ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಮರ್ಜಿಯಂತೆ ಇಗರ್ಜಿ, ಮಂದಿರ ಕಟ್ಟುವಂತಿಲ್ಲ

By Staff
|
Google Oneindia Kannada News

No church, temple or masjid in public sites: HC
ಬೆಂಗಳೂರು, ಮಾ.7: ಮಂದಿರ, ಮಸೀದಿ ಮತ್ತು ಇಗರ್ಜಿಗಳನ್ನು ಸಾರ್ವಜನಿಕ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಹೇಳಿದೆ. ಈ ಸಂಬಂಧ ಎರಡು ವಾರಗಳಲ್ಲಿ ರಾಜ್ಯ ಸರ್ಕಾರ ಏಕರೀತಿಯ ನಿರ್ಧಾರಕ್ಕೆ ಬರಬೇಕು ಎಂದು ಗಡುವು ವಿಧಿಸಿದೆ. ಮಂದಿರ, ಮಸೀದಿ, ಚರ್ಚುಗಳು ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡಿರುವ ಬಗ್ಗೆ ಏನು ಕ್ರಮಕೈಗೊಂಡಿದ್ದೀರಿ ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

''ಕಡುಬಡವನೊಬ್ಬ ಒಂದು ತುಂಡು ಭೂಮಿಯನ್ನು ಒತ್ತುವರಿ ಮಾಡಿದರೆ ಅದನ್ನೇ ದೊಡ್ಡ ವಿಷಯ ಮಾಡುತ್ತೀರಿ. ಅದೇ ದೇವರ ಹೆಸರಿನಲ್ಲಿ ಭೂಮಿ ಕಬಳಿಸಿದರೆ ನೀವು ಕಣ್ಮುಚ್ಚಿ ಸುಮ್ಮನಿರುತ್ತೀರಿ. ಕಾನೂನು ಎಲ್ಲರಿಗೂ ಒಂದೇ. ದೇವರಾದರೂ ಅಷ್ಟೆ ಯಾರಾದರೂ ಅಷ್ಟೇ ಕ್ರಮ ಕೈಗೊಳ್ಳಿ" ಎಂದು ಹೈಕೋರ್ಟ್ ಆಜ್ಞೆ ಮಾಡಿದೆ.

"ಸಾರ್ವಜನಿಕ ಸ್ಥಳಗಳಲ್ಲಿ ಮಸೀದಿ, ಮಂದಿರ ಅಥವಾ ಚರ್ಚು ಇರಬಾರದು. ಇದು ನ್ಯಾಯಾಲಯದ ನಿರ್ಧಾರ. ಈ ವಿಷಯದಲ್ಲಿ ಭಾವನಾತ್ಮಕ ವಿಷಯಗಳನ್ನು ಬದಿಗಿಟ್ಟು ಕಠಿಣ ಕ್ರಮ ಕೈಗೊಳ್ಳಿ " ಎಂದು ಮುಖ್ಯ ನಾಯಾಧೀಶರನ್ನು ಒಳಗೊಂಡ ವಿಭಾಗೀಯ ಪೀಠ ಕಟ್ಟುನಿಟ್ಟಾಗಿ ಹೇಳಿದೆ. ಓಕಳಿಪುರಂನ ಲಕ್ಷ್ಮಣರಾವ್ ಉದ್ಯಾನವನವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X