹಿರಿಯ ವಿದ್ಯಾರ್ಥಿಗಳ ನಾವು ಎಂದು ಬಿಗುವ ದರಿದ್ರರಿಗೆ ಈ ರೀತಿಯಿಂದಲಾದರೂ ಬುದ್ಧಿಬರಬಹುದೇನೂ ?

ಪೂರಕ ಓದಿಗೆ: ಹಿಮಾಚಲ ಪ್ರದೇಶ ರ‌್ಯಾಗಿಂಗ್ ಗೆ ವಿದ್ಯಾರ್ಥಿ ಬಲಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X