ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು, ವಿದ್ಯಾರ್ಥಿನಿಗೆ ಕಿರುಕುಳ ಆತ್ಮಹತ್ಯೆ ಯತ್ನ

By Staff
|
Google Oneindia Kannada News

Amrita Vidyalaya girl student s suicide bid, Protest, star of mysore
ಮೈಸೂರು, ಮಾ. 5 : ಕಾಲೇಜ್ ಆಡಳಿತಾಧಿಕಾರಿಯ ಕಿರುಕುಳ ತಾಳಲಾರದೇ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಬೋಗಾದಿ ಎರಡನೇ ಹಂತದಲ್ಲಿರುವ ಮಾತಾ ವಿದ್ಯಾಲಯದ ಹಾಸ್ಟೆಲ್ ನಲ್ಲಿ ಗುರುವಾರ ನಡೆದಿದೆ. ಅಡಳಿತಾಧಿಕಾರಿ ಕ್ರಮ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದರಿಂದ ಕೆಲ ಕಾಲ ಕಾಲೇಜು ಆವರಣದಲ್ಲಿ ಉದ್ವಿಗ್ನ ವಾತಾವರಣ ಉಂಟಾದ ಪ್ರಸಂಗ ನಡೆಯಿತು.

ಆಡಳಿತಾಧಿಕಾರಿ ಕಿರುಕುಳ ತಾಳಲಾರದೆ ಆತ್ಮಹತ್ಯೆ ಯತ್ನಿಸಿದವರು ಬಿಬಿಎಂ ವಿದ್ಯಾರ್ಥಿನಿ ಆರತಿ. ಮಾತಾ ವಿದ್ಯಾಲಯ ಆಡಳಿತಾಧಿಕಾರಿ ನೌಶಾದ್ ಎಂಬವವರು ವಿದ್ಯಾರ್ಥಿನಿಗೆ ಕಿರುಕುಳ ನೀಡಿದವರು ಎಂದು ಪೊಲೀಸರು ಮೂಲಗಳು ತಿಳಿಸಿವೆ. ನೌಶಾದ್ ಕ್ರಮ ವಿರೋಧಿಸಿ ಇಂದು ಬೆಳಗ್ಗೆ ಸುಮಾರು 300 ವಿದ್ಯಾರ್ಥಿಗಳು ಪ್ರತಿಭಟನೆ ಮುಂದಾಗಿದ್ದರು. ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಅಡಳಿತಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕೆಲ ಹೊತ್ತು ಕಾಲೇಜು ಆವರಣದಲ್ಲಿ ಪರಿಸ್ಥಿತಿ ಉಂಟಾಗಿತ್ತು.

ಕೊಡಗಿನವರಾದ ಆರತಿ ಅವರಿಗೆ ಸುಮಾರು 6 ತಿಂಗಳಿಂದ ಆಡಳಿತಾಧಿಕಾರಿ ನೌಶಾದ್ ತೀವ್ರ ಕಿರುಕುಳ ನೀಡುತ್ತಿದ್ದ. ಇದನ್ನು ತಾಳಲಾರದೆ ಆರತಿ ಸೋಮವಾರ ಸಂಜೆ ತನ್ನ ತಂದೆ ದೂರವಾಣಿ ಮೂಲಕರ ಸಂಪರ್ಕಿಸಿ ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಳು ಎಂದು ಆಕೆಯ ಸಹಪಾಠಿಗಳು ತಿಳಿಸಿದ್ದಾರೆ. ಆರತಿ ತಂದೆ ಚೆಂಗಪ್ಪ ಕಾಲೇಜ್ ಆಡಳಿತ ಮಂಡಳಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ನಗರದ ಬಿ ಎಂ ಆಸ್ಪತ್ರೆಯಲ್ಲಿ ದಾಖಲಾಗಿರುವ ಆರತಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X