ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ 2ನೇ ಪಟ್ಟಿ ಪ್ರಕಟ, ರಾಘು ಸ್ಪರ್ಧೆ

By Staff
|
Google Oneindia Kannada News

BY Raghavendra gets ls poll ticket
ನವದೆಹಲಿ, ಮಾ. 5 : ಕಳೆದ ಒಂದು ತಿಂಗಳಿಂದ ತೀವ್ರ ಕುತೂಹಲ ಸೃಷ್ಟಿಸಿದ್ದ ಟಿಕೆಟ್ ಹಂಚಿಕೆಗೆ ಗುರುವಾರ ಕೊನೆಗೂ ಅಂತಿಮ ತೆರೆ ಬಿದ್ದಿದೆ. ನಿರೀಕ್ಷೆಯಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೆಲ್ಲುವ ಕುದುರೆಗೆ ಮಣೆ ಹಾಕಿರುವ ಬಿಜೆಪಿ ಹೈಕಮಾಂಡ್ ಶಿವಮೊಗ್ಗ ಕ್ಷೇತ್ರದಿಂದ ರಾಘವೇಂದ್ರನೇ ಸೂಕ್ತ ಅಭ್ಯರ್ಥಿ ಎಂದು ಪರಿಗಣಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಈ ಮೂಲಕ ಯಡಿಯೂರಪ್ಪ ಅವರ ಆಸೆ ಈಡೇರಿತು ಎನ್ನಬಹುದು.

ಅಲ್ಲದೇ, ಲೋಕೋಪಯೋಗಿ ಸಚಿವ ಸಿಎಂ ಉದಾಸಿ ಪುತ್ರ ಶಿವಕುಮಾರ್ ಉದಾಸಿ, ಆರೋಗ್ಯ ಸಚಿವ ಆರ್ ಶ್ರೀರಾಮುಲು ಸಹೋದರಿ ಜೆ ಶಾಂತಮ್ಮ ಹಾಗೂ ಪೌರಾಡಳಿತ ಸಚಿವ ಉಮೇಶ ಕತ್ತಿ ಸಹೋದರ ರಮೇಶ್ ಕತ್ತಿ ಅವರು ಚಿಕ್ಕೋಡಿಯಿಂದ ಸ್ಪರ್ಧಸಲಿದ್ದಾರೆ ಎನ್ನುವುದು ವಿಶೇಷ. ಈ ಮೂಲಕ ಬಿಜೆಪಿ ಕೂಡ ಕುಟುಂಬ ರಾಜಕಾರಣದಿಂದ ಹೊರತಲ್ಲ ಎನ್ನುವುದು ಸಾಬೀತಾಗಿದೆ.

* ಶಿವಮೊಗ್ಗ - ರಾಘವೇಂದ್ರ (ಸಿಎಂ ಪುತ್ರ)
* ರಾಯಚೂರು - ರಾಜಾ ಅಮರೇಶ ನಾಯಕ್
* ಬೀದರ್ - ಗುರುಪಾದಪ್ಪ ನಾಗಮಾರಪಲ್ಲಿ
* ತುಮಕೂರು - ಜಿ ಎಸ್ ಬಸವರಾಜು
* ದಕ್ಷಿಣ ಕನ್ನಡ - ನಳಿನ್ ಕುಮಾರ್ ಕಟೀಲು
* ಗುಲ್ಬರ್ಗಾ - ರೇವು ನಾಯಕ ಬೆಳಮಗಿ
* ಚಾಮರಾಜನಗರ - ಎ ಆರ್ ಕೃಷ್ಣಮೂರ್ತಿ
* ಬಳ್ಳಾರಿ - ಜೆ ಶಾಂತಿ (ಸಚಿವ ಶ್ರೀರಾಮುಲು ಸಹೋದರಿ)
* ಕೊಪ್ಪಳ - ಶಿವರಾಮಗೌಡ
* ಹಾವೇರಿ - ಶಿವಕುಮಾರ್ ಉದಾಸಿ
* ಚಿಕ್ಕೋಡಿ - ರಮೇಶ್ ಕತ್ತಿ

(ದಟ್ಸ್ ಕನ್ನಡ ವಾರ್ತೆ)
ಗೌಡ್ರನ್ನ ಅದ್ಯಾವ ಬಾಯಲ್ಲಿ ಬೈತೀರಾ ಬಿಎಸ್ ವೈ?
ಸಿಎಂ ಮಗನಿಗೆ ಟಿಕೆಟ್, ಭುಗಿಲೆದ್ದ ಅಸಮಾಧಾನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X