ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಪುತ್ರ ವ್ಯಾಮೋಹಿ, ಮುತಾಲಿಕ್ ಟೀಕೆ

By Staff
|
Google Oneindia Kannada News

B Y Raghavendra
ಚಿಕ್ಕಮಗಳೂರು, ಮಾ. 8 : ಯಡಿಯೂರಪ್ಪ ಪುತ್ರ ರಾಘವೇಂದ್ರನಿಗೆ ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅನುಭವವೂ ಇಲ್ಲ, ಅರ್ಹತೆಯೂ ಇಲ್ಲ ಎಂದು ಶ್ರೀರಾಮಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ದೇಶ ಮುನ್ನೆಡೆಸುವ ಮಹತ್ವದ ಸ್ಥಾನಕ್ಕೆ ರಾಘವೇಂದ್ರ ಸ್ಪರ್ಧಿಸುವುದು ಉಚಿತವಲ್ಲ ಎಂದು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪುತ್ರ ವ್ಯಾಮೋಹ ಇತರರಿಗಿಂತ ಮೀಗಿಲಾಗಿದ್ದು ಎಂದು ಲೇವಡಿ ಮಾಡಿದ್ದಾರೆ. ಸಂಸದ ಸ್ಥಾನ ದೇಶದ ರಾಜಕೀಯದಲ್ಲಿ ಅತ್ಯಂತ ಮಹತ್ವವಿದೆ. ಅದಕ್ಕೆ ಅದರದೆ ಆಗಿರುವ ಘಟನೆ, ಗೌರವವಿದೆ ಎಂದ ಮುತಾಲಿಕ್, ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸಲಿರುವ ರಾಘವೇಂದ್ರನಿಗೆ ಯಾವ ಅರ್ಹತೆ ಇದೆ ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಪ್ರೇಮಕ್ಕೆ ಇಳಿದಿರುವುದು ಖಂಡನೀಯ ಹಾಗೂ ಸಂಪೂರ್ಣ ತಪ್ಪು ನಿರ್ಧಾರ ಎಂದು ಅವರು ಟೀಕಿಸಿದರು. ಇದಕ್ಕೂ ಮುಂಚೆ, ರಾಘವೇಂದ್ರ ಸ್ಪರ್ಧೆಗೆ ಸಂಬಂಧಿಸಿದಂತೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ದೇವೇಗೌಡ ಸೇರಿದಂತೆ ಕಾಂಗ್ರೆಸ್ ನಾಯಕರು ಕೇಕೆ ಹಾಕಿ ಟೀಕಿಸಿದ್ದಾರೆ. ಬಿಜೆಪಿ ಪಕ್ಷದ ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ ಹಾಗೂ ಸದಾನಂದಗೌಡ ಅವರ ವರ್ತನೆಗೆ ಕೆರಳಿ ನಿಂತಿದ್ದಾರೆ. ಇದೀಗ ಮುತಾಲಿಕ್ ಸರದಿ. ಒಟ್ಟಿನಲ್ಲಿ ರಾಘವೇಂದ್ರನ ಸ್ಪರ್ಧೆ ಯಡಿಯೂರಪ್ಪನವರಿಗೆ ಪ್ರತಿ ದಿನವೂ ನೂರೆಂಟು ಟೀಕೆ ಟಿಪ್ಪಣಿಗಳಿಗೆ ಆಹಾರವಾಗುತ್ತಿರುವುದು ಸುಳ್ಳಲ್ಲ.

(ದಟ್ಸ್ ಕನ್ನಡ ವಾರ್ತೆ)
ರಾಘವೇಂದ್ರನಿಗೆ ಟಿಕೆಟ್ ಸಮರ್ಥಿಸಿಕೊಂಡ ಸಿಎಂ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X