ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ಸೇವೆ, 4 ಭಾರತೀಯರು ಪೋರ್ಬ್ಸ್ ಪಟ್ಟಿಯಲ್ಲಿ

By Sunil Mittal among 4 Indians in Forbes' philanthropy heroes list
|
Google Oneindia Kannada News

Rohini Nilekani
ನ್ಯೂಯಾರ್ಕ್, ಮಾ. 5 : ಸಾಮಾಜಿಕ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿಶ್ವದ ವಿವಿಧ ಕ್ಷೇತ್ರ 48 ಪ್ರತಿಷ್ಠಿತ ವ್ಯಕ್ತಿಗಳಲ್ಲಿ ಪಟ್ಟಿಯಲ್ಲಿ ಭಾರತದ ನಾಲ್ಕು ಮಂದಿ ಸ್ಥಾನ ಪಡೆದುಕೊಂಡಿದ್ದಾರೆ. ಶಿಕ್ಷಣ, ಆರೋಗ್ಯ, ಅತಿವೃಷ್ಟಿ, ಅನಾವೃಷ್ಟಿ ಮತ್ತಿತರ ಸಾಮಾಜಿಕ ಸೇವೆಯಲ್ಲಿ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳ ಹೆಸರನ್ನು ಪ್ರತಿ ವರ್ಷ ಅಮೆರಿಕ ಪೋರ್ಬ್ಸ್ ಪತ್ರಿಕೆ ಪಟ್ಟಿ ಬಿಡುಗಡೆ ಮಾಡುತ್ತಿದೆ.

ಟೆಲಿಕಾಂನ ಉದ್ಯಮಿ ಸುನೀಲ್ ಮಿತ್ತಲ್, ಎಚ್ ಸಿ ಎಲ್ ಕಂಪನಿಯ ಚೇರಮನ್ ಶಿವ ನಾಡರ್, ಅನಿವಾಸಿ ಭಾರತೀಯ ಉದ್ಯಮಿದಾರ ಅನಿಲ್ ಅಗರ್ ವಾಲ್ ಹಾಗೂ ಇನ್ ಫೋಸಿಸ್ ನ ರೋಹಿಣಿ ನಿಲೇಕಣಿ ಅವರು 2008ರಲ್ಲಿ ಮಾಡಿದ ಸಾಮಾಜಿಕ ಸೇವೆ ಪರಿಗಣಿಸಿ ಪೋರ್ಬ್ಸ್ ಪತ್ರಿಕೆ ಬಿಡುಗಡೆ ಮಾಡುವ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ಮೈನ್ಮಾರ್, ಇಂಡೋನೇಷಿಯಾದಲ್ಲಿ ಸಂಭವಿಸಿದ ಭೂಕಂಪದಿಂದ ಸಂತ್ರಸ್ಥರಾದವರಿಗೆ ಧನಸಹಾಯ, ಅತಿವೃಷ್ಟಿ, ಅನಾವೃಷ್ಟಿಗೊಳಗಾದ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳು ಒದಗಿಸುವುದು, ಶಿಕ್ಷಣ, ಆರೋಗ್ಯ, ಸಂಸ್ಕತಿಗಳ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಇನ್ ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರ ಪತ್ನಿ ರೋಹಿಣಿ ನಿಲೇಕಣಿ ಅವರ ಎನ್ ಜಿಒ ಮೂಲಕ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X