ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಸ್ಥಿತಿಗತಿ ಸುಧಾರಿಸುವ ಲಕ್ಷಣಗಳಿಲ್ಲ, ಐಎಂಎಫ್

By Staff
|
Google Oneindia Kannada News

ದಾರಸ್-ಸಲಾಮ್, ಮಾ. 10 : ಆರ್ಥಿಕ ಬಿಕ್ಕಟ್ಟಿನ ಭಾರಿ ಹೊಡೆತದ ಹಿನ್ನೆಲೆಯಲ್ಲಿ ವಿಶ್ವ ಹಣಕಾಸು ಮಾರುಕಟ್ಟೆಯ ಸ್ಥಿತಿ ಗತಿ 2009 ರಲ್ಲಿ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ ನ (IMF) ಮ್ಯಾನೇಜಿಂಗ್ ಡೈರೆಕ್ಟರ್ ಡಾಮಿನಿಕ್-ಸ್ಟ್ರಾಸ್-ಕನ್ ಕಳವಳ ವ್ಯಕ್ತಪಡಿಸಿದರು.

ತಾಂಜೇನಿಯಾ ಪ್ರವಾಸದಲ್ಲಿರುವ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಜಾಗತಿಕ ಹಣಕಾಸು ಕ್ಷೇತ್ರ ಈ ವರ್ಷ ಯಾವುದೇ ಬೆಳವಣಿಗೆ ಸಾಧ್ಯವಿಲ್ಲ ಎಂದರು. ಆರ್ಥಿಕ ಕುಸಿತ ತತ್ತರಿಸಿರುವ ಅನೇಕ ಉದ್ಯಮಗಳು ಮೇಲೇಳಲು ಸಾಧ್ಯವಾಗುತ್ತಿಲ್ಲ. ಇದು ಈ ಶತಮಾನ ಭಯಾನಕ ಹಣಕಾಸು ಕುಸಿತ ಎಂದರೆ ತಪ್ಪಾಗಲಾರದು ಎಂದು ಡಾಮಿನಿಕ್ ಹೇಳಿದರು.

ಜಾಗತಿಕ ಮಾರುಕಟ್ಟೆ ಉಂಟಾಗಿರುವ ಆರ್ಥಿಕ ಕುಸಿದದಿಂದ ಉದ್ಯಮಿದಾರರು ಹಾಗೂ ಗ್ರಾಹಕರನ್ನು ಕೆಂಗಡಿಸಿರುವುದು ಸುಳ್ಳಲ್ಲ. ಇದರಿಂದಾಗಿ ವ್ಯವಹಾರಗಳು ಕುಂಠಿತಗೊಂಡಿದ್ದು, ವಹಿವಾಟಿನ ಮೇಲಿನ ವಿಶ್ವಾಸ ಹೊರಟು ಹೋಗಿದೆ ಎಂದು ಅವರು ಬೇಸರದಿಂದ ಹೇಳಿದರು. ಎರಡನೇ ಮಹಾಯುದ್ಧದ ನಂತರ ವಿಶ್ವ ಕಂಡ ಅತ್ಯಂತ ಭೀಕರ ಅರ್ಥಿಕ ಕುಸಿತ ಎಂದು ವಿಶ್ವಬ್ಯಾಂಕ್ ಭಾನುವಾರ ಹೇಳಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X