ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒರಿಸ್ಸಾ ಸರ್ಕಾರಕ್ಕೆ ವಿಶ್ವಾಸಮತದಲ್ಲಿ ಗೆಲವು

By Staff
|
Google Oneindia Kannada News

Naveen Patnaik govt wins trust vote in Orissa
ಭುವನೇಶ್ವರ, ಮಾ. 11 : ಒರಿಸ್ಸಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅಗ್ನಿಪರೀಕ್ಷೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಕೊನೆಗೂ ತೀವ್ರ ಕೋಲಾಹಲ ಸೃಷ್ಟಿಸಿದ್ದ ಒರಿಸ್ಸಾ ಸರ್ಕಾರದ ವಿಶ್ವಾಸಮತದಲ್ಲಿ ಬಿಜೆಡಿ ನೇತೃತ್ವಕ್ಕೆ ಸರ್ಕಾರ ಅಗತ್ಯ ಸಂಖ್ಯಾಬಲ ತೋರಿಸಲು ಸಫಲವಾಗಿದೆ. ತೃತೀಯ ರಂಗದ ಅಂಗ ಪಕ್ಷಗಳು ಸರ್ಕಾರದ ಕೈ ಹಿಡಿದಿದ್ದರಿಂದ ಸರ್ಕಾರ ಅಪಾಯದಿಂದ ಪಾರಾಗಿದೆ. ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ವಿಶ್ವಾಸಮತ ಪಾದದರ್ಶಕವಾಗಿಲ್ಲ ಎಂದು ಪ್ರತಿಭಟನೆ ನಡೆಸಿವೆ.

147 ಮಂದಿ ಶಾಕರನ್ನು ಹೊಂದಿರುವ ಒರಿಸ್ಸಾ ವಿಧಾನಸಭೆಗೆ ಸರ್ಕಾರ ರಚಿಸಲು 74 ಶಾಸಕರ ಸಂಖ್ಯಾಬಲ ಬೇಕಿತ್ತು. 61 ಮಂದಿ ಬಿಜೆಡಿ ಶಾಸಕರು, 2 ಮಂದಿ ಜೆಎಂಎಂ, 1 ಸಿಪಿಎಂ, 1 ಸಿಪಿಐಎಂ, 6 ಮಂದಿ ಪಕ್ಷೇತರರು ಹಾಗೂ 3 ಮಂದಿ ಬಿಜೆಪಿ ಬಂಡಾಯ ಶಾಸಕರ ನೆರವಿನಿಂದ ನವೀನ ಪಟ್ನಾಯಕ್ ನೇತೃತ್ವದ ಸರ್ಕಾರ ಗೆಲುವಿನ ನಗೆ ಬೀರಿತು. ಈ ಹಿಂದೆ 61 ಬಿಜೆಡಿ ಹಾಗೂ 32 ಬಿಜೆಪಿ ಶಾಸಕರು ಸೇರಿ ಸರ್ಕಾರ ರಚನೆ ಮಾಡಿದ್ದರು.

ಒರಿಸ್ಸಾ ರಾಜ್ಯ ರಾಜಕಾರಣ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಇಂದಿನ ವಿಶ್ವಾಸಮತದ ಮೇಲಿನ ವಿಶೇಷ ಅಧಿವೇಶನ ಆರೋಪ ಪ್ರತ್ಯಾರೋಪಗಳ ಮೂಲಕ ಗೊಂದಲ ಗೂಡಾಗಿ ಪರಿಣಮಿಸಿತ್ತು. ಬಿಜೆಪಿ ಜೊತೆಗಿನ ಮೈತ್ರಿಯನ್ನು ಹಿಂತೆಗೆದುಕೊಂಡಿರುವ ಕ್ರಮವನ್ನು ವಿರೋಧಿಸಿ ಕೆಲ ಶಾಸಕರ ವಿಧಾನಸಭಾಧ್ಯಕ್ಷ ಕಡೆಗೆ ಕುರ್ಚಿಎಸೆದ ಪ್ರಕರಣ ನಡೆದಿದ್ದರಿಂದ ಅಧಿವೇಶನವನ್ನು ಮಧ್ಯಾಹ್ನ 2 ಗಂಟೆಯ ವರೆಗೆ ಮುಂದೂಡಲಾಯಿತು.

ಬಿಜೆಪಿ ತೃತೀಯ ರಂಗದೊಂದಿಗೆ ಗುರುಸಿತಿಕೊಂಡ ಹಿನ್ನೆಲೆಯಲ್ಲಿ ಸರ್ಕಾರ ವಿರುದ್ಧ ಮತ ಚಲಾಯಿಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿಜು ಪಟ್ನಾಯಕ್ ಸ್ಪಷ್ಟಪಡಿಸಿದ್ದರು. ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡು ಹೊರ ನಡೆದಿರುವ ನವೀನ ಪಟ್ನಾಯಕ್ ಅವರಿಗೆ ಇಂದಿನ ಅಧಿವೇಶನ ದೊಡ್ಡ ಸವಾಲು ಎನ್ನಲಾಗಿತ್ತು.

(ದಟ್ಸ್ ಕನ್ನಡ ವಾರ್ತೆ)
ಒರಿಸ್ಸಾ, ಇಂದು ನವೀನ ಪಟ್ನಾಯಕ್ ಹಣೆಬರಹ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X