ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಸ್ಫೋಟ: ಪ್ರಮುಖ ಉಗ್ರನ ಸೆರೆ

By Staff
|
Google Oneindia Kannada News

Bengaluru serial blast kingpin held
ಬೆಂಗಳೂರು, ಮಾ.7: ಬೆಂಗಳೂರು ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಕಲಾಸಿ ಪಾಳ್ಯದಲ್ಲಿ ಸರ್ಫರೋಜ್ ನವಾಜ್ ಎಂಬ ಉಗ್ರನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈತನನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದರು. ಸರ್ಫರೋಜ್ ನವಾಜ್ ನನ್ನು ಮಾರ್ಚ್ 14ರವರೆಗೆ ಪೊಲೀಸ್ ಬಂಧನಕ್ಕೆ ಒಳಪಡಿಸಲಾಗಿದೆ.

ಸರ್ಫರೋಜ್ ನವಾಜ್ ಮೂಲತಃ ಕೇರಳದ ಎರ್ನಾಕುಲಂನವನು. ಈತ 2007ರಲ್ಲಿ ಬಾಂಗ್ಲಾ ಮೂಲಕ ಭಾರತ ಪ್ರವೇಶಿಸಿದ್ದ. ಲಷ್ಕರ್ ನಂತಹ ಉಗ್ರವಾದಿ ಸಂಘಟನೆಗಳ ಸಂಪರ್ಕವನ್ನು ಈತ ಹೊಂದಿದ್ದು ಸಿಮಿ ಕಾರ್ಯನಾಗಿಯೂ ಸಕ್ರಿಯನಾಗಿದ್ದ. ಕೆಲ ಕಾಲ ಸಿಮಿ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದ.

ಜುಲೈ 25, 2008ರಲ್ಲಿ ನಡೆದ ಬೆಂಗಳೂರು ಸ್ಫೋಟದಲ್ಲಿ ನವಾಜ್ ಭಾಗಿಯಾಗಿ, ಸ್ಫೋಟಕಗಳನ್ನು ಎಲ್ಲೆಲ್ಲಿ ಇಡಬೇಕು ಎಂಬುದನ್ನೂ ಈತನೇ ನಿರ್ಧರಿಸಿದ್ದ. ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ತರಬೇತಿ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನವಾಜ್ ಇನ್ನೂ ಯಾವ್ಯಾವ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂಬುದು ಪೊಲೀಸ್ ತನಿಖೆಯಿಂದ ಸಾಬೀತಾಗಬೇಕಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X